ಸೋಮವಾರಪೇಟೆ: ಬಿಸಿಲಿನ ಜಳಕ್ಕೆ ಕಂಗೆಟ್ಟಿರುವ ತಾಲ್ಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ.

ತಾಲ್ಲೂಕಿನ ಹಿರಿಕರ ಗ್ರಾಮದ ಕೃಷಿಕರು, ಸೋಮವಾರ ಗ್ರಾಮದ ಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಾಲಂಬಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಬೆಟ್ಟದ ಮಳೆಮಲ್ಲೇಶ್ವರ ಹಾಗೂ ಬಸವಣ್ಣ ದೇವರಿಗೆ ಸಾಮೂಹಿಕ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. ಅರೇಬಿಕಾ ಕಾಫಿ ತೋಟಗಳಿಗೆ ಅಲ್ಪಸ್ವಲ್ಪ ಮಳೆ ಬಿದ್ದ ಪರಿಣಾಮ ಶೇ 50ರಷ್ಟು ಕಾಫಿ ಹೂ ಅರಳಿದೆ. ಈ ಸಂದರ್ಭದಲ್ಲಿ ಮಳೆ ಬಿದ್ದರೆ ಮಾತ್ರ ಫಸಲು ಉಳಿಯುತ್ತದೆ. ಈಗ ಮಳೆ ಬೀಳದ ಹಿನ್ನೆಲೆಯಲ್ಲಿ ಕೃಷಿಕರು ಆತಂಕಗೊಂಡಿದ್ದಾರೆ. ಈ ಕಾರಣದಿಂದ ಮಳೆಗಾಗಿ ದೇವರ ಮೊರೆ ಹೋಗಿದ್ದೇವೆ ಎಂದು ಹಿರಿಕರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ.ಶಿವಪ್ರಕಾಶ್ ಹೇಳಿದರು.

ಕಾರ್ಯದರ್ಶಿ ಕೀರ್ತಿ ಮುತ್ತಣ್ಣ, ಖಜಾಂಚಿ ಸಿ.ಎಲ್.ವೆಂಕಟೇಶ್, ಸಲಹೆಗಾರ ಎಚ್.ಪಿ.ಸುರೇಶ್ ಸೇರಿದಂತೆ ಗ್ರಾಮದ ಹಿರಿಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-51-1467712575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.