ನಾಪೋಕ್ಲು: ಎಲ್ಲ ಧರ್ಮಗಳು ಶಾಂತಿ ಪ್ರೀತಿ ಸೌಹಾರ್ದ ಪ್ರತಿಪಾದಿಸುತ್ತವೆ. ಶಾಂತಿ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಸಮೀಪದ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮಹಾನುಭಾವರ ಹೆಸರಿನಲ್ಲಿ ಪ್ರತಿವರ್ಷ ನಡೆಯುವ ಮಖಾಂ ಉರುಸ್ ಅಂಗವಾಗಿ ಆಯೋಜಿಸಲಾಗಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಶಾಂತಿಯನ್ನು ಪ್ರತಿಪಾದಿಸಿದ ಸೂಫಿ ಸಂತರ ನಾಡಿನಲ್ಲಿ ಇಂದು ಉರುಸ್ ಸಮಾರಂಭ ಆಯೋಜಿಸಲಾಗುತ್ತಿದೆ. ಯಾವ ಧರ್ಮವು ದ್ವೇಷವನ್ನು ಪ್ರತಿಪಾದಿಸಿಲ್ಲ. ದ್ವೇಷದಿಂದ ಏನನ್ನೂ ಸಾಧಿಸಲಾಗದು. ಸಮಾಜದಲ್ಲಿ ಶಾಂತಿ ಸೌಹಾರ್ದ, ಸಮಾನತೆ ತರುವ ಕೆಲಸ ಆಗಬೇಕಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಎಲ್ಲರೂ ಬಾಳಬೇಕು ಎಂದರು.

ಸಂವಿಧಾನದ ಆಶಯಗಳನ್ನು ಮನಪೂರ್ವಕವಾಗಿ ಒಪ್ಪಿ ಸ್ವೀಕಾರ ಮಾಡಬೇಕು. ಸಮಾಜದಲ್ಲಿ ಅಭಿವೃದ್ಧಿಯು ಆಗಬೇಕಿದೆ. ಕೇವಲ ಮಾತುಗಳಿಗೆ, ಗೋಷ್ಠಿಗೆ, ಕಾರ್ಯಕ್ರಮಗಳಿಗೆ ಸಂವಿಧಾನದ ತತ್ವಗಳು ಸೀಮಿತ ಆಗಬಾರದು. ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದರು.

ರಾಜ್ಯದೆಲ್ಲೆಡೆ ಅಭಿವೃದ್ಧಿ ಕೆಲಸಗಳಾಗುತ್ತಿವೆ. ರಾಜ್ಯ ಸರ್ಕಾರ ಅಭಿವೃದ್ಧಿ ಸ್ಪಂದಿಸಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಅನುವು ಮಾಡಿಕೊಟ್ಟಿದ್ದಾರೆ. ಯಾವುದೇ ತಾರತಮ್ಯ ಮಾಡದೆ, ಸೌಹಾರ್ದ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಸಯ್ಯಿದ್ ಅಶ್ರಫ್ ತಂಗಳ್ ಆದೂರು ಅಧ್ಯಕ್ಷತೆ ವಹಿಸಿದ್ದರು. ಸರ್ವಧರ್ಮ ಸಮ್ಮೇಳನವನ್ನು ಎ.ಪಿ. ಹಂಝ ಸಖಾಫಿ ಮೇಲ್ಮುರಿ ನೆರವೇರಿಸಿದರು. ಸುಫಿಯಾನ್ ಸಖಾಫಿ ಗಂಗಾವತಿ ಮತ್ತು ಸಯ್ಯಿದ್ ಶಿಹಾಬುದ್ದೀನ್ ತಂಗಳ್ ಎಮ್ಮೆ ಮಾಡು, ರಾಝಿಕ್ ಫೈಝಿ ಮಾತನಾಡಿದರು.

ಜಮಾಯತ್ ಅಧ್ಯಕ್ಷ ಹುಸೈನ್ ಸಖಾಫಿ, ಎರ್ಮು ಹಾಜಿ, ಮೊಹಮ್ಮದ್ ಹಾಜಿ ಕುಂಜಿಲ, ಅಬ್ದುಲ್ ರೆಹಮನ್, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಯಾಕೂಬ್, ಹಂಝ ಪಡಿಯಾಣಿ, ಕರೀಂ ಆಜು, ಅಶ್ರಫ್ ಬಿ.ಯು., ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆನಂತರ ಅನ್ನದಾನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1053708102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.