ಪ್ರಜಾವಾಣಿ ವಾರ್ತೆ

ಮಡಿಕೇರಿ: ಕಳೆದು ಹೋಗಿದ್ದು, ಮತ್ತೆಂದೂ ಸಿಕ್ಕುವುದೇ ಇಲ್ಲ ಎಂದುಕೊಂಡಿದ್ದು, ಮತ್ತೆ ಸಿಕ್ಕಾಗ ಸಿಕ್ಕ ಖುಷಿ ಅಷ್ಟಿಷ್ಟಲ್ಲ. ‘ಬಲ್ಲವನೇ ಬಲ್ಲ, ಬೆಲ್ಲದ ಸವಿಯ’ ಎಂಬ ಮಾತಿನಂತೆ ಕಳೆದುಹೋದ ವಸ್ತುಗಳು ಸಿಕ್ಕಾಗ ಅನುಭವಿಸುವ ಸಂತಸ ಅದನ್ನು ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಕಳೆದುಕೊಂಡಿದ್ದು, ಲಕ್ಷ ರೂಪಾಯಿ ಮೌಲ್ಯದ ಆಭರಣಗಳು, ಕಾಫಿ, ಕಾರು, ಹಣವಾಗಿದ್ದರೆ ಹೇಗಾಗಿರಬೇಡ? ಇಂತಹದ್ದೊಂದು ಅಪರೂಪದ ಕ್ಷಣಕ್ಕೆ ಇಲ್ಲಿನ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿ ಸಾಕ್ಷಿಯಾಯಿತು.

ಆರೋಪಿಗಳನ್ನು ಬಂಧಿಸಿ ಅವರಿಂದ ವಶಪಡಿಸಿಕೊಂಡ ಒಡವೆ, ಹಣ ಮತ್ತಿತ್ತರೆ ವಸ್ತುಗಳನ್ನು ವಾಪಸ್ ವಾರಸುದಾರರಿಗೆ ಮರಳಿಸುವ ಕಾರ್ಯಕ್ರಮದಲ್ಲಿ ಕೆಲವರು ಭಾವುಕರಾದರು. ಪೊಲೀಸರಿಗೆ ತುಂಬು ಹೃದಯ ಧನ್ಯವಾದ ಅರ್ಪಿಸಿದರು. ಇವರಲ್ಲಿ ಸಹಾಯಕ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರ ಪತ್ನಿಯೂ ಇದ್ದರು.

ಇಲ್ಲಿನ ಎಫ್ಎಂಸಿ ಕಾಲೇಜಿನ ಹಿಂಭಾಗದ ಬಡಾವಣೆಯಲ್ಲಿ ವಾಸ ಇರುವ ಡಾ.ಪಾರ್ಥಸಾರಥಿ ಅವರ ಮನೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮಹಂತೇಶ್ ಪೂಜಾರ ಎಂಬಾತನೇ ಲಕ್ಷಾಂತರ ರೂಪಾಯಿ ಚಿನ್ನಾಭರಣ, ನಗದನ್ನು ಕಳವು ಮಾಡಿದ್ದ. ಆತನನ್ನು ಬಂಧಿಸಿ ₹ 5.09 ಲಕ್ಷ ನಗದು, 137 ಗ್ರಾಂ ಚಿನ್ನಾಭರಣಗಳು ಹಾಗೂ 1 ಮೊಬೈಲ್ ಅನ್ನು ಪಾರ್ಥಸಾರಥಿ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ನೀಡಿದಾಗ ಅವರು ಪೊಲೀಸರಿಗೆ ಧನ್ಯವಾದ ಸಮರ್ಪಿಸಿದರು.ಕುಶಾಲನಗರದ ಕುಸುಮಾವತಿ ಮತ್ತು ರೂಪಾ ಅವರು ಸಹ ತಮ್ಮ ಚಿನ್ನದ ಸರಗಳನ್ನು ಮರಳಿ ಪಡೆದಾಗ ಖುಷಿಪಟ್ಟರು.

ಮಡಿಕೇರಿ, ಪೊನ್ನಂಪೇಟೆ, ಕುಶಾಲನಗರ ಗ್ರಾಮಾಂತರ ಹಾಗೂ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 23 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಎಲ್ಲಾ ವಿವರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಂತರ, ಎಲ್ಲರಿಗೂ ಆರೋಪಿಗಳಿಂದ ವಶಪಡಿಸಿಕೊಂಡಿದ್ದನ್ನು ಹಸ್ತಾಂತರಿಸಿದರು.

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೀಳೂರು ಗ್ರಾಮದಲ್ಲಿನ ಆದೇಂಗಡ ಕುಟುಂಬದ ಐನ್ಮನೆಯಲ್ಲಿಪೊನ್ನಪ್ಪಸಂತೆಯ ಕಲ್ಲುಗುಡ್ಡೆ ಈಶ್ವರ ದೇವಸ್ಥಾನದ ಪಾರಂಪರಿಕ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಆದೇಂಗಡ ಕುಟುಂಬಸ್ಥರ ಸುಪರ್ದಿಯಲ್ಲಿತ್ತು. ಇಲ್ಲಿದ್ದ ಅಂದಾಜು ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ವಶಪಡಿಸಿಕೊಂಡ ₹ 50,700 ನಗದು, 2.4 ಕೆ.ಜಿ ಬೆಳ್ಳಿ, 5.5 ಗ್ರಾಂ ಚಿನ್ನವನ್ನು ಮರಳಿ ಸಂಬಂಧಪಟ್ಟವರಿಗೆ ನೀಡಲಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಚಿನ್ನಾಭರಣ, ಕಾಫಿ ಹಾಗೂ ಎರಡುಕಾರು ಕಳವು ಮಾಡಿರುವ ಕುರಿತು ದಾಖಲಾಗಿದ್ದ 3 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿಯನ್ನು ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಿಂದ ವಶಪಡಿಸಿಕೊಂಡ 63.19 ಗ್ರಾಂ ಚಿನ್ನ, 6,494 ಕೆ.ಜಿ ಕಾಫಿ ಹಾಗೂ 2 ಕಾರುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ 4 ಪ್ರಕರಣಗಳ ಪೈಕಿ 11 ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಿಂದ ವಶಪಡಿಸಿಕೊಂಡ 22.60 ಗ್ರಾಂ ಚಿನ್ನ, 5 ಚೀಲ ಪಾರ್ಚ್ಮೆಂಟ್ ಕಾಫಿ, ₹ 50 ಸಾವಿರ ನಗದು ಹಾಗೂ 75 ಕೆ.ಜಿ ಕಾಳು ಮೆಣಸನ್ನು ಕಳೆದುಕೊಂಡಿದ್ದವರಿಗೆ ವಾಪಸ್ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-51-2093847218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.