ನಾಪೋಕ್ಲು: ಬಲ್ಲಮಾವಟಿ ಗ್ರಾಮದ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ಹಾಕಿ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.

ಕೊಡಗಿನ ಹಿರಿಯ ಹಾಕಿ ಆಟಗಾರ ಮಡಿಕೇರಿಯ ವಾಂಡರ್ಸ್ ಕ್ಲಬ್ನ ತರಬೇತುದಾರ ಕೋಟೆರ ನಾಣಯ್ಯ ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ಶಾಲೆಯಲ್ಲಿ ಶಿಸ್ತುಬದ್ಧವಾಗಿ ಪಾಠ ಪ್ರವಚನಗಳಲಿ ಪಾಲ್ಗೊಳ್ಳುವಂತೆ ಶಿಬಿರದಲ್ಲಿಯೂ ಭಾಗವಹಿಸಬೇಕು ಎಂದರು.

ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಪ್ಪಚೆಟ್ಟೋಳಂಡ ಡಾಲಿ ಬೋಪಯ್ಯ, ನುಚ್ಚಿಮಣಿಯಂಡ ಗಣೇಶ್ ಪಾಲ್ಗೊಂಡಿದ್ದರು. ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತುದಾರರಾದ ಅಂಜಪರವಂಡ ರೋಷನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ ಹಾಗೂ ನಾಲ್ನಾಡ ಹಾಕಿ ಕ್ಲಬ್ಬಿನ ಉಪಾಧ್ಯಕ್ಷ ಕೈಬಿಲಿರ ಉಮೇಶ್ ಉತ್ತಪ್ಪ, ಬೈರುಡ ಮಾಚಯ್ಯ, ನಾಲ್ನಾಡ್ ಹಾಕಿ ಕ್ಲಬ್ ಸಹಕಾರ್ಯದರ್ಶಿ ಮಚ್ಚುರ ಯಧುಕುಮಾರ್, ಸಮಿತಿ ಸದಸ್ಯರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-995970607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.