ಕುಶಾಲನಗರ: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಇಲ್ಲಿನ ಗುಂಡೂರಾವ್ ಬಡಾವಣೆಯ ಮೈದಾನದಲ್ಲಿ ಆಯೋಜಿಸಿರುವ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಟೂರ್ನಿಗೆ ಭಾನುವಾರ ಚಾಲನೆ ನೀಡಲಾಯಿತು.

ಟ್ರಸ್ಟ್ ಅಧ್ಯಕ್ಷ ಕೆ.ಎ.ಅಬ್ದುಲ್ ರಶೀದ್ ಅವರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ‘ಮುಸ್ಲಿಂ ಕಪ್ ಕೇವಲ ಒಂದು ಧರ್ಮಕ್ಕೆ ಮೀಸಲಾಗಿಸಿಲ್ಲ. ಎಲ್ಲಾ ಸಮುದಾಯದ ಮುಖಂಡರು ಭಾಗಿ ಯಾಗಿ ಕ್ರೀಡಾಕೂಟಕ್ಕೆ ಶುಭಕೋರುವ ಸಂಸ್ಕೃತಿ ಮುಂದುವರೆಸಿದ್ದೇವೆ’ ಎಂದರು.

ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಎರಡು ದಶಕಗಳ ಇತಿಹಾಸ ಹೊಂದಿರುವ ಮುಸ್ಲಿಂ ಕಪ್ ಜಿಲ್ಲೆಯಲ್ಲಿ ಅತ್ಯಂತ ಅದ್ದೂರಿ ಕ್ರೀಡಾಕೂಟ ಎಂದು ಹೆಸರುವಾಸಿಯಾಗಿದೆ. ಸೌಹಾರ್ದ ಭಾರತ ನಿರ್ಮಾಣ, ಪರಸ್ಪರ ಭ್ರಾತೃತ್ವದ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕ್ರೀಡಾಕೂಟದ ಆಶಯಗಳು ಈಡೇರಲಿ’ ಎಂದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಮಾತನಾಡಿ, ‘ಈ ಮೈದಾನವನ್ನು ಒಳಾಂಗಣ,ಹೊರಾಂಗಣ ಸ್ಟೇಡಿಯಂ ಮತ್ತು ತರಬೇತಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ದೂರದೃಷ್ಟಿ ಹೊಂದಿದ್ದು, ಸಚಿವ ದಿನೇಶ್ ಗುಂಡೂ ರಾವ್ ಮೂಲಕ ಕೇಂದ್ರದ ಸಹಕಾರ ಪಡೆಯುವ ಚಿಂತನೆ ನಡೆಸಿದ್ದಾರೆ’ ಎಂದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಟ್ರಸ್ಟ್ ಗೌರವಾಧ್ಯಕ್ಷ ಇಸ್ಮಾಯಿಲ್, ಕುಶಾಲನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಎಂ.ಜೆ.ಇರ್ಫಾನ್, ಸುಂಟಿಕೊಪ್ಪದ ನಿಯಾಜ್ ಮಾತನಾಡಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಮೆಹತಾಬ್ ಅಹಮ್ಮದ್, ದಾನಿ ಅಂಜದ್, ಗರಗಂದೂರು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಮುಸ್ತಾಫ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರ ಮೋಹನ್,ಪ್ರಮುಖರಾದ ಫೈಸಲ್ ಇ ಪಾಯದತ್, ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ರಜಾಕ್ ಕೆ.ಎ, ಪ್ರಧಾನ ಕಾರ್ಯದರ್ಶಿ ಎಸ್.ಆದಂ, ಖಜಾಂಚಿ ಕೆ.ಎಂ.ಮುಜೀಬ್, ಕಾನೂನು ಸಲಹೆಗಾರ ಸುಫಿಯಾನ ಎಂ.ಎಂ, ನಿರ್ದೇಶಕರಾದ ಹ್ಯಾರಿಸ್ ಎನ್.ಪಿ, ರಜಾಕ್ ಎಂ.ಕೆ, ಅಶ್ರಫ್ ಪಿ.ಎ, ಬಾಷಾ ಎಂ.ಎಸ್, ಆರೀಸ್ ಎಂ.ಎಂ, ಅನೀಸ್, ಆತಿಫ್ ಪಾಲ್ಗೊಂಡಿದ್ದರು.

7 ದಿನಗಳ ಟೂರ್ನಿಯಲ್ಲಿ 50ಕ್ಕೂ ಅಧಿಕ ತಂಡಗಳು ಭಾಗಿಯಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-1607059463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.