ಸುಂಟಿಕೊಪ್ಪ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬರದ ಛಾಯೆ ಆವರಿಸಿದೆ. ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸನ್ನಿವೇಶ ಸನ್ನಿಹಿತವಾಗುತ್ತಿದೆ.

ಕಾಫಿ ತೋಟದ ನಡುವೆ ಹರಿಯುತ್ತಿದ್ದ ಸಣ್ಣ ಪುಟ್ಟ ತೊರೆಗಳು ಒಣಗಿವೆ. ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮತ್ತೊಂದೆಡೆ ಹಿನ್ನೀರು ಪ್ರದೇಶವಾದ ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿಯೂ ನೀರಿನ ಪ್ರಮಾಣ ಇಳಿಕೆಯಾಗಿದೆ.

ಬಿಸಿಲಿನ ತಾಪಕ್ಕೆ ಹುಲ್ಲು, ಗಿಡಗಳು ಒಣಗಿ ಹೋಗಿವೆ. ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. 2018ರ ಭೂಕುಸಿತದಿಂದ ಹೊಳೆಯನ್ನು ಆವರಿಸಿದ್ದ ಮಣ್ಣಿನಿಂದಾಗಿ ಮಳೆಗಾಲಕ್ಕೆ ತಿಂಗಳಿರುವಾಗಲೇ ನೀರು ಮಾಯವಾಗುತ್ತಿದೆ.

ಹೊಳೆಯನ್ನು ಅವಲಂಬಿಸಿರುವ ರೈತರು ತಮ್ಮ ತೋಟಗಳಿಗೆ ನೀರು ಹರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.

ಇದಲ್ಲದೇ, ಹಟ್ಟಿಹೊಳೆ, ಮಾದಾಪುರದ ಹೊಳೆಗಳಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಈ ಭಾಗದಲ್ಲಿ ಭಾರಿ ಬಿರುಸಿನ ಮಳೆ ಈ ವರ್ಷ ಸುರಿದೇ ಇಲ್ಲ. ಹೊಳೆ ತುಂಬಿ ಹರಿಯುವಷ್ಟು ಮಳೆಯೂ ಆಗಿಲ್ಲ. ಇದರಿಂದ ಯಾವಾಗಲೂ ತಂಪಾಗಿರುತ್ತಿದ್ದ ಸುಂಟಿಕೊಪ್ಪ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಇದೀಗ ಸೆಖೆಯ ವಾತಾವರಣ ಮೂಡಿದೆ.

ಕಾಫಿ ತೋಟಗಳಲ್ಲಿ ಹೀಗಾಗಲೇ ಕೃತಕ ನೀರಾವರಿ ವ್ಯವಸ್ಥೆಯನ್ನು ಬೆಳೆಗಾರರು ಅವಲಂಬಿಸಿದ್ದಾರೆ. ಎಷ್ಟೇ ನೀರು ಹರಿಸಿದರೂ ಬಿಸಿಲ ಬೇಗೆ ಹೇಗಿದೆ ಎಂದರೆ ಆ ನೀರೆಲ್ಲವೂ ಕೆಲ ದಿನಗಳಲ್ಲೇ ಆವಿಯಾಗುತ್ತಿದೆ. ಕೆಲವೆಡೆ ತೋಟಗಳಲ್ಲಿರುವ ಕೆರೆಯ ನೀರು ಸಹ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಇದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

‘ಗರಗಂದೂರು ವ್ಯಾಪ್ತಿಯ ವಿವಿಧ ಕಾಲೊನಿಗಳಲ್ಲಿ ಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನ ತತ್ತರಿಸಿಹೋಗಿದ್ದಾರೆ’ ಎನ್ನುತ್ತಾರೆ ಗರಗಂದೂರು ನಿವಾಸಿ ದಿನೇಶ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1260798829

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.