ಗೋಣಿಕೊಪ್ಪಲು: ಕೆಸರಿನ ಓಕುಳಿಯ ಹಬ್ಬವೆಂದೇ ಪ್ರಸಿದ್ಧಿ ಪಡೆದಿರುವ ಪೊನ್ನಂಪೇಟೆ ಸಮೀಪದ ‘ಹಳ್ಳಿಗಟ್ಟು ಬೋಡ್ ನಮ್ಮೆ’ಗೆ ಶನವಾರ ಚಾಲನೆ ದೊರೆಯಿತು.

ಶನಿವಾರ ಮತ್ತು ಭಾನುವಾರ ನಡೆಯುವ ಇತಿಹಾಸ ಪ್ರಸಿದ ಈ ಹಬ್ಬವು ಕೆಸರಿನ ಓಕುಳಿಯ ಮೂಲಕ ಖ್ಯಾತಿ ಪಡೆದಿದ್ದು, ಹಳ್ಳಿಗಟ್ಟಿನ ಭದ್ರಕಾಳಿ ದೇವಸ್ಥಾನದ ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖ ಮಾಡಿ ನಿಂತಿರುವ ದಕ್ಷಿಣ ಭಾರತದ ಏಕೈಕ ದೇವಸ್ಥಾನ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಎರಡು ದಿನಗಳ ಕಾಲ ನಡೆಯುವ ಬೋಡ್ ನಮ್ಮೆ ಅಷ್ಟೇ ಆಕರ್ಷಣೆಯನ್ನು ಹೊಂದಿದೆ ಎಂದು ತಕ್ಕ ಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಹಬ್ಬದ ವಿವಿಧ ಆಚರಣೆಗಳನ್ನು ನಡೆಸುವ ಮೂಲಕ ಪಣಿಕ ಜನಾಂಗದ ವ್ಯಕ್ತಿ ಊರು ತಕ್ಕರಾದ ಚಮ್ಮಟೀರ ಕುಟುಂಬದ ಬಲ್ಯಮನೆಗೆ ಆಗಮಿಸಿದರು. ಬಳಿಕ ಮಧ್ಯಾಹ್ನ 2.30ಕ್ಕೆ ಚಮ್ಮಟೀರ ಬಲ್ಯಮನೆಯಿಂದ ಪೊಲವಪ್ಪ ತೆರೆ ಹೊರಟಿತು. ಮಚ್ಚಿಯಂಡ, ಕೂಕಂಡ ಹಾಗೂ ಚೇಂದಿಮಾಡ ಕುಟುಂಬಗಳ ಬಲ್ಯಮನೆ ಸಮೀಪದ ಅಂಬಲಗಳಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಕಾರ್ಯಕ್ರಮಕ್ಕಾಗಿ ಬತ್ತವನ್ನು ಮಣ್ಣಿನ ಮಡಿಕೆಯಲ್ಲಿ ಬೇಯಿಸಿ, ಹುರಿದು, ಕುಟ್ಟಿ ಅವಲಕ್ಕಿ ತಯಾರಿಸಿದರು. ಪೊಲವಪ್ಪ ತೆರೆ ಸಂಜೆ 6.30ರ ವೇಳೆಯಲ್ಲಿ ಮೂಕಳೇರ ಬಲ್ಯಮನೆಯಿಂದ ಹೊರಟು ಪೊಲವಂಡ ಕೋಟದಲ್ಲಿ (ದೇವಸ್ಥಾನ) ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು. ನಂತರ ಜೋಡುಬೀಟಿ ಸಮೀಪದ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ದೇವರಿಗೆ ಅವುಲ್ ಹಾಕುವುದರೊಂದಿಗೆ ಬೋಟೆಕಾರ ಎಂದು ಕರೆಯಲಾಗುವ ಮಣ್ಣಿನ ನಾಯಿಯನ್ನು ಒಪ್ಪಿಸಲಾಯಿತು. ಭಕ್ತರು ಸಾವಿರಾರು ಈಡುಕಾಯಿಗಳನ್ನು ಹರಕೆ ರೂಪದಲ್ಲಿ ಸಮರ್ಪಿಸಿದರು.

