ನಾಪೋಕ್ಲು: ಇಲ್ಲಿನ ಪೊನ್ನು ಮುತ್ತಪ್ಪ ದೇವರ ಹಬ್ಬವನ್ನು ಏಪ್ರಿಲ್ 3ರಿಂದ 5ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ದೇವಾಲಯದ ಅಧ್ಯಕ್ಷ ಎ.ಕೆ.ಚಂದ್ರನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರ್ಷಿಕ ಉತ್ಸವದ ಅಂಗವಾಗಿ ಏಪ್ರಿಲ್ 3ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಳಶ ಕೇರಳದ ನೀಲೇಶ್ವರ ಮುರಳಿ ಕೃಷ್ಣ ತಂತ್ರಿಯವರಿಂದ ನೆರವೇರಲಿದೆ’ ಎಂದರು. ಅಂದು ಸಂಜೆ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಲಿದೆ. ಏಪ್ರಿಲ್ 4ರಂದು ಮಧ್ಯಾಹ್ನ 3ಗಂಟೆಗೆ ಪೈಂಗುತ್ತಿ, 6ಗಂಟೆಗೆ ಮುತ್ತಪ್ಪ ದೇವರ ಕಳಶ ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಕೇರಳಚಂಡೆಯೊಂದಿಗೆ ಪಟ್ಟಣದಲ್ಲಿ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಆಗಮಿಸಲಿದೆ. ಸಂಜೆ 7.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, ಬಳಿಕ 10.30 ಗಂಟೆಗೆ ಕುಟ್ಟಿಚಾತ ದೇವರು ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಲಿದೆ. ಏಪ್ರಿಲ್ 5ರಂದು ಬೆಳಿಗ್ಗೆ ಗುಳಿಗ ತೆರೆ, ಬಳಿಕ ದೇವರ ಚರಿತ್ರೆ ಹಾಡಿನ ಮೂಲಕ ಹಾಡಿಕೊಂಡು ನೃತ್ಯ, ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪ ಮತ್ತು ಮುತ್ತಪ್ಪ ಕೊಲಗಳು ಜರಗಲಿವೆ ಎಂದರು.

ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ತಂಗಾ ಎಂ.ಕೆ, ಕಾರ್ಯದರ್ಶಿ ಅನಿಲ್ ಪಿ.ಕೆ, ಸಹಕಾರ್ಯದರ್ಶಿ ಸುಕುಮಾರ್ ಟಿ.ಕೆ, ಖಜಾಂಚಿ ಟಿ.ಕೆ.ಮಹೇಶ್ ಮೆನನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-51-1268650330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.