ಮಡಿಕೇರಿ: ಹಿಂದೂ ಸುರಕ್ಷಾ ಸಮಿತಿ ವತಿಯಿಂದ ನಾಪೋಕ್ಲುವಿನಲ್ಲಿ ಏಪ್ರಿಲ್ 1ರಂದು ಬೆಳಿಗ್ಗೆ 10 ಗಂಟೆಗೆ ಹಿಂದೂ ಜನಜಾಗೃತಿ ಜಾಥಾ ನಂತರ ಜನಜಾಗೃತಿ ಸಭೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ಲವ ನಾಣಯ್ಯ ತಿಳಿಸಿದರು.

‘ನಾಪೋಕ್ಲುವಿನ ಹಳೇ ತಾಲ್ಲೂಕು ಜಂಕ್ಷನ್ನಿಂದ ಜಾಥಾ ಹೊರಡಲಿದ್ದು, ಮಾರುಕಟ್ಟೆ ಆವರಣದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಕೊಡಗು ಜಿಲ್ಲೆಯ ಮುಖಂಡರು ಇದರಲ್ಲಿ ಭಾಗಿಯಾಗಲಿದ್ದಾರೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಪೋಕ್ಲುವಿನಲ್ಲಿ ಹಿಂದೂ ಸಮಾಜೋತ್ಸವದ ಕಾರ್ಯಕರ್ತರೊಬ್ಬರ ಮೇಲೆ ಈಚೆಗೆ ನಡೆದ ಹಲ್ಲೆ ಖಂಡಿಸಿ ಹಾಗೂ ಜಾಮೀನಿನ ಮೇಲೆ ಹೊರ ಬಂದ ಆರೋಪಿಗಳು ಕೋಮುಪ್ರಚೋದಕ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದು, ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಈ ಜಾಥಾ ಮತ್ತು ಸಭೆ ನಡೆಯುತ್ತಿದೆ ಎಂದು ಸಮಿತಿ ಮುಖಂಡ ಕುಕ್ಕೇರ ಅಜಿತ್ ತಿಳಿಸಿದರು.

‘ನಾಪೋಕ್ಲು ಭಾಗದಲ್ಲಿ ಇದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಾಪೋಕ್ಲು ಠಾಣೆಯಲ್ಲಿ ನಿಯೋಜಿಸಬೇಕು, ಗಸ್ತು ಕಾರ್ಯ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಹಲ್ಲೆ ನಡೆಸಿದ ಪ್ರಕರಣವನ್ನು ಖಂಡಿಸದೇ ಆರೋಪಿಗಳನ್ನು ಮತ್ತು ಅವರ ಕೃತ್ಯಗಳನ್ನು ಹಲವು ಮಂದಿ ಸಮರ್ಥಿಸಿಕೊಂಡಿರುವುದು ನಿಜಕ್ಕೂ ಸರಿಯಲ್ಲ. ಇಂತಹ ಘಟನೆಗಳು ಮತ್ತೆ ನಡೆಯಬಾರದು ಮತ್ತು ಜನರಲ್ಲಿ ಧೈರ್ಯ ತುಂಬಬೇಕು ಎಂಬ ಕಾರಣಕ್ಕೆ ಈ ಜಾಥಾ ಮತ್ತು ಸಭೆ ನಡೆಸಲಾಗುತ್ತಿದೆ’ ಎಂದರು.

ಮುಖಂಡರಾದ ಬಾಲಕೃಷ್ಣ ರೈ, ಪ್ರತೀಜಾ ಅಚ್ಚಪ್ಪ, ಪ್ರತೀಪ, ಚಂದ್ರ ಉಡೋತ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-51-801126142

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.