ಗೋಣಿಕೊಪ್ಪಲು: ದಕ್ಷಿಣ ಕೊಡಗು ಒಕ್ಕಲಿಗರ ವೇದಿಕೆ ಮೇ 14 ರಿಂದ 16 ರ ವರೆಗೆ ಒಕ್ಕಲಿಗರ ಕ್ರೀಡಾ ಮಿಲನವನ್ನು ಆಯೋಜಿಸಿದೆ ಎಂದು ವೇದಿಕೆ ಅಧ್ಯಕ್ಷ ಮಧುಸೂದನ್ ಹೇಳಿದರು.

ಹಾತೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ 3 ದಿನ ನಡೆಯಲಿರುವ ಒಕ್ಕಲಿಗರ ಕ್ರೀಡಾ ಮಿಲನದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳ ಸಮುದಾಯದವರು ಭಾಗವಹಿಸಲಿದ್ದಾರೆ. ಪುರುಷರಿಗೆ ಲೀಗ್ ಮಾದರಿಯ ಕ್ರಿಕೆಟ್, ಹಗ್ಗ ಜಗ್ಗಾಟ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಗುಂಡು ಎಸೆತ ಸ್ಪರ್ಧೆ ಇರಲಿದೆ ಎಂದರು.

ಮಹಿಳೆಯರಿಗೆ ಹಗ್ಗ ಜಗ್ಗಾಟ, ಥ್ರೋ ಬಾಲ್, ಬೆಂಕಿ ರಹಿತ ಅಡುಗೆ, ರಂಗೋಲಿ ಸ್ಪರ್ಧೆ ನಡೆಯಲಿದೆ. ಕಪಲ್ ಡ್ಯಾನ್ಸ್, ಮೂರು ಕಾಲಿನ ಓಟ, ವೆಜಿಟೆಬಲ್ ಕಾರ್ವಿಂಗ್ ಸ್ಪರ್ಧೆ ನಡೆಯಲಿದೆ.

16 ವರ್ಷ ಒಳಗಿನವರಿಗೆ ಕ್ರಿಕೆಟ್, ಓಟದ ಸ್ಪರ್ಧೆ, 9 ರಿಂದ 11 ವರ್ಷವರೆಗಿನವರಿಗೆ ಗೋಣಿಚೀಲ ಜಿಗಿತ, 6 ರಿಂದ 8 ವರ್ಷದವರಿಗೆ ಬಕೆಟ್ಗೆ ಬಾಲ್ ಹಾಕುವ ಸ್ಪರ್ಧೆ, 2 ರಿಂದ 4ದ ಮಕ್ಕಳಿಗೆ ಗೋಲಿ ಹೆಕ್ಕುವ ಸ್ಪರ್ಧೆ, ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-51-1384179060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.