ಸೋಮವಾರಪೇಟೆ: ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಮಳೆಯಾಗಿದೆ.

ಕಳೆದ ಎರಡು ದಿನಗಳಿಂದ ಹೆಚ್ಚಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ರೈತರು ಮುಂದಾಗಿದ್ದಾರೆ. ಉತ್ತಮ ಮಳೆಯಾಗಿ, ಭೂಮಿ ಹದವಾದಲ್ಲಿ ಮಾತ್ರ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಸಾಧ್ಯ. ಈಗಾಗಲೇ ಸಾಕಷ್ಟು ರೈತರು ರಾಸಾಯನಿಕ ಗೊಬ್ಬರವನ್ನು ಖರೀದಿಸಿ ಗೋದಾಮುಗಳಲ್ಲಿ ಸಂಗ್ರಹಿಸಿದ್ದು, ಮಳೆಗಾಗಿ ಕಾಯುತ್ತಿದ್ದರು.

ಪಟ್ಟಣದಲ್ಲಿ ಮಳೆ ಬಂದಾಗ ಸಾರ್ವಜನಿಕರು ಪರದಾಡಿದರು. ಜೋರಾಗಿ ಗಾಳಿಯೊಂದಿಗೆ ಸುರಿದ ಮಳೆಯಿಂದ, ಕೊಡೆ ಹಿಡಿದು ನಡೆಯಲು ಕಷ್ಟಸಾಧ್ಯವಾಗಿತ್ತು. ಕೊಡೆ ಹಿಡಿದರೂ, ಗಾಳಿಯಿಂದಾಗಿ, ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಸಂಜೆಯವರೆಗೆ ಆಗಾಗ ಮಳೆಯ ಸಿಂಚನ ಮುಂದುವರಿದಿತ್ತು.

ಈ ಮಳೆಯು ಉತ್ತಮ ಮುಂಗಾರಿನ ನಿರೀಕ್ಷೆಯನ್ನು ಜನರಲ್ಲಿ ಗರಿಗೆದರಿಸಿದೆ. ಈ ಮೂಲಕ ಒಳ್ಳೆಯ ಮಳೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಜನರಿದ್ದಾರೆ.

ಪ್ರಸಕ್ತ ವರ್ಷ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗಿತ್ತು. ಪೂರ್ವ ಮುಂಗಾರು ಬೆಳೆಗಾರರ ನಿರೀಕ್ಷೆಗಳನ್ನು ಹುಸಿಗೊಳಿಸಿತ್ತು. ಇದೀಗ ಬೇಸಿಗೆಯ ಅಂತ್ಯದಲ್ಲಿ ಮುಂಗಾರಿನ ಆರಂಭಕ್ಕೆ ಕೆಲವೇ ದಿನಗಳಿರುವಂತೆ ಮಳೆ ಸುರಿದಿರುವುದು ರೈತರಲ್ಲಿ ಸಮಾಧಾನ ತರಿಸಿದೆ.

ಎಲ್ನಿನೊ ಪರಿಣಾಮದಿಂದ ಈ ವರ್ಷ ಮುಂಗಾರು ಮಳೆ ಕಡಿಮೆಯಾಗಲಿವೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಗಳು ಬೆಳೆಗಾರರ ನಿದ್ದೆಗೆಡಿಸಿದ್ದವು. ಈಗ ಸುರಿದ ಮಳೆಯು ಅವರ ಚಿಂತೆಯನ್ನು ಕೊಂಚವಾದರೂ ದೂರ ಮಾಡಿವೆ.

ಇನ್ನು ಒಂದೆರಡು ದಿನಗಳಲ್ಲಿ ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸುರಿದ ಮಳೆಯು ಉತ್ತಮ ಮುಂಗಾರಿಗೆ ವೇದಿಕೆ ನಿರ್ಮಿಸಿದೆ.

ಮಡಿಕೇರಿಯಲ್ಲಿ ಮಂಗಳವಾರ ವಾತಾವರಣ ಸಂಪೂರ್ಣ ವಿಭಿನ್ನವಾಗಿತ್ತು. ಸೋಮವಾರ ಮಧ್ಯಾಹ್ನ ದಿಗಿಲು ಹುಟ್ಟಿಸುವಂತಹ ರೀತಿ ಸಿಡಿಲುಗಳು ಸುಮಾರು ಒಂದು ಗಂಟೆಗಳ ಅಬ್ಬರಿಸಿದವು. ಮಂಗಳವಾರವೂ ಗುಡುಗಿನ ವಾತಾವರಣ ಇತ್ತು. ಮಧ್ಯಾಹ್ನದ ಹೊತ್ತಿಗೆ ಸೋನೆ ಮಳೆ ಆರಂಭವಾಯಿತು. ಸಂಜೆ ಹೊತ್ತಿಗೆ ದಟ್ಟ ಮೋಡಗಳು ಕವಿದವು. ಮುಂಗಾರಿನಂತೆ ಮಂಜು ಮುಸುಕಿತು.

ಮುಂಗಾರು ಮಾರುತಗಳು ಪ್ರವೇಶಿಸಬಹುದೇ ಎಂಬ ಸಂದೇಹವನ್ನೂ ಹುಟ್ಟು ಹಾಕಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-869319628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.