ಮಡಿಕೇರಿ: ರಿವರ್ ರ್ಯಾಫ್ಟಿಂಗ್ ನಡೆಸುವವರು ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಹಾಗೂ ನವೀಕರಣ ಪತ್ರ ಪಡೆಯದೆ ರಿವರ್ ರ್ಯಾಫ್ಟಿಂಗ್ ನಡೆಸಬಾರದು. ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ (ಜೇತ್ನ) ರ್ಯಾಫ್ಟ್ ಫಿಟ್ನೆಸ್ ಪ್ರಮಾಣ ಪತ್ರ ಪಡೆದು ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ನವೀಕರಣ ಪತ್ರ ಪಡೆದೇ ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಹನಾ ಎಸ್.ಹಾದಿಮನಿ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ರಿವರ್ ರ್ಯಾಫ್ಟಿಂಗ್ ನಡೆಸಲು ಬಳಸುವ ಪ್ರತಿ ರ್ಯಾಪ್ಟ್ಗೆ ನಿರ್ವಹಣಾ ಶುಲ್ಕವನ್ನು ಪ್ರತೀ ತಿಂಗಳು ಪಾವತಿಸುವಂತೆ ಸೂಚಿಸಿದರು.

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ರ್ಯಾಪ್ಟ್ ಗೈಡ್ಗಳ ಅಗತ್ಯ ತರಬೇತಿಯನ್ನು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತಾಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನಿರ್ದೇಶಕರ ಕಚೇರಿ ಇವರಿಂದ ಗೈಡ್ ಪ್ರಮಾಣಪತ್ರ ಪಡೆದಿರಲೇಬೇಕು ಎಂದರು.

ರಿವರ್ ರ್ಯಾಫ್ಟಿಂಗ್ ನಡೆಯುವ ಸ್ಥಳದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಇರಬೇಕು. ಯಾವುದೇ ಕಾರಣಕ್ಕೂ ಪ್ರವಾಸಿಗರ ಜೊತೆ ಕಿರಿಕಿರಿ ಮಾಡಿಕೊಳ್ಳಬಾರದು. ಪ್ರತಿಯೊಬ್ಬ ಸಾರ್ವಜನಿಕರ, ಪ್ರವಾಸಿಗರ ಸುರಕ್ಷತೆ ಮತ್ತು ಸೌಜನ್ಯದ ವರ್ತನೆ ಅತೀ ಮುಖ್ಯ ಎಂದು ಹೇಳಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಜೇನು ಕುರುಬ ಜನಾಂಗದ ಯುವಕರಿಗೆ ರ್ಯಾಪ್ಟಿಂಗ್ ಸಲಕರಣೆಗಳನ್ನು ವಿತರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಶಶಿಧರ ಮಾತಾಡಿ, ‘ದುಬಾರೆಯಲ್ಲಿ 55 ರ್ಯಾಫ್ಟ್ ಮಾಲೀಕರಿದ್ದು, ರಿವರ್ ರ್ಯಾಫ್ಟಿಂಗ್ ನಡೆಸಲು 84 ರ್ಯಾಪೆಟ್ಗಳಿವೆ. ಬರಪೊಳೆಯಲ್ಲಿ 4 ರ್ಯಾಪ್ಟಿಂಗ್ ಮಾಲೀಕರಿದ್ದು, 6 ರ್ಯಾಫ್ಟ್ ಸೇರಿ 24 ರ್ಯಾಫ್ಟ್ಗಳು ಇದ್ದು, ದುಬಾರೆ ಕಾವೇರಿ ನದಿಯಲ್ಲಿ ರಿವರ್ ರ್ಯಾಪ್ಟ್ ನಡೆಸಲು 46 ರ್ಯಾಪ್ಟ್ ಮಾಲೀಕರಿಗೆ ಹಾಗೂ ಬರಪೊಳೆ ನದಿಯಲ್ಲಿ ರಿವರ್ ರ್ಯಾಪ್ಟ್ ನಡೆಸಲು 4 ಮಾಲೀಕರಿಗೆ ಕಳೆದ ವರ್ಷ ಪರವಾನಗಿ ನೀಡಲಾಗಿದ್ದು, ಈ ಪರವಾನಗಿಯನ್ನು ಪ್ರಸ್ತುತ ಸಾಲಿಗೆ ನವೀಕರಿಸಲು ಜೇತ್ನದಿಂದ ರ್ಯಾಪ್ಟ್ ಫಿಟ್ನೆಸ್ ಪರಿಶೀಲಿಸಿ ಫಿಟ್ನೆಸ್ ವರದಿ ಸಮಿತಿಗೆ ಸಲ್ಲಿಸಿದ್ದಾರೆ ಎಂದು ಅವರು ವಿವರಿಸಿದರು.

