ಮಡಿಕೇರಿ: ಇಲ್ಲಿನ ಐತಿಹಾಸಿಕ ಓಂಕಾರೇಶ್ವರ ದೇಗುಲದ ಬಳಿಯಲ್ಲಿರುವ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ರಾಮೋತ್ಸವ ಕಾರ್ಯಕ್ರಮಗಳು ಆರಂಭವಾಗಿ 7 ದಿನಗಳು ಕಳೆದಿವೆ. ನಿತ್ಯ ಸಂಜೆ ಸಂಗೀತ, ಭಜನೆ, ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆದಿವೆ. ಮಾರ್ಚ್ 28ರವರೆಗೂ ಇಲ್ಲಿ ಸಂಜೆ 6.30ರಿಂದ 8.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ.

ಈ ರಾಮೋತ್ಸವಕ್ಕೆ 132 ವರ್ಷಗಳಷ್ಟು ಸುದೀರ್ಘ ಇತಿಹಾಸ ಇದೆ. 1894ರಲ್ಲಿ ಆರಂಭವಾದ ರಾಮೋತ್ಸವ ಸಮಿತಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ರಾಮನವಮಿಯ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹಿಂದೆ 15–16 ದಿನಗಳ ಕಾಲ ನಿರಂತರವಾಗಿ ಕಾರ್ಯಕ್ರಮಗಳು ನಡೆದ ಇತಿಹಾಸವೂ ಇದೆ. ಸದ್ಯ 10 ದಿನಗಳ ಕಾಲ ಕಾರ್ಯಕ್ರಮಗಳು ನಡೆಯುತ್ತಿವೆ.

ಈಗ ಇಲ್ಲಿ ಮಾರ್ಚ್ 19ರಿಂದ ಆರಂಭವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು 28ರವರೆಗೂ ನಡೆಯಲಿವೆ. 19ರಂದು ಪುಂಜಾಲಕಟ್ಟೆ ಕೃಷ್ಣ ಗೋಪಾಲ್ ಹಾಗೂ ಬಳಗದಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, 20 ರಂದು ಮೈಸೂರಿನ ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಅವರಿಂದ ಪೌರಾಣಿಕ ನಾಟಕಗಳ ರಂಗಗೀತೆ ಗಾಯನ, 21ರಂದು ಮಡಿಕೇರಿಯ ವಿದುಷಿ ಮೇಘಾ ಭಟ್ ಅವರಿಂದ ಶಾಸ್ತ್ರೀಯ ಸಂಗೀತ, 22 ರಂದು ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆಯ ಪೂರ್ಣಿಮಾ ವಿನಯ್ ಶಿಷ್ಯಯರಿಂದ ನೃತ್ಯ ಸಂಗೀತ, 23 ರಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ, 24ರಂದು ಮಡಿಕೇರಿಯ ಶ್ರುತಿ ಲಯ ತಂಡ, ವೀಣಾ ಹೊಳ್ಳರಿಂದ ಭಕ್ತಿ ಸಂಗೀತ, 25ರಂದು ಬಾಳೆಲೆಯ ಕಾವೇರಿ ಕಲಾಸಮಿತಿ, ವತ್ಸಲಾ ನಾರಾಯಣ್ ಹಾಗೂ ಬಳಗದಿಂದ ಭಜನೆ, ಭಕ್ತಿ ಸಂಗೀತಗಳು ನಡೆದಿವೆ.

ಇನ್ನು 26ರಂದು ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆಯ ಪ್ರೇಕ್ಷಾ ಭಟ್ ಹಾಗೂ ಶಿಷ್ಯರಿಂದ ಭರತನಾಟ್ಯ, 27ರಂದು ಶ್ರೀ ರಾಮನವಮಿ ವಿಶೇಷ ಪೂಜೆ, ಬೆಳಿಗ್ಗೆ 11 ಗಂಟೆಯಿಂದ ಮಡಿಕೇರಿಯ ಶಿವಶಕ್ತಿ ವೃಂದದಿಂದ ಧಾರ್ಮಿಕ ಪಠಣ, ಸಂಜೆ ಮಂಗಳೂರಿನ ವಿದುಷಿ ಶ್ರೇಯಾ ಕೊಳತ್ತಾಯ, ಸುರತ್ಕಲ್ ಅವರಿಂದ ಕರ್ನಾಟಕ ಶಾಸ್ಟ್ರೀಯ ಸಂಗೀತ, 28 ರಂದು ಹನುಮಂತೋತ್ಸವ ವಿಶೇಷ ಪೂಜೆ, ಬೆಳಿಗ್ಗೆ 11 ಗಂಟೆಯಿಂದ ಗಾನಾಮೃತ ಕಾರ್ಯಕ್ರಮ ಹಾಗೂ ಸಂಜೆ ಮಂಗಳೂರಿನ ಯಕ್ಷಮಂಜುಳಾ ಮಹಿಳಾ ಬಳಗ, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ ಬಾಲ ಪ್ರತಿಭೆಗಳಿಂದ ತಾಳಮದ್ದಳೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಲಿವೆ.

