ಗೋಣಿಕೊಪ್ಪಲು: ನಾಗರಹೊಳೆ ತಿರುಮಲ ಬರಗೂರು ರಾಶೆ ಐಗೊಲ್ಲಿ ಬುಡಕಟ್ಟು ಜನಾಂಗದ ದೇವಸ್ಥಾನದ ದಾಸೋಹಕ್ಕೆ ಅಗತ್ಯವಿದ್ದ ಪಾತ್ರೆ ಹಾಗೂ ಇತರ ಸರಕು ಸಾಮಗ್ರಿಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ಭಾನುವಾರ ಒದಗಿಸಿದರು.

ತಮ್ಮ ಪತ್ನಿ ಕಾಂಚನ ಅವರೊಂದಿಗೆ ಭೇಟಿ ನೀಡಿದ ಪೊನ್ನಣ್ಣ ಕಳೆದ ವರ್ಷ ದೇವಸ್ಥಾನಕ್ಕೆ ಅಗತ್ಯವಿರುವ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆಯಲ್ಲಿ ಬುಡಕಟ್ಟು ಜನಾಂಗವದರು ಹೆಚ್ಚಿದ್ದು ತಮ್ಮ ಆರಾಧ್ಯ ದೇವರನ್ನು ಮರ ಹಾಗೂ ಮಣ್ಣಿನಿಂದ ಮಾಡಿದ ಬುಡಕಟ್ಟು ದೇವರಮೂರ್ತಿಗಳನ್ನು ಪೂಜಿಸುತ್ತಾರೆ. ವರ್ಷಕ್ಕೆ ಒಮ್ಮೆ ಪೂಜೆಗಾಗಿ ಎಲ್ಲರೂ ಒಂದೆಡೆ ಸೇರಿ ಹಬ್ಬ ಆಚರಿಸುತ್ತಾರೆ.

ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುವ ಪದ್ಧತಿ ಇದೆ. ಇದಕ್ಕೆ ಪ್ರತಿ ವರ್ಷ ಅವರು ಪಾತ್ರೆ ಇತರ ವಸ್ತುಗಳಿಗೆ ಪರದಾಡುವ ಸ್ಥಿತಿ ಇತ್ತು. ಇದನ್ನು ಮನಗಂಡ ಪೊನ್ನಣ್ಣ ಅವರು ಇವುಗಳನ್ನು ಒದಗಿಸಿರುವುದು ಒಳ್ಳೆಯದಾಗಿದೆ ಎಂದು ಬುಡಕಟ್ಟು ಜನಾಂಗದ ಮುಖಂಡ ಸೋಮಯ್ಯ ಹೇಳಿದರು.

ಪೊನ್ನಂಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೀದಿರಿರ ನವೀನ್, ಮುಖಂಡ ಎಂ.ಆರ್.ಅಕ್ರಂ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1707864425

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.