ಸುಂಟಿಕೊಪ್ಪ: ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಘಟಕ ನೀಡುವ ‘ನೇಗಿಲಯೋಗಿ’ ಪ್ರಶಸ್ತಿಗೆ ಕುಶಾಲನಗರ ತಾಲ್ಲೂಕಿನ ನಾಲ್ವರು ಕೃಷಿಕರು ಭಾಜನಾರಾಗಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಪಿ.ಉದಯಕುಮಾರ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಮಳೂರು ನಿವಾಸಿ ಶಂಕರನಾರಾಯಣ, ಶಿರಂಗಾಲ ಗ್ರಾಮ ಪಂಚಾಯಿತಿಯ ಮಣಜೂರು ನಿವಾಸಿ ಭವಾನಿ ಕುಮಾರಸ್ವಾಮಿ, ಹಾಗೂ ಗುಡ್ಡೆಹೊಸೂರು ಪಂಚಾಯಿತಿಯ ಬಾಳುಗೋಡು ನಿವಾಸಿ ನಂಗಾರು ಜಗದೀಶ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಏ.21ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಾರ್ಯಕ್ರಮವನ್ನು ಕೊಡಗು ಪತ್ರಿಕಾಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಉದ್ಘಾಟಿಸುವರು. ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ ಅಧ್ಯಕ್ಷೆ ವಹಿಸುವರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ದತ್ತಿದಾನಿಗಳಾಗಿರುವ ಕೃಷಿಕ ಹಾಗೂ ಸಮಾಜಸೇವಕ ಟಿ.ಕೆ.ಸಾಯಿಕುಮಾರ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಸುಂಟಿಕೊಪ್ಪದ ವಿಜಯ ಪ್ಲಾಂಟೇಷನ್ ಸಪ್ಲೈಸ್ ಮಾಲೀಕ ಎಸ್.ಜಿ.ಶ್ರೀನಿವಾಸ್, ಗುಡ್ಡೆಹೊಸೂರಿನ ಉದ್ಯಮಿ ಮಂಡೆಪಂಡ ಚಿಮ್ಮ ಉತ್ತಪ್ಪ, ರಂಗಸಮುದ್ರದ ಉದ್ಯಮಿ ರಕ್ಷಿತ್ ಮಾವಾಜಿ, ಚಿಕ್ಕಬೆಟ್ಟಗೇರಿಯ ಉದ್ಯಮಿ ರಂಜಿತ್ ಎಂ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ವೃತ್ತಿ ಮಾರ್ಗದರ್ಶಕ ಆರ್.ಕೆ.ಬಾಲಚಂದ್ರ ಅವರು ‘ಕೊಡಗಿನಲ್ಲಿ ಕೃಷಿ, ಪ್ರವಾಸೋದ್ಯಮ-ಹಲವು ಆಯಾಮಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-51-423316836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.