ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸರಿಸುಮಾರು 2010ರಿಂದ ಒಂದೇ ಒಂದು ಮಲೇರಿಯಾ ಪ್ರಕರಣಗಳು ಕಂಡು ಬಾರದೇ ಇರುವುದರಿಂದ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಕಳೆದ ತಿಂಗಳು ಏಪ್ರಿಲ್ನಲ್ಲಿ ಪ್ರಸ್ತಾವ ಸಲ್ಲಿಸಿದ್ದು, ಅಧಿಕಾರಿಗಳ ತಂಡ ಪರಿಶೀಲನೆಗೆ ಸದ್ಯದಲ್ಲೇ ಆಗಮಿಸುವ ನಿರೀಕ್ಷೆ ಇದೆ.

ಇಲ್ಲಿಯೇ ಇರುವ ನಿವಾಸಿಗಳಿಗೆ, ಇಲ್ಲಿಂದಲೇ ಮಲೇರಿಯಾ ರೋಗ ಬಂದಿರುವ ಉದಾಹರಣೆ ಕಳೆದ ಹಲವು ವರ್ಷಗಳಿಂದ ಇಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಹೊರರಾಜ್ಯದಿಂದ ಬಂದ ಕಾರ್ಮಿಕರಲ್ಲಿ ಕಂಡು ಬಂದಿವೆ. ಉಳಿದಂತೆ, ಜಿಲ್ಲೆಯಲ್ಲೇ ರೋಗ ಉಂಟಾಗಿರುವ ಪ್ರಕರಣಗಳು ಶೂನ್ಯ. ಹಾಗಾಗಿ, ಜಿಲ್ಲಾ ಆರೋಗ್ಯ ಇಲಾಖೆ ಈ ಪ್ರಸ್ತಾವ ಸಲ್ಲಿಸಿದೆ.

ಈಚೆಗಷ್ಟೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪಶ್ಚಿಮ ಬಂಗಾಳದಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಮಲೇರಿಯಾ ಪತ್ತೆಯಾಗಿತ್ತು. ಕೂಡಲೇ ಕಾರ್ಯತತ್ಪರವಾದ ಆರೋಗ್ಯ ಇಲಾಖೆಯ ತಂಡ ಸುಮಾರು 14 ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಿ, ವಿಶೇಷ ಗಮನ ಹರಿಸಿತು. ಇದರ ಫಲವಾಗಿ ವ್ಯಕ್ತಿ ಮಲೇರಿಯಾ ರೋಗದಿಂದ ಮುಕ್ತರಾದರು. ಮಾತ್ರವಲ್ಲ, ಈ ಸಾಂಕ್ರಾಮಿಕ ಕಾಯಿಲೆಯು ಇಲ್ಲಿ ಇತರರಿಗೆ ಹರಡದಂತೆ ನೋಡಿಕೊಳ್ಳುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಸಫಲವಾಯಿತು.

ಹೊರರಾಜ್ಯದಿಂದ ಹೆಚ್ಚು ಕಾರ್ಮಿಕರು ಕೊಡಗಿಗೆ ಬರುವುದರಿಂದ ಅವರು ಉತ್ತರ ಮತ್ತು ಈಶಾನ್ಯ ಭಾರತದಲ್ಲಿರುವ ಕಾಯಿಲೆಗಳನ್ನೂ ಹೊತ್ತು ತರುತ್ತಾರೆ. ಆದಾಗ್ಯೂ, ಆ ಕಾಯಿಲೆಗಳು ಇಲ್ಲಿ ಹರಡದಂತೆ ನೋಡಿಕೊಳ್ಳುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಯಶಸ್ವಿಯಾಗುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಲೇರಿಯಾ ಕಾಯಿಲೆ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ ತಾಲ್ಲೂಕಿನಲ್ಲಿ 16,860 ಮಂದಿ ರಕ್ತಪರೀಕ್ಷೆ ಮಾಡಿಸಿತು. ಮಲೇರಿಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕಾಯಿಲೆ ಶೀಘ್ರ ಪತ್ತೆಗಾಗಿ ರಕ್ತ ಲೇಪನಗಳ ಪರೀಕ್ಷೆ, ಜಿಲ್ಲೆಯ ವಲಸಿಗರ ಮತ್ತು ಹೊರ ರಾಜ್ಯದ ವಲಸಿಗರ ಸಮೀಕ್ಷೆ, ವಿವಿಧ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸಿತು, ಮಲೇರಿಯಾ ಪತ್ತೆಯಾದ ಪ್ರದೇಶಗಳಲ್ಲಿ ರಕ್ತ ಲೇಪ ಸಂಗ್ರಹ ಮತ್ತು ಐ.ಇ.ಸಿ ಚಟುವಟಿಕೆಗಳು, ಸ್ವಚ್ಛ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನನ್ನು (ಗಪ್ಪಿ ಮತ್ತು ಗ್ಯಾಂಬೂಸಿಯ) ಬಿಡುಗಡೆ ಮಾಡಿತು. ಇದರ ಫಲವಾಗಿ ಕಾಯಿಲೆ ಹರಡಲಿಲ್ಲ.

ಕಾಯಿಲೆ ಪತ್ತೆಯಾದ ವ್ಯಕ್ತಿಗೆ ಪಶ್ಚಿಮ ಬಂಗಾಳದಲ್ಲೇ ಚಳಿ, ಜ್ವರವಿತ್ತು. ಅಲ್ಲಿಂದ ಅವರು ಇಲ್ಲಿಗೆ ಬಂದ ಬಳಿಕ ಚಿಕಿತ್ಸೆ ಪಡೆದರು. ಈ ಕಾಯಿಲೆಯ ಮೂಲ ಕೊಡಗು ಅಲ್ಲ. ಹಾಗಾಗಿ, ಈ ಪ್ರಕರಣವು ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವುದಕ್ಕೆ ಯಾವುದೇ ತೊಡಕೂ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-837566941

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.