ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ ‘ಸುಟ್ಟ ಗಾಯಗಳ ಸಮಗ್ರ ಆರೈಕೆ ಮತ್ತು ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ’ ಕುರಿತ ಕಾರ್ಯಾಗಾರವು ಗುರುವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ, ‘ಆರಂಭಿಕ ಚಿಕಿತ್ಸೆಯಿಂದ ಪುನರ್ವಸತಿವರೆಗೆ ವ್ಯವಸ್ಥಿತ ರೀತಿಯ ನಿರ್ವಹಣೆ ಬಗ್ಗೆ ಚರ್ಚೆ ಪ್ರಾಯೋಗಿಕವಾಗಿ ಉಪಯುಕ್ತವಾಗಿದೆ’ ಎಂದು ತಿಳಿಸಿದರು.

ಕರಿಸ್ಸಾ ಬೋಪಣ್ಣ ಅವರು ತಮ್ಮ ಫ್ಯಾಷನ್ ಡಿಸೈನಿಂಗ್ ವಿದ್ಯಾಭ್ಯಾಸದ ಅನುಭವ ಹಂಚಿಕೊಂಡು, ವೈದ್ಯಕೀಯ ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾಘಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ಡಾ.ರಾಮಚಂದ್ರ ಕಾಮತ್, ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಪ್ರವೀಣ್ ಕುಮಾರ್, ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಅಪ್ಪಾಜಿ, ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಅಭಿನಂದನ್, ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಧನಂಜಯ ಕುಮಾರ್ ಭಾಗವಹಿಸಿದ್ದರು.

ಟ್ರಸ್ಟ್ವೆಲ್ ಆಸ್ಪತ್ರೆಯ ಓರೋ-ಫೇಷಿಯಲ್ ಮತ್ತು ಪ್ಲಾಸ್ಟಿಕ್ ಸರ್ಜರಿ ಸಲಹೆಗಾರರಾದ ಡಾ. ವಿಶ್ವಾಸ್ ವಿಜಯದೇವ್ ಅವರು ‘ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ಒಳನೋಟಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಚಂದ್ರಶೇಖರ್ ಅವರು, ‘ಸುಟ್ಟ ಗಾಯಗಳ ಪ್ರಾಥಮಿಕ ಮೌಲ್ಯಮಾಪನ ಮತ್ತು ತುರ್ತು ನಿರ್ವಹಣೆ’ ಕುರಿತು ಮಾತನಾಡಿದರು.

ಟ್ರಸ್ಟ್ವೆಲ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಸಲಹೆಗಾರರಾದ ಡಾ.ನಿಕಿತಾ ರೋಲೆಕರ್ ಅವರು, ‘ಸುಟ್ಟ ಗಾಯಗಳ ಗಾಯ ನಿರ್ವಹಣೆ, ದಹನಾನಂತರ ಉಂಟಾಗುವ ಕಾಂಟ್ರಾಕ್ಟರ್ಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆ’ ಕುರಿತು ವಿವರಿಸಿದರು.

ಕೆವಿಜಿ ವೈದ್ಯಕೀಯ ಕಾಲೇಜು, ಸುಳ್ಯ ಅವರ ಶಿಶು ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗೌರವ್ ಅವರು ’ಮಕ್ಕಳ ಸುಟ್ಟ ಗಾಯಗಳ ಆರೈಕೆ‘ ಕುರಿತು ಉಪನ್ಯಾಸ ನೀಡಿದರು.

ಸಿದ್ಧಾರ್ಥ ವೈದ್ಯಕೀಯ ಕಾಲೇಜು ತುಮಕೂರು ಶಿಶು ಶಸ್ತ್ರಚಿಕಿತ್ಸಾ ವಿಭಾಗದ ಡಾ.ಜೆ.ಬಿ.ನಿಜಗಲ್ ಮುತ್ತನ್ ಅವರು ’ಸುಟ್ಟ ಗಾಯಗೊಂಡ ಮಕ್ಕಳಿಗೆ ಶಸ್ತ್ರಚಿಕಿತ್ಸಾ ಆರೈಕೆ‘ ಕುರಿತು ಮಾತನಾಡಿದರು.

ನಾರಾಯಣ ಆಸ್ಪತ್ರೆಯ ಪ್ಲಾಸ್ಟಿಕ್ ಮತ್ತು ರಿಕನ್ಸ್ಟ್ರಕ್ಟಿವ್ ಸರ್ಜರಿ ಸಲಹೆಗಾರ ಡಾ.ಎಂ.ಸುನಿಲ್ ಕುಮಾರ್, ‘ಸುಟ್ಟ ಗಾಯಗಳ ವಾರ್ಡ್ ಮತ್ತು ಸುಟ್ಟ ಗಾಯಗಳ ಕೇಂದ್ರ– ಸಂಸ್ಥೆಯ ಗುಣಮಟ್ಟದ ಸೂಚಕ‘ ವಿಷಯದ ಕುರಿತು ವಿವರಿಸಿದರು.

ಟ್ರಸ್ಟ್ವೆಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ.ರವಿಕುಮಾರ್ ಅವರು ‘ರೋಬೋಟಿಕ್ ಆಂಕೋ-ಯೂರಾಲಜಿ’ ಕುರಿತು ಉಪನ್ಯಾಸ ನೀಡಿದರು.

ನಂತರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಉದ್ಘಾಟನೆಯು ಡಾ.ದಿವಿಯಾ ಕರಿಯಪ್ಪ ಹಾಗೂ ಡಾ. ಮುಖೇಶ್ ಅವರಿಂದ ನೆರವೇರಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-40048343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.