ಭಕ್ತರ ಬೇಡಿಕೆಗಳನ್ನು ಈ ದೈವಗಳು ಈಡೇರಿಸಿವೆ ಎಂಬ ಕಾರಣಕ್ಕೆ ಕೊಡಗು ಸೇರಿದಂತೆ ಮೈಸೂರು, ದಕ್ಷಿಣ ಕನ್ನಡ ಭಾಗಗಳಿಂದ ಭಕ್ತರು ಬಂದು ದೈವದ ದರ್ಶನ ಪಡೆಯುತ್ತಾರೆ. ಕಷ್ಟಗಳ ಪರಿಹರಿಸುವ ಕಾರಣಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ
ಬಿ.ಡಿ.ರಾಜು ರೈ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಮುಖ್ಯಸ್ಥ
ಏ.14ರಿಂದ ನಡೆಯುವ ಧರ್ಮದೈವದ ನೇಮೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೈವ ಆರಾಧಕರು ಕೋಲ ಕಟ್ಟುತ್ತಾರೆ. ಸುತ್ತಮುತ್ತಲಿನ ಭಕ್ತರು ಆಗಮಿಸಿ ತಮ್ಮ ಕಷ್ಟಗಳನ್ನ ದೈವಗಳ ಮುಂದೆ ಇಡುತ್ತಾರೆ
ಶಿವಪ್ರಸಾದ್ ರೈ, ದೈವ ಆರಾದಕ
ಹಲವು ವರ್ಷಗಳಿಂದ ಈ ದೈವಸ್ಥಾನಕ್ಕೆ ಬಂದು ದೈವದ ಮುಂದೆ ಕಷ್ಟಗಳನ್ನ ಹೇಳಿದ್ದೇನೆ. ಕೆಲವೇ ದಿನಗಳಲ್ಲಿ ಕಷ್ಟ ನಿವಾರಣೆಯಾಗಿದೆ. ಹಾಗಾಗಿ ಈ ದೈವಸ್ಥಾನದ ಬಗ್ಗೆ ನನಗೆ ಅಪಾರ ನಂಬಿಕೆ ಇದೆ