ಮಡಿಕೇರಿ: ಕೊಡವರಿಗಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಪ್ರತ್ಯೇಕ ಮತ ಕ್ಷೇತ್ರ ಹಾಗೂ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಆರಂಭಿಸಿರುವ 48 ಗಂಟೆಗಳ ಕಾಲದ ಅಹೋರಾತ್ರಿ ಧರಣಿ 2ನೇ ದಿನವಾದ ಬುಧವಾರವೂ ಮುಂದುವರಿಯಿತು.

ಇಲ್ಲಿನ ಕೊಡವ ಮಂದ್ನಲ್ಲಿ ನಡೆಯುತ್ತಿರುವ ಧರಣಿಗೆ ಹಲವು ಮುಖಂಡರು ಬುಧವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಧರಣಿಯ ಕೊನೆಯ ದಿನವಾದ ಗುರುವಾರ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಧರಣಿಯ 2ನೇ ದಿನ ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತ ಡಾ.ಮಾತಂಡ ಅಯ್ಯಪ್ಪ ಹಾಗೂ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಅವರು ಸ್ಥಳಕ್ಕೆ ಬಂದು, ಕೊಡವರ ರಾಜಕೀಯ ಹಕ್ಕುಗಳು ಮತ್ತು ಜನಗಣತಿ ಗುರುತಿಸುವಿಕೆಗಾಗಿ ಸಿಎನ್ಸಿ ನಡೆಸುತ್ತಿರುವ ಸಾಂವಿಧಾನಿಕ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು ಎಂದು ಅವರು ಹೇಳಿದ್ದಾರೆ.

‘ಜನಗಣತಿಯು ನಮ್ಮ ಭವಿಷ್ಯದ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸುತ್ತದೆ. ಪ್ರತ್ಯೇಕ ಕೋಡ್ ಇಲ್ಲದಿದ್ದರೆ, ಕೊಡವರು ಅಂಕಿಅಂಶಗಳ ಪ್ರಕಾರ ಅದೃಶ್ಯರಾಗುತ್ತಾರೆ. ರಾಜಕೀಯ ಪ್ರಾತಿನಿಧ್ಯ ಮತ್ತು ಬುಡಕಟ್ಟು (ಎಸ್.ಟಿ) ಸ್ಥಾನಮಾನವು ಕೊಡವರ ವಿಶಿಷ್ಟ ಮೂಲನಿವಾಸಿ ಗುರುತಿನ ಜನಗಣತಿ ಮಾನ್ಯತೆಯ ಮೇಲೆಯೇ ಅವಲಂಬಿತವಾಗಿದೆ’ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಕ್ಷೇತ್ರ ಮರುವಿಂಗಡಣೆ ಮತ್ತು 2027ರ ಜನಗಣತಿಗಿಂತ ಮೊದಲು ಕೊಡವರ ಸಾಂವಿಧಾನಿಕ ರಕ್ಷಣೆಗಳನ್ನು ಪರಿಗಣಿಸುವಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯ ಚುನಾವಣಾ ಆಯುಕ್ತ, ಕರ್ನಾಟಕದ ಮುಖ್ಯಮಂತ್ರಿ ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಬಾಚರಣಿಯಂಡ ಚಿಪ್ಪಣ್ಣ, ನಂದೇಟಿರ ರವಿ ಸುಬ್ಬಯ್ಯ, ಅಜ್ಜಿಕುಟ್ಟಿರ ಲೋಕೇಶ್, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್ ತಿಮ್ಮಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಸಾದೇರ ರಮೇಶ್, ಪುಲ್ಲೇರ ಕಾಳಪ್ಪ, ಪಟ್ಟಮಾಡ ಕುಶ, ಚೋಳಪಂಡ ನಾಣಯ್ಯ, ಬೊಳ್ಳಾರಪಂಡ ಮಾಚಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ ಮತ್ತು ಕುಕ್ಕೆರ ಜಯ ಚಿಣ್ಣಪ್ಪ, ಕುಲ್ಲೇಟಿರ ಬೇಬ ಅರುಣ, ಅಪ್ಪನೆರವಂಡ ವಿನು, ಬಾಳೆಯಡ ಜಗದೀಶ್, ಮಣವಟ್ಟಿರ ಚಿಣ್ಣಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-809947930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.