ಫಿಟ್ನೆಸ್ ವರದಿಯಲ್ಲಿ ದುಬಾರೆಯ 46 ರ್ಯಾಪ್ಟ್ ಮಾಲೀಕರ ಪೈಕಿ 44 ಹಾಗೂ ಬರಪೊಳೆಯ 4 ರ್ಯಾಪ್ಟ್ ಮಾಲೀಕರು ತಮ್ಮ ರ್ಯಾಪ್ಟ್ ಪರಿಶೀಲನೆಗೆ ಒಳಪಡಿಸಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಡಿ ಕೊಡಗು ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಕಾಯಕಿಂಗ್ ನಡೆಸಲು 16 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು.

ಹೊನ್ನಮ್ಮನ ಕೆರೆ ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 4 ಸೆಂಟ್ಸ್ ಜಾಗವಿದ್ದು, ಈ ಜಾಗದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು, ದುಬಾರೆ ಪ್ರವಾಸಿ ತಾಣದಲ್ಲಿ ರ್ಯಾಫ್ಟ್ ನಿಲುಗಡೆಗೆ ಸ್ಥಳದ ಕೊರತೆ ಇದ್ದು, ಹೆಚ್ಚುವರಿ ಹೊಸ ರ್ಯಾಪೆಟ್ಗಳಿಗೆ ಅವಕಾಶ ನೀಡದಂತೆ ಕೋರಿ ದುಬಾರೆ ಅಸೋಸಿಯೇಷನ್ ಮನವಿ ಸಲ್ಲಿಸಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.

ದುಬಾರೆ ಕಾವೇರಿ ನದಿಯಲ್ಲಿ ಹೊಸದಾಗಿ ರಿವರ್ ರ್ಯಾಫ್ಟಿಂಗ್ ನಡೆಸಲು 9 ಮನವಿ, ಹಾಗೆಯೇ ದುಬಾರೆ ಪ್ರವಾಸಿ ತಾಣದಲ್ಲಿ ಕಾಯಕಿಂಗ್, ವಾಟರ್ ಚೋರ್ಬಿಂಗ್ ಬಾಲ್ ನಡೆಸಲು 4 ಮನವಿಗಳು ಬಂದಿವೆ ಎಂದರು.

ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಬರಪೊಳೆ, ದುಬಾರೆ ಮತ್ತಿತರ ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದರು,

ಬರಪೊಳೆಯ ರಿವರ್ ರ್ಯಾಫ್ಟಿಂಗ್ನ ರತನ್, ನಿತಿನ್, ಪವನ್, ಪ್ರದೀಪ್ ಅವರು ಬರಪೊಳೆಯಲ್ಲಿ ರಿವರ್ ರ್ಯಾಫ್ಟಿಂಗ್ ಸಂಬಂಧ ಹಲವು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪ್ರಭು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ದುಬಾರೆ ರ್ಯಾಪ್ಟಿಂಗ್ ಅಧ್ಯಕ್ಷ ಉತ್ತಪ್ಪ, ಸಿ.ಎಲ್.ವಿಶ್ವ ಅವರು ಹಲವು ಮಾಹಿತಿ ನೀಡಿದರು.

ಹಶೀಲ್ದಾರರಾದ ಶ್ರೀಧರ, ಸಂಜನಾ, ಪಿಡಿಒಗಳಾದ ರಾಜಶೇಖರ್, ಹರೀಶ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಜತೀನ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-1368439140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.