ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಉತ್ಸವ ಮುಗಿದ ಮೇಲೂ ಗಿಡ ನೆಡುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಚೇನಂಡ ಹಾಕಿ ಉತ್ಸವದ ಕಾರ್ಯದರ್ಶಿ ಮಧು ಮಾದಯ್ಯ ಹೇಳಿದರು.

‘ಗೋಲಿಗೊಂದು ಗಿಡ’ ಎಂಬ ಅಭಿಯಾನದಡಿ 2,200ಕ್ಕೂ ಅಧಿಕ ಸಸಿಗಳನ್ನು ಜಿಲ್ಲೆಯ ವಿವಿಧೆಡೆ ನೆಡಲಾಗಿದೆ. 1,520 ಗೋಲುಗಳು ದಾಖಲಾಗಿವೆ. ದಾಖಲಾದ ಗೋಲಿಗಿಂತಲೂ ಅಧಿಕ ಗಿಡಗಳನ್ನು ನೆಡಲಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗಿಡ ನೆಡಲು ಹಣ ಮೀಸಲಿರಿಸಿದ್ದೇವೆ. ಮುಂದೆ ನಶಿಸುವ ಹಂತದಲ್ಲಿರುವ ಕಾಡುಜಾತಿಯ ಹಣ್ಣು ಗಿಡಗಳನ್ನು ನೆಡಲು ಚಿಂತನೆ ನಡೆಸಿದ್ದೇವೆ’ ಎಂದರು.

ಸಮಿತಿಯ ಕಾರ್ಯಾಧ್ಯಕ್ಷ ದೀನಾ ಚೆಂಗಪ್ಪ ಮಾತನಾಡಿ, ‘ಈಗಾಗಲೇ ನೆಟ್ಟಿರುವ ಎಲ್ಲ ಗಿಡಗಳನ್ನು ಆಗಿದ್ದಾಂಗ್ಗೆ ನಾವು ವೀಕ್ಷಿಸುತ್ತಿದ್ದೇವೆ. ಅವುಗಳೆಲ್ಲವೂ ಉತ್ತಮವಾಗಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಆ ಗಿಡಗಳು ಮರಗಳಾಗುವವರೆಗೆ ಅವುಗಳ ಯೋಗಕ್ಷೇಮ ನೋಡಿಕೊಳ್ಳಲಾಗುವುದು’ ಎಂದರು.

ಸುಮಾರು 500ಕ್ಕೂ ಹೆಚ್ಚು ಜೇನುಪೆಟ್ಟಿಗೆಗಳನ್ನು ವಿತರಿಸಲಾಗಿದೆ. ಆ ಪೆಟ್ಟಿಗೆಗಳಿಗೆ ಜೇನುನೊಣಗಳ ಅಗತ್ಯ ಕಂಡು ಬಂದಲ್ಲಿ ಚೇನಂಡ ಹಾಕಿ ಸಮಿತಿಯು ಕೆಲವು ವ್ಯವಸ್ಥೆಗಳನ್ನು ಮಾಡಿದೆ. ಜೇನುನೊಣಗಳು ಬೇಕಾದ್ದಲ್ಲಿ ಸಮಿತಿಯುವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಉತ್ಸವ ಸಮಿತಿ ಅಧ್ಯಕ್ಷ ಕಂಬಣಿ ಕರುಂಬಯ್ಯ, ವಕ್ತಾರ ಸುರೇಶ್ ನಾಣಯ್ಯ, ಸದಸ್ಯ ತಮ್ಮಿ ತಮ್ಮಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1804452973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.