ಮಡಿಕೇರಿ: ‘ಕೋಮು ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಪ್ರಕರಣಗಳನ್ನು ರಾಜ್ಯಸರ್ಕಾರ ವಾಪಸ್ ಪಡೆದು ಮತ್ತೆ ಅವರಿಗೆ ಕೋಮು ಪ್ರಚೋದನಾಕಾರಿಯಾಗಿ ಮಾತನಾಡಲು ಅವಕಾಶ ಕಲ್ಪಿಸಿದೆ’ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ ಆರೋಪಿಸಿದರು.

ಇಲ್ಲಿನ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಸೋಮವಾರ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಹಳೆಯ ಪ್ರಕರಣಗಳನ್ನೆಲ್ಲ ತೆಗೆದು ಹಾಕಿ ಮತ್ತೆ ಹೊಸದಾಗಿ ಕೋಮು ದ್ವೇಷ ಹುಟ್ಟಿಸುವ ರೀತಿಯಲ್ಲಿ ಮಾತನಾಡಿ ಎಂದು ಸರ್ಕಾರವೇ ಅನುವು ಮಾಡಿಕೊಟ್ಟಿದೆ. ಇದ ನಿಜಕ್ಕೂ ಸರಿಯಲ್ಲ’ ಎಂದು ಅವರು ಖಂಡಿಸಿದರು.

‘ಗೋಸಂರಕ್ಷಣೆಯ ಹೆಸರಿನಲ್ಲಿ ಮನೆಮನೆಗಳಿಗೆ ನುಗ್ಗುವ, ವಾಹನಗಳನ್ನು ತಡೆಯುವ ಅಧಿಕಾರವನ್ನು ಕೆಲವು ಸಂಘಟನೆಗಳ ಕಾರ್ಯಕರ್ತರಿಗೆ ಕೊಟ್ಟವರಾರು’ ಎಂದು ಪ್ರಶ್ನಿಸಿದ ಅವರು, ‘ಸರ್ಕಾರಕ್ಕೆ ಗೋವನ್ನು ಸಂರಕ್ಷಿಸುವ ಇಚ್ಛಾಶಕ್ತಿ ಇದ್ದರೆ ಕೂಡಲೇ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ’ ಎಂದು ಸವಾಲೆಸೆದರು.

ನಗರಸಭೆ ಸದಸ್ಯ ಮನ್ಸೂರ್ ಮಾತನಾಡಿ, ‘ಇನ್ನು ಚುನಾವಣೆಗೆ ಎರಡು ವರ್ಷಗಳಷ್ಟೇ ಬಾಕಿ ಇದೆ. ಈಗ ಈ ಹಿಂದೆ ಕೋಮು ಪ್ರಚೋದಕವಾಗಿ ಮಾತನಾಡಿದವರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತೆಗೆದು ಹಾಕಿದೆ. ಈ ಮೂಲಕ ಮುಂದಿನ ಎರಡು ವರ್ಷಗಳ ಅವರು ಹಿಂದಿನಂತೆಯೆ ಮಾತನಾಡಬೇಕು, ಮುಸ್ಲಿಮರಲ್ಲಿ ಭಯ ಸೃಷ್ಟಿಯಾಗಬೇಕು, ಮರಳಿ ಅವರು ಕಾಂಗ್ರೆಸ್ಗೆ ಮತ ಹಾಕಬೇಕು ಎಂಬ ಚಿಂತನೆಯಲ್ಲಿದೆ’ ಎಂದು ಆರೋಪಿಸಿದರು.

‘ಈ ಬಾರಿ ಮುಸ್ಲಿಮರು ಯಾವುದೇ ಕಾರಣಕ್ಕೂ ಹೆದರುವುದಿಲ್ಲ, ಹೆದರಿ ಕಾಂಗ್ರೆಸ್ಗೆ ಮತ ಹಾಕುವುದಿಲ್ಲ. ಈಗ ಜನರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡೂ ಪಕ್ಷಗಳ ರಾಜಕಾರಣ ಅರ್ಥವಾಗಿದೆ. ಇವು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಹೇಳಿದರು.

ಕಾಂಗ್ರೆಸ್ ಮತ ಗಳಿಕೆಗಾಗಿ ಯಾವ ಮಟ್ಟಾಗಾದರೂ ಇಳಿಯಬಲ್ಲುದು ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ನಗರಸಭಾ ಸದಸ್ಯರಾದ ಬಷೀರ್, ಮೇರಿ ವೇಗೇಸ್, ನೀಮಾ ಹರ್ಷದ್, ನಗರ ಅಧ್ಯಕ್ಷ ಮಹಮ್ಮದ್ ಅಲಿ, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಡ್ಕರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-51-1387359518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.