ಮಡಿಕೇರಿ: ತಾಲ್ಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿ ಭಾನುವಾರವಷ್ಟೇ ಪತ್ತೆಯಾದ ಶರಣ್ಯ (35) ಅವರು ಆರೋಗ್ಯವಾಗಿದ್ದು, ಕೇರಳಕ್ಕೆ ತೆರಳಿದ್ದಾರೆ.

’ಅವರನ್ನು ಕಾಡಿನಿಂದ ಹೊರತರುತ್ತಿದ್ದಂತೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ, ಅವರ ಸೋದರ, ಚಿಕ್ಕಪ್ಪ ಮತ್ತು ಸ್ನೇಹಿತರು ಅವರನ್ನು ಕೇರಳಕ್ಕೆ ಕರೆದುಕೊಂಡು ಹೋದರು‘ ಎಂದು ಪೊಲೀಸರು ತಿಳಿಸಿದ್ದಾರೆ.

ಇಡೀ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈವಿಧ್ಯಮಯವಾದ ಚರ್ಚೆಗೆ ಗ್ರಾಸವಾಗಿದೆ. ಸಿಗ್ನಲ್ ಸಿಕ್ಕ ಜಾಗದಲ್ಲೇ ನಿಲ್ಲಬೇಕಿತ್ತು, ಸಿಗ್ನಲ್ ಸಿಕ್ಕದಿರುವ ಕಡೆ ಏಕೆ ಹೋಗಬಾರದಿತ್ತು. ಆಸ್ಪತ್ರೆಯ ಬಳಿ ಮಹಿಳೆಗೆ ಹಾರ ಹಾಕಿ ಸನ್ಮಾನಿಸಿದರು. ಆದರೆ, ಅವರನ್ನು ಹುಡುಕಿದ ಬುಡಕಟ್ಟು ಜನರಿಗೆ ಯಾವುದೇ ಸನ್ಮಾನ ಮಾಡಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದೂ ಕೆಲವರು ಒತ್ತಾಯಿಸಿದ್ದಾರೆ.

ಟ್ರಿಕ್ಕಿಂಗ್ ಅನ್ನು ಗಂಭೀರವಾಗಿ ತೆಗೆದುಕೊಂಡವರು ಸೂಕ್ತವಾದ ತರಬೇತಿ ಪಡೆದಿರುತ್ತಾರೆ. ಒಂದು ವೇಳೆ ಕಾಡಿನಲ್ಲಿ ದಾರಿ ತಪ್ಪಿದರೆ ಏನು ಮಾಡಬೇಕು, ಹೆಚ್ಚು ಬಳಲಿಕೆಯಾಗದ ರೀತಿ ಹೇಗಿರಬೇಕು ಮೊದಲಾದುದರ ಬಗ್ಗೆ ತರಬೇತಿ ವೇಳೆ ಅವರಿಗೆ ಹೇಳಿ ಕೊಟ್ಟಿರುತ್ತಾರೆ. ಹೀಗಾಗಿ, ಟ್ರಕ್ಕಿಂಗ್ ವೇಳೆ ದಾರಿ ತಪ್ಪಿದಾಗ ವೈಜ್ಞಾನಿಕವಾಗಿ ಏನು ಮಾಡಬೇಕಿತ್ತೋ ಅದನ್ನು ಶರಣ್ಯ ಮಾಡಿದ್ದಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪೊಲೀಸರು, ’ಘಟನೆಯಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಮಹಿಳೆ ಮೊಬೈಲ್ನಲ್ಲಿನ ಜಿಪಿಎಸ್ ಆಧಾರದ ಮೇಲೆ ನಡೆದುಕೊಂಡು ಹೋಗಿ ದಾರಿ ತಪ್ಪಿದ್ದಾರೆ. ಸಿಗುವುದಕ್ಕೆ ಮುನ್ನಾ ದಿನ ಮಳೆಯಿಂದ ನಡೆಯಲಾಗದೇ ನೀರಿರುವ ಕಡೆ ಕುಳಿತುಕೊಂಡಿದ್ದಾರೆ. ಹೊಟ್ಟೆ ತುಂಬ ನೀರು ಕುಡಿದಿದ್ದರಿಂದ, ಹೆಚ್ಚು ನಡೆಯದೇ ಇದ್ದುದ್ದರಿಂದ ಆಕೆಗೆ ಬಳಲಿಕೆ ಆದಂತೆ ಮೇಲ್ನೋಟಕ್ಕೆ ಕಾಣುತ್ತಿರಲಿಲ್ಲ‘ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-1092842156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.