ಬಳಿಕ ರಾತ್ರಿ 12ಗಂಟೆ ಒಳಗೆ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ವಿವಿಧ ವೇಷಧಾರಿಗಳು ಹಾಗೂ ಸಾಂಪ್ರದಾಯಿಕ ಬೋಡ್ ನಮ್ಮೆ ದೋಳು ಮತ್ತು ಹಾಡುಗಳೊಂದಿಗೆ ಊರಿನ ಮೂರು ಐನ್ ಮನೆಗಳಿಗೆ ಮನೆಕಳಿ ಆಡಲಿದ್ದಾರೆ.

ಭಾನುವಾರ ಕೆಸರಿನ ಎರಚಾಟದ ಸಂಭ್ರಮ: ಭಾನುವಾರ ಬೆಳಿಗ್ಗೆಯಿಂದಲೇ ಚಮ್ಮಟೀರ ಹಾಗೂ ಮೂಕಳೇರ ಕುಟುಂಬದ ಬಲ್ಯಮನೆಗಳಲ್ಲಿ ವಿವಿಧ ಕಟ್ಟುಪಾಡುಗಳೊಂದಿಗೆ ಕುದುರೆ ಮತ್ತು ಮೊಗಗಳ ಶೃಂಗಾರ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಚಮ್ಮಟೀರ ಬಲ್ಯಮನೆಯಿಂದ ಒಂದು ಕುದುರೆ ಹಾಗೂ ಮೊಗ ಹೊರಟು ಭದ್ರಕಾಳಿ ದೇವಸ್ಥಾನದ ಸಮೀಪದ ಅಂಬಲ ಸೇರುತ್ತದೆ. ಮತ್ತೊಂದೆಡೆ ಮೂಕಳೇರ ಬಲ್ಯಮನೆಯಿಂದ ಹೊರಡುವ ಮತ್ತೊಂದು ಕುದುರೆ ಹಾಗೂ ಮೊಗ ಸಂಜೆ 4.30ರ ಸುಮಾರಿಗೆ ಅಂಬಲದಲ್ಲಿ ಸೇರಿ ಪರಸ್ಪರ ಆಲಂಗಿಸಿಕೊಂಡು ದೇವರ ಕೆರೆಯಿಂದ ಕೆಸರನ್ನು ತಂದು ಕೆಸರು ಎರಚಾಟದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಮಹಿಳೆಯರು, ಪರ ಊರಿನವರು ಹಾಗೂ ನೆಂಟರಿಗೆ ಕೆಸರು ಎರಚುವುದಿಲ್ಲ. ಅವರಿಗೆ ಮುಕ್ತವಾಗಿ ಕುಣಿಯಲು ಅವಕಾಶವಿದ್ದು, ಅವರಿಗೆ ಕೈಗೆ ಒಂದು ಬೆತ್ತದ ಕೋಲು ನೀಡಲಾಗುತ್ತದೆ. ಅಂತಹವರಿಗೆ ಕೆಸರು ಎರಚುವುದು ನಿಷಿದ್ಧವಾಗಿದೆ. ಎರಚಿದರೆ ದಂಡ ತೆರಬೇಕಾಗುತ್ತದೆ. ಪರಸ್ಪರ ಕೆಸರು ಎರಚಾಟದ ಬಳಿಕ ಹತ್ತಿರದ ಭದ್ರಕಾಳಿ ದೇವಸ್ಥಾನದಲ್ಲಿ ಮೂರು ಸುತ್ತು ಬಂದು ಮಹಾಮಂಗಳಾರತಿ ಬಳಿಕ ಹಬ್ಬವು ಸಂಪನ್ನಗೊಳ್ಳಲಿದೆ ಎಂದು ಬೋಡು ನಮ್ಮೆ ಆಚರಣೆ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-1092062940

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.