ಮಡಿಕೇರಿ: ‘ಮನುಷ್ಯನಿಗೆ ಇತರೆ ಅಂಗಗಳಂತೆ ಧ್ವನಿಪೆಟ್ಟಿಗೆಯ ಆರೋಗ್ಯವೂ ಬಹಳ ಮುಖ್ಯ. ಹಾಗಾಗಿ, ಎಲ್ಲರೂ ತಮ್ಮ ತಮ್ಮ ಧ್ವನಿ ಪೆಟ್ಟಿಗೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ತಜ್ಞರಾದ ಡಾ.ದಿವ್ಯಾ ಸೇಠ್ ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು, ಗಂಟಲು ವಿಭಾಗದಿಂದ ಸಂಸ್ಥೆಯ ಸಭಾಂಗಣದಲ್ಲಿ ‘ವಿಶ್ವ ಧ್ವನಿ’ ದಿನದ ಅಂಗವಾಗಿ ಶನಿವಾರ ನಡೆದ ‘ನಮ್ಮ ಧ್ವನಿಯ ಆರೈಕೆ’ ಎಂಬ ವಿಷಯ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕರು, ಶಿಕ್ಷಕರು, ಹಾಡುಗಾರರು, ಸಂಗೀತಗಾರರು ಸೇರಿದಂತೆ ಹೆಚ್ಚು ಮಾತನಾಡುವಂತಹ ಉದ್ಯೋಗದಲ್ಲಿರುವವರು ವಿಶೇಷವಾಗಿ ಧ್ವನಿಪೆಟ್ಟಿಗೆಯ ಕುರಿತು ಕಾಳಜಿ ವಹಿಸಬೇಕು ಎಂದರು.

ನಿರಂತರ ಮಾತನಾಡಬಾರದು, ಅತಿ ಜೋರಾಗಿ ಮಾತನಾಡಬಾರದು. ನಡುನಡುವೆ ವಿರಾಮ ಕೊಡಬೇಕು. ಜೋರಾಗಿ ಮಾತನಾಡಲೇ ಬೇಕಿದ್ದರೆ ಮೈಕ್ ಬಳಸಬೇಕು ಎಂದು ಹಲವು ಸಲಹೆಗಳನ್ನು ನೀಡಿದರು.

ಕೇವಲ ಹೆಚ್ಚಿನ ಮತ್ತು ಜೋರು ಮಾತುಗಳಿಂದ ