ಸುಂಟಿಕೊಪ್ಪ: ಇಲ್ಲಿನ ಧರ್ಮಕೇಂದ್ರದ ಪಾಲಕರಾದ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವವು ಭಾನುವಾರ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು.

ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಎಸ್.ಜೆ.ಪ್ರಾನ್ಸಿಸ್ ಸೆರಾವೋ ಅವರನ್ನು ಕನ್ನಡ ವೃತ್ತದಲ್ಲಿ ಚರ್ಚ್ನ ಧರ್ಮಗುರು ವಿಜಯಕುಮಾರ್ ಹೂಗುಚ್ಛ ನೀಡಿ ಬರಮಾಡಿಕೊಳ್ಳುವುದರೊಂದಿಗೆ ವಾದ್ಯಗೋಷ್ಠಿಯ ಮೂಲಕ ಸಂತ ಅಂತೋಣಿ ಚರ್ಚ್ಗೆ ಕರೆ ತರಲಾಯಿತು.

ಸಂಜೆ ಪ್ರಾನ್ಸಿಸ್ ಸೆರಾವೋ ಅವರು ಸಂತ ಅಂತೋಣಿಯವರ ಹಬ್ಬದ ಆಡಂಬರ ಗಾಯನ, ದಿವ್ಯ ಬಲಿಪೂಜೆ, ದೃಢೀಕರಣ, ಸಂಸ್ಕಾರ ನೆರವೇರಿಸಿಕೊಟ್ಟರು.

‘ದೇವರಲ್ಲಿ ಭಕ್ತಿಯ ಜೊತೆಗೆ, ಸಮಾಜದೊಂದಿಗೆ ಬೆರೆತು ಸೇವೆ ಸಲ್ಲಿಸಬೇಕು. ತಪ್ಪು ಮಾಡಿದಾಗ ದೇವರಲ್ಲಿ ಕ್ಷಮೆ ಇದೆ. ಅದನ್ನೇ ಬಂಡವಾಳವಾಗಿಸಿಕೊಳ್ಳಬಾರದು’ ಎಂದು ಹೇಳಿದರು.

ದಿವ್ಯ ಬಲಿಪೂಜೆಯ ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತರ ಮೂರ್ತಿಯ ಜೊತೆಯಲ್ಲಿ ಮೈಸೂರಿನ ವಾದ್ಯಗೋಷ್ಠಿ, ಚಂಡೆ ಮೇಳದೊಂದಿಗೆ ಭವ್ಯ ಮೆರವಣಿಗೆಯು ಸಂತ ಅಂತೋಣಿ ದೇವಾಲಯದಿಂದ ಸೆಸ್ಕ್ ಇಲಾಖೆಯವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಅಯ್ಯಪ್ಪ ದೇವಾಲಯವರೆಗೆ ಸಾಗಿ ಅಲ್ಲಿಂದ ಅದೇ ಮಾರ್ಗವಾಗಿ ಚರ್ಚ್ ಆವರಣದವರೆಗೆ ಗಾಯನ, ಕ್ರೈಸ್ತ ಭಕ್ತರು ಕ್ಯಾಂಡಲ್ ಹಿಡಿದು ಬೈಬಲ್ ಪಠಣ ಮಾಡುತ್ತಾ ಸಾಗಿದರು. ಮೆರವಣಿಗೆಯ ನಂತರ ಧರ್ಮಗುರುಗಳಿಂದ ಪರಮ ಪ್ರಸಾದ ಆಶೀರ್ವಾದ ನೆರವೇರಿತು.

ಪ್ರತೀ ವರ್ಷದಂತೆ ಈ ವರ್ಷವೂ ದೇವಾಲಯದ ಕುಟುಂಬಗಳ ಏಕತೆ ಮತ್ತು ಆರೋಗ್ಯಕ್ಕಾಗಿ ಮಧ್ಯಾಹ್ನ 2ರಿಂದ ಬಲಿಪೂಜೆಯವರೆಗೆ ಅಂಬುಕಾಣಿಕೆಯನ್ನು ಏರ್ಪಡಿಸಲಾಯಿತು.

ಗುರುವಾರ ಸಂಜೆ ಧ್ಚಜಾರೋಹಣದೊಂದಿಗೆ ಚಾಲನೆಗೊಂಡ ವಾರ್ಷಿಕೋತ್ಸವವು ಬಲಿಪೂಜೆಯೊಂದಿಗೆ ಸಂಪನ್ನವಾಯಿತು. .

ಮೈಸೂರು ಧರ್ಮಕ್ಷೇತ್ರದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಎಡ್ಚರ್ಡ್ ವಿಲಿಯಂ ಸಲ್ಢಾನಾ, ಮಡಿಕೇರಿ ವಲಯದ ಧರ್ಮಗುರು ಹಾಗೂ ಸಂತ ಮೈಕೇಲರ ಚರ್ಚ್ನ ಧರ್ಮ ಗುರು ಜಾರ್ಜ್ ದೀಪಕ್, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯಕುಮಾರ್, ಏಳನೇ ಹೊಸಕೋಟೆ ಸಂತ ಸೆಭಾಸ್ಡೀನ್ ಚರ್ಚ್, ಹಟ್ಟಿಹೊಳೆ, ಮಾದಾಪುರ, ಕುಶಾಲನಗರ, ಮಡಿಕೇರಿ ಚರ್ಚ್ಗಳ ಧರ್ಮಗಳು ಇದ್ದರು.

ಸುಂಟಿಕೊಪ್ಪ, ಕೊಡಗರಹಳ್ಳಿ, ಮಾದಾಪುರ, ಕೆದಕಲ್, ಕಂಬಿಬಾಣೆ, ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ ಭಾಗದ ನೂರಾರು ಕ್ರೈಸ್ತರು ಆಗಮಿಸಿದ್ದರು.

ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ವಿದ್ಯುತ್ ದೀಪ, ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕರಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-60480268

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.