ಸದ್ಯ, ರಾಮೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಎಚ್.ಎಸ್.ಅನಂತಸುಬ್ರಾವ್, ಕಾರ್ಯಾಧ್ಯಕ್ಷರಾಗಿ ಜಿ.ಆರ್.ರವಿಶಂಕರ್, ಕಾರ್ಯದರ್ಶಿಯಾಗಿ ಗೀತಾ ಗಿರೀಶ್, ಕೋಶಾಧಿಕಾರಿಯಾಗಿ ಬಿ.ವಿ.ಅಚ್ಯುತ, ಸದಸ್ಯರಾಗಿ ಸುಬ್ರಾಯ ಸಂಪಾಜೆ, ಎಸ್.ಎಸ್.ಸಂಪತ್ಕುಮಾರ್, ಲಲಿತಾ ರಾಘವನ್, ಸಲೀಲಾ ಪಾಟ್ಕರ್, ಪವನ್ ವಸಿಷ್ಠ, ಕನ್ನಿಕೆ ಸುಬ್ಬಯ್ಯ, ಎಂ.ಈಶ್ವರಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಮೋತ್ಸವದ ಆರಂಭ ಹೇಗೆ?

ಹಿಂದೆ ಕೊಡಗಿನ ಅರಸರ ಕಾಲದಲ್ಲಿ ಕೋಟೆ, ಕಟ್ಟಡ, ದೇಗುಲಗಳನ್ನು ನಿರ್ಮಿಸಲು ರಾಜಾಸ್ಥಾನದಿಂದ ಕೆಲಸಗಾರರು ಇಲ್ಲಿಗೆ ಬಂದಿದ್ದರು. ಈಗ ಇರುವ ಆಂಜನೇಯಸ್ವಾಮಿ ದೇಗುಲದ ಜಾಗದಲ್ಲಿ ಗಾರೆ ಕಲಸಿ ನಿರ್ಮಾಣ ಕಾರ್ಯಕ್ಕೆ ಸರಬರಾಜು ಮಾಡುತ್ತಿದ್ದರು. ಆಗ ಅದನ್ನು ಗಾರೆತೋಟ ಎಂದೇ ಕರೆಯಲಾಗುತ್ತಿತ್ತು. ಆಗ ಅವರು ಅಲ್ಲಿ ಆಂಜನೇಯ ಗುಡಿಯೊಂದನ್ನು ಕಟ್ಟಿ, ಅಲ್ಲಿ ಭಜನೆ ನಡೆಸುತ್ತಿದ್ದರು.

ನಂತರದಲ್ಲಿ ಸ್ಥಳೀಯರು ಚಪ್ಪರ ನಿರ್ಮಿಸಿ ಭಜನೆ ಮಾಡುತ್ತಿದ್ದರು. ನಂತರ, ಸ್ಥಳೀಯರು ನೆರವಿನಿಂದ ಕಟ್ಟಡವನ್ನೂ ನಿರ್ಮಿಸಲಾಯಿತು ಎಂದು ಹಿರಿಯರಾದ ಜಿ.ಟಿ.ರಾಘವೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

2000ರಲ್ಲಿ ಶತಮಾನೋತ್ಸವವನ್ನೂ ಆಚರಿಸಿ, 16 ದಿನಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭದ್ರಗಿರಿ ಅಚ್ಯುತದಾಸರಿಂದ ಸಂಪೂರ್ಣ ರಾಮಾಯಣದ ಹರಿಕಥೆ, ಶತಾವಧಾನಿ ಗಣೇಶ್ ಅವರಿಂದ ಅಷ್ಟಾವಧಾನ ಕಾರ್ಯಕ್ರಮಗಳೂ ನಡೆದಿದ್ದವು ಎಂದು ಅವರು ನೆನಪಿಸಿಕೊಂಡರು.

132 ವರ್ಷದಷ್ಟು ಸುದೀರ್ಘ ಇತಿಹಾಸ ಹೊಂದಿರುವ ರಾಮೋತ್ಸವ ಸಮಿತಿಯ ಕಾರ್ಯಕ್ರಮಗಳಲ್ಲಿ ನಾನು 32 ವರ್ಷದಿಂದ ಭಾಗಿಯಾಗುತ್ತಿರುವೆ. ಅಚ್ಚುಕಟ್ಟುತನದಿಂದ ನಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿವೆ.
ಗೀತಾ ಗಿರೀಶ್, ರಾಮೋತ್ಸವ ಸಮಿತಿಯ ಕಾರ್ಯದರ್ಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.