ಮಡಿಕೇರಿ: ಕೊಡಗಿನ ಗಡಿ ಭಾಗ ಮಾಕುಟ್ಟ ಸಮೀಪದ ಹಳ್ಳಕ್ಕೆ ಜೀಪೊಂದು ಉರುಳಿ ಬಿದ್ದಿದ್ದು, ಚಾಲನೆ ಮಾಡುತ್ತಿದ್ದ ಕೇರಳದ ಬಾಲಚಂದ್ರನ್ (65) ಎಂಬುವವರು ಮೃತಪಟ್ಟಿದ್ದಾರೆ.

‘ಕೇರಳದ ಕಣ್ಣೂರಿನವರಾದ ಇವರು ಇಲ್ಲಿನ ಹೆಗ್ಗಳ ಸಮೀಪ ಹೋಂ ಸ್ಟೇ ನಡೆಸುತ್ತಿದ್ದರು. ನಿತ್ಯ ಕೇರಳದಿಂದ ಬಂದು ವಾಪಸ್ ತೆರಳುತ್ತಿದ್ದರು. ಇವರು ಸೋಮವಾರ ಹೆಗ್ಗಳ ಬಿಡುವಾಗ ಕುಟುಂಬದ ಸದಸ್ಯರಿಗೆ ಫೋನ್ ಮಾಡಿದ್ದರ. ರಾತ್ರಿಯಾದರೂ ಬಾರದೇ ಇದ್ದುದ್ದರಿಂದ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದರು.

ಬಾಲಚಂದ್ರನ್ ಪೆರುಂಬಾಡಿ ಚೆಕ್ಪೋಸ್ಟ್ ಬಳಿಕ ಮುಂದಿನ ಚೆಕ್ಪೋಸ್ಟ್ಗಳನ್ನು ದಾಟಿರಲಿಲ್ಲ ಎಂಬ ಮಾಹಿತಿಯಂತೆ ಹುಡುಕಾಟ ನಡೆಸಿದಾಗ ಮಾಕುಟ್ಟ ಬಳಿ ಹಳ್ಳದಲ್ಲಿ ಜೀಪ್ ಪತ್ತೆಯಾಗಿತ್ತು. ಸ್ಟಿಯರಿಂಗ್ ಹಿಡಿದ ಸ್ಥಿತಿಯಲ್ಲೇ ಬಾಲಚಂದರ್ ಶವವೂ ಪತ್ತೆಯಾಯಿತು. ದೇಹದ ಹೊರಗೆ ಗಾಯಗಳಾಗಿರಲಿಲ್ಲ. ಮೇಲ್ನೋಟಕ್ಕೆ ಹೃದಯಾಘಾತ ಅಥವಾ ಹೃದಯಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿರಬಹುದು. ನಂತರ, ಜೀಪ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಮುಗುಚಿರಬಹುದು ಎಂದು ಎನಿಸುತ್ತದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಖಚಿತ ಕಾರಣ ತಿಳಿಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಚೆಗಷ್ಟೇ ಖಾಸಗಿ ಬಸ್ ಚಾಲಕ ಶಿವಕುಮಾರಸ್ವಾಮಿ ಎಂಬುವವರು ಬಸ್ ಚಾಲನೆ ಮಾಡುತ್ತಿದ್ದಾಗಲೇ ಹೃದಯಸ್ತಂಭನಕ್ಕೆ ಒಳಗಾಗಿ ಮಡಿಕೇರಿ ಸಮೀಪದ ತಾಳತ್ತಮನೆ ಬಳಿ ಮೃತಪಟ್ಟಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1457811267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.