ನಾಪೋಕ್ಲು: ‘ರಾಮನಿಗೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಯ ಎದೆಯಲ್ಲಿ ರಾಮ ತತ್ವ ನೆಲೆಸಬೇಕು. ಧರ್ಮದೊಂದಿಗೆ ಧರ್ಮ ರೀತಿಯಲ್ಲಿ ನಡೆಯಬೇಕು. ಅಧರ್ಮಕ್ಕೆ ಧರ್ಮದ ನಡೆಯಲ್ಲಿ ಸೋಲಾಗುವುದು ಖಂಡಿತಾ’ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಅಗೋಳಿಕಜೆ ಧನಂಜಯ ಹೇಳಿದರು .

ಬೆಟ್ಟಗೇರಿ ಗಜಾನನ ಯುವಕ ಭಕ್ತ ಮಂಡಳಿ, ಶ್ರೀ ಕೃಷ್ಣ , ಕೇಸರಿ, ಸಂಕ್ರಾಂತಿ, ಸಾಗರ ಸ್ವಸಹಾಯ ಸಂಘ ಮತ್ತು ಅಂಬಿಕಾ, ಸರಸ್ವತಿ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ ಬಕ್ಕ ಅಂಗನವಾಡಿ ಕೇಂದ್ರದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ ದ್ವಿತೀಯ ವರ್ಷದ ರಾಮ ನವಮಿ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ರಾಮಾಯಣ ಕಾಲದಲ್ಲೂ ಸ್ತ್ರೀಗೆ ಗುರು ಸ್ಥಾನವಿತ್ತು ಎಂದರು.

ಬಕ್ಕ ಕ್ರೀಡಾಮಂಡಳಿಯ ಅಧ್ಯಕ್ಷ ಬೈತಡ್ಕ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಬಿ.ಎ ಗೋಪಾಲ ಉಪಸ್ಥಿತರಿದ್ದರು. ಕಡಿಯತ್ತೂರು ಭಗವತಿ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ ಅವರ ನೇತೃತ್ವದಲ್ಲಿ ಗಣ ಹೋಮ, ಶ್ರೀರಾಮನಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಿತು.

ಅಂಗನವಾಡಿ ಮಕ್ಕಳಿಗೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶ್ರೀರಾಮ ಸೀತಾ ಲಕ್ಷ್ಮಣರ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂಗನವಾಡಿ ಮಕ್ಕಳ ವಿಭಾಗದಲ್ಲಿ ಚರಿಕಾ ಸೋಮಯ್ಯ ಪ್ರಥಮ, ದಿಯಾನ್ ಬೇಬಿ ದ್ವಿತೀಯ, ಭವಿನ್ ನಾರಾಯಣ ತೃತೀಯ ಸ್ಥಾನ ಪಡೆದುಕೊಂಡರು. ಶಿವಾನಿ ಪ್ರದೀಪ್, ಪುನರ್ವಿಕಾ ತನುಜ, ಆದ್ವಿಕಾ ಭರತ್, ದಿಯಾ ಹರೀಶ್ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಧನ್ವಂತ್ ಬಿ.ಎಂ ಪ್ರಥಮ, ಸನ್ವಿತ ಆನಂದ ದ್ವಿತೀಯ, ಮೇಧಶ್ರೀ ಬಿ.ಎಲ್. ತೃತೀಯ, ಹನಿಕಾ ಬಿ.ಕೆ ಇಸಿಕಾ ಬಿ.ಬಿ ಯಶಿಕಾ ನಂದ, ಲಾಸ್ಯ ಪ್ರದೀಪ್ ಸಮಾಧಾನಕರ ಬಹುಮಾನ ಪಡೆದುಕೊಂಡರು. ನಿವೃತ್ತ ತಹಶೀಲ್ದಾರ್ ಸೂದನ ಮೋಹನ್ ಮತ್ತು ಶಿಕ್ಷಕಿ ಪ್ರಿಯಾ ಗಿರೀಶ್ ಛದ್ಮವೇಷ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸ್ಕೈ ಡ್ಯಾನ್ಸ್ ಗ್ರೂಪ್ ಬಕ್ಕ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.