ಗೋಣಿಕೊಪ್ಪಲು: ಕೊಡಗಿನಲ್ಲಿ ಊರಿನ ಮತ್ತು ಕೆಲವು ಸ್ಥಳದ ಹೆಸರು ಮೂಲ ಕೊಡವ ಹೆಸರನಿಂದ ಕನ್ನಡೀಕರಣಗೊಳ್ಳುವಾಗ ಅನರ್ಥಗೊಂಡಿವೆ. ಅವುಗಳನ್ನು ಸರಿಪಡಿಸುವ ಚಿಂತನೆ ಗಂಭೀರವಾಗಿ ನಡೆಯಬೇಕಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ನಿಕಂಡ ಮಹೇಶ್ ನಾಚಯ್ಯ ಹೇಳಿದರು.

ಹುದಿಕೇರಿಯಲ್ಲಿ ಸೋಮವಾರ ನಡೆದ ಪೊನ್ನಂಪೇಟೆ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹುದಿಕೇರಿ ಎಂಬುದರ ಮೂಲ ರೂಪ ಪುದಿಕೇರಿ ಎಂಬುದು. ಆದರೆ, ಇದನ್ನು ಹುದಿಕೇರಿ ಎಂದು ಕರೆಯಲಾಗುತ್ತಿದೆ. ಇದೇ ಹೆಸರು ಎಲ್ಲ ದಾಖಲೆಯಲ್ಲಿಯೂ ಇದೆ. ಆದರೆ, ಇದರ ಮೂಲ ಹೆಸರು ‘ಪುದಿಯಕೇರಿ’ ಅರ್ಥಾತ್ ಪುದಿಕೇರಿ ಎಂಬುದು. ಇಂಥ ಮೂಲ ರೂಪ ಹಾಗೆಯೇ ಉಳಿಯಬೇಕು ಎಂದು ಹೇಳಿದರು.

ಹೀಗೆಯೇ ಪುತ್ತರಿ ಎಂಬುದು ಕೂಡ ಬದಲಾಗಿದೆ. ಕೊಡವ ಭಾಷೆಯ ‘ಪುತ್ತರಿ’ ಎಂಬುದನ್ನು ಕನ್ನಡದಲ್ಲಿ ಹುತ್ತರಿ ಎಂದು ಕರೆಯಲಾಗುತ್ತಿದೆ. ಪುತ್ತರಿ ಎಂಬುದಕ್ಕೆ ಅರ್ಥ ಇದೆಯೇ ಹೊರತು ಹುತ್ತರಿಗೆ ಅಲ್ಲ. ಹೀಗಾಗಿ ಇಂಥ ಹಲವು ಹೆಸರುಗಳನ್ನು ವಿರೂಪಗೊಳಿಸದೆ ಅದರ ಅರ್ಥ ಬರುವ ಮೂಲ ರೂಪದಲ್ಲಿಯೇ ಬಳಕೆಯಾಗುವಂತಾಗಲಿ ಎಂದು ಒತ್ತಿ ಹೇಳಿದರು.

ಸಮ್ಮೇಳನದ ಅಧ್ಯಕ್ಷ ಟಿ.ಎಸ್.ಗೋಪಾಲ್ ಮಾತನಾಡಿ, ಅತಿಯಾದ ಪ್ರವಾಸಿಗರ ದಾಳಿಯಿಂದ ಪೊನ್ನಂಪೇಟೆ, ಗೋಣಿಕೊಪ್ಪಲು ಮತ್ತಿತರ ಪಟ್ಟಣಗಳ ಜನತೆ ನಲುಗುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ತೀವ್ರಗೊಂಡಿದೆ ಎಂದು ಹೇಳಲಾಗುತ್ತಿದೆ. ಇಂಥ ಸಮಸ್ಯೆಗೆ ಸರ್ಕಾರ ಕಾರಣವೇ ಹೊರತು ಪ್ರವಾಸಿಗರಲ್ಲ ಎಂದು ಪ್ರತಿಪಾದಿಸಿದರು.

50 ವರ್ಷಗಳ ಹಿಂದೆ ಇದ್ದ ರಸ್ತೆ ಮತ್ತಿರ ಮೂಲಸೌಕರ್ಯಗಳೂ ಬದಲಾಗಿಲ್ಲ. ದೂರದೃಷ್ಟಿಯ ಕೊರತೆಯಿಂದ ಇಂದು ಸಮಸ್ಯೆ ಎದುರಿಸಬೇಕಾಗಿದೆ. ಪ್ಲಾಸ್ಟಿಕ್ ಬಳಸುವುದನ್ನಾಗಲಿ ಅಥವಾ ಸರಿಯಾದ ಸ್ಥಳದಲ್ಲಿ ಅವುಗಳನ್ನು ವಿನಿಯೋಗಿಸುವುದಾಗಲಿ, ನಾವು ಕಲಿತಿಲ್ಲ, ಇತರರಿಗೂ ಅದನ್ನು ಕಲಿಸಿಲ್ಲ. ಸರ್ಕಾರವೂ ಸ್ವಚ್ಛತೆ ಮತ್ತಿತರ ವಿಷಯಗಳ ಬಗ್ಗೆ ಸರಿಯಾದ ಯೋಜನೆ ರೂಪಿಸಿಲ್ಲ. ಹೀಗಾಗಿ ಪ್ರವಾಸಿಗರಿಂದ ಸ್ಥಳೀಯರು ಸಮಸ್ಯೆ ಎದುರಿಸಬೇಕಾಗಿದೆ. ಬದಲಾದ ಕಾಲಘಟ್ಟದಲ್ಲಿ ಪ್ರವಾಸೋದ್ಯಮ ಪ್ರವಾಹವನ್ನು ನಿಲ್ಲಿಸಲಾಗುವುದಿಲ್ಲ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಕೊಂಡೊಯ್ಯುವ ಯೋಜನೆ ಸ್ಥಳೀಯರದು ಮತ್ತು ಸರ್ಕಾರದ್ದಾಗಿದೆ ಎಂದು ಹೇಳಿದರು.

ಲೇಖಕ ಜೆ.ಸೋಮಣ್ಣ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಪೊನ್ನಂಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಕೋಳೆರ ದಯಾಚಂಗಪ್ಪ, ಹುದಿಕೇರಿ ಹೋಬಳಿ ಕಸಾಪ ಅಧ್ಯಕ್ಷ ಬಾನಂಗಡ ಅರುಣ್, ಹಿರಿಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಉಪನ್ಯಾಸಕ ಎಂ.ಆರ್.ಅಕ್ರಂ, ತೀತಿರ ಊರ್ಮಿಳಾ ಹಾಜರಿದ್ದರು.

ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಬೆಕ್ಕೆಸೊಡ್ಲೂರಿನ ಗೆಜ್ಜೆತಾಂಡ್ ತಂಡದ ಕೊಡವ ಸಾಂಸ್ಕೃತಿಕ ಕಥನ ನೃತ್ಯ ಪ್ರೇಕ್ಷಕರನ್ನು ರಂಜಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-975602560

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.