ಸುಂಟಿಕೊಪ್ಪ (ಮಡಿಕೇರಿ): ಕೊಡಗಿನಲ್ಲಿ ಅಳಿದು ಹೋಗುತ್ತಿರುವ ಬುಡಕಟ್ಟು ಜನಾಂಗದವರ ಸಾಹಿತ್ಯ ಸಿರಿ, ಮರೆಯಾಗುತ್ತಿರುವ ಸಣ್ಣ ಸಣ್ಣ ಭಾಷೆಗಳು, ಕೊಡಗಿನ ವನರಾಶಿಯೊಳಗೆ ಮುಸುಕು ಹೊದ್ದುಕೊಂಡು ನಿಟ್ಟುಸಿರು ಬಿಡುತ್ತಿರುವ ಗಿರಿಜನ ಹಾಡಿಗಳ ಸಂಕಟಗಳು 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಅಬ್ದುಲ್ ರಶೀದ್ ಅವರ ಭಾಷಣದಲ್ಲಿ ವ್ಯಕ್ತವಾದವು.

ತಮ್ಮ ಭಾಷಣದುದ್ದಕ್ಕೂ ಕೊಡಗಿನಲ್ಲಿನ ತಮ್ಮ ಅನುಭವಗಳನ್ನು ಹೇಳುತ್ತಲೇ ಅವರು ಇಲ್ಲಿನ ವಿಷಮ ಪರಿಸ್ಥಿತಿಗಳಿಗೆ ಕೈಗನ್ನಡಿ ಹಿಡಿದರು. ಅಂತಿಮವಾಗಿ, ಕೊಡಗಿಗೆ ಪ್ರತ್ಯೇಕವಾದ ಸಾಂಸ್ಕೃತಿಕ, ಶೈಕ್ಷಣಿಕ ನೀತಿಗಳು ಬೇಕು, ವಿಲಾಸಿ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯಗಳನ್ನಿರಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಚಿಂತನೆಯ ಕಿಡಿಹೊತ್ತಿಸಿದರು.

ಅಳವಿನಂಚಿನಲ್ಲಿರುವ ಭಾಷೆಗಳನ್ನಾಡುವ ಜನರ ಜೀವಗಳನ್ನು ಕಾಪಾಡಬೇಕಿದೆ. ಈ ಮೂಲಕ ಈ ಭಾಷಾ ವೈವಿಧ್ಯದ ಹಾಡು, ಕುಣಿತ, ಬಡಿತಗಳು ಈ ಜನಾಂಗಗಳ ಮಕ್ಕಳ ನಾಲಿಗೆಯಲ್ಲಿ ನಲಿಯುವಂತೆ ಮಾಡಬೇಕಿದೆ. ಇಂತಹವುಗಳನ್ನು ಡಿಜಿಟಲೀಕರಣಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಸರ್ಕಾರದ ಶಿಕ್ಷಣ ನೀತಿಯಲ್ಲಿ ಶಾಲಾ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ. ಪುಸ್ತಕಗಳನ್ನು ಕಪಾಟಿನಲ್ಲಿ ಭದ್ರವಾಗಿ ಬಚ್ಚಿಡಲು ನೋಡುವುದಕ್ಕಿಂತ ಪುಸ್ತಕ ಕಳವಾದರು ಸರಿಯೇ ಮಕ್ಕಳ ತಲೆಯೊಳಗೆ ಒಳ್ಳೆಯ ಓದಿನ ಭೂತ ಹೊಕ್ಕು ಬಿಡಲಿ ಎಂಬ ದೂರಾಲೋಚನೆ ಇರಬೇಕು ಎಂದರು.

ಗಿರಿಜನ ಹಾಡಿಗಳ ಒಳಗೆ ಯಾಕೆ ಸದ್ದಿಲ್ಲದೆ ಮತಾಂತರ ಕಾರ್ಯ ನಡೆಯುತ್ತಿದೆ. ಮದ್ಯ ವ್ಯಸನದಿಂದ ಬಿಡುಗಡೆ ಹೊಂದಲು ಮತಾಂತರಕ್ಕೆ ಮೊರೆ ಹೋಗುತ್ತಿರುವ ಕೊಡಗಿನ ಆದಿವಾಸಿ ಮೂಲ ನಿವಾಸಿಗರು ತಮ್ಮದೇ ಆದ ಆಚರಣೆ, ದೇವರು, ದೈವಗಳನ್ನು ಯಾಕೆ ಅಸಡ್ಡೆಯಿಂದ ನೋಡಲು ತೊಡಗಿದ್ದಾರೆ. ಜೀತ, ಹಸಿವು, ಅವಮಾನ, ಮದ್ಯಪಾನ ಮತ್ತು ಮತಾಂತರ ಹೀಗೆ ಒಂದಕ್ಕೆ ಒಂದು ಇವರ ಕೊರಳಿಗೆ ಸುತ್ತುಕೊಳ್ಳುತ್ತಿರುವ ಈ ಭಯಾನಕ ಸರಣಿಯ ಕೊಂಡಿಗಳನ್ನು ಕತ್ತರಿಸುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದೂ ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-1827256783

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.