ಸೋಮವಾರಪೇಟೆ: ತಾಲ್ಲೂಕಿನ ನಗರಳ್ಳಿ ಗ್ರಾಮದ ಕೂತಿನಾಡು ಸಬ್ಬಮ್ಮ ದೇವಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಬುಧವಾರ ನಗರಳ್ಳಿಯ ಮೂಲತಃ ದೇವಸ್ಥಾನದ ಬನದಲ್ಲಿ ನಡೆಯಿತು.

ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯದ ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಳೆದ ಎರಡು ದಿನದಿಂದ ಹಲವು ಪೂಜಾ ಕಾರ್ಯಕ್ರಮ ನಡೆದು, ಬುಧವಾರ ಪ್ರತಿಷ್ಠಾಪನೆ, ಬಿಂಬಶುದ್ದಿ, ಕಲಾವೃದ್ಧಿ ಹೋಮ, ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿ ನಡೆಯಿತು.

ಸಬ್ಬಮ್ಮ ದೇವಿಯು ಕೂತಿ, ಯಡದಂಟೆ, ನಗರಳ್ಳಿ, ಕುಂದಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಹಳ್ಳಿಯೂರು, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಜಕ್ಕನಳ್ಳಿ, ಇನಕನಳ್ಳಿ, ಕೊತ್ತನಳ್ಳಿ, ಕುಡಿಗಾಣ, ಬೆಂಕಳ್ಳಿ, ಬೀಕಳ್ಳಿ, ನಾಡಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಗ್ರಾಮಗಳ ಗ್ರಾಮ ದೇವತೆಯಾಗಿದ್ದು, ಪೂಜಾ ಕಾರ್ಯದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಎನ್. ಬೋಪ್ಪಯ್ಯ, ಗೌರವ ಅಧ್ಯಕ್ಷ ಕೆ.ಬಿ. ಜಗದೀಶ್, ಕಾರ್ಯದರ್ಶಿ ಕೆ.ಯು. ಜಗದೀಶ್ ಖಜಾಂಚಿ ಎನ್.ಬಿ. ಸುರೇಶ್, ಜಿ.ಆರ್. ಸುರೇಶ್, ಬಿ.ಪಿ. ಪ್ರದೀಪ್ ಕುಮಾರ್, ಎನ್.ಪಿ. ರುದ್ರಪ್ಪ, ಎನ್.ಬಿ. ರಮೇಶ್, ಬಿ.ಎಂ. ಪ್ರಕಾಶ್, ಕೆ.ಕೆ. ರಜಿತ್, ಎಸ್.ಜಿ. ಮೇದಪ್ಪ, ಕೂತಿ ಗ್ರಾಮಧ್ಯಕ್ಷ ಜಯರಾಮ್, ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಲೋಕೇಶ್, ಕೂತಿನಾಡು ಸಬ್ಬಮ್ಮ ದೇವರ ಸಮಿತಿ ಮಾಜಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ದಾನಿಗಳಾದ ಎನ್.ಎಂ. ಚಂದ್ರಶೇಖರ್, ಕೆ.ಟಿ. ನಂದೀಶ್, ಕೃಷ್ಣ, ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-51-965206952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.