ನಾಪೋಕ್ಲು: ಆರ್ಎಸ್ಎಸ್ ಕಾರ್ಯಕರ್ತ ಎಂ.ಎಂ. ನರೇಂದ್ರ ಅವರದು ಪ್ರೇರಣಶಕ್ತಿ. ಅವರ ಸಾಮಾಜಿಕ ಜೀವನ ಎಲ್ಲರಿಗೂ ಪ್ರೇರಣಾದಾಯಕ ಎಂದು ಸ್ವಯಂ ಸೇವಕ ಶ್ಯಾಮ್ ಪ್ರಸಾದ್ ಹೇಳಿದರು.

ಸಂಘ ಪರ ವಿಚಾರ ಹೊಂದಿದ ಕಾರ್ಯಕರ್ತರಲ್ಲಿ ಒಬ್ಬರಾಗಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ಎಂ.ಎಂ.ನರೇಂದ್ರ ಅವರ ನಿಧನಕ್ಕೆ ಇಲ್ಲಿನ ಶ್ರೀರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್,ರಾಷ್ಟ್ರೀಯ ಸ್ವಯಂ ಸೇವಕ ಸಂಘದವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಂದ್ರ ಅವರು ಜೀವನದಲ್ಲಿ ಏನನ್ನು ಆಶಿಸಿದವರಲ್ಲ. ಸಂಘ ಜೀವನದಲ್ಲಿ ಪ್ರೇರಕರಾಗಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದವರು. ನರೇಂದ್ರ ಅವರು ದೇಶಕ್ಕೋಸ್ಕರ, ಸಮಾಜಕ್ಕೋಸ್ಕರ ಬದುಕಿ ಬಾಳಿದವರು ಎಂದರು.

ಶ್ಯಾಮಲಾ, ಉದಯ ಶಂಕರ್, ದಿನೇಶ್, ಚಾಲಿ ಪೂವಪ್ಪ, ಪ್ರತೀಪ, ಶಿವಚಾಳಿಯಂಡ ಜಗದೀಶ್ ಅವರು ನರೇಂದ್ರ ಅವರ ಕುರಿತು ಮಾತನಾಡಿದರು. ಮೂವೇರ ಪಟ್ಟು ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಓಂಕಾರ್ ರವಿ ಗೀತ ನಮನ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-773536078

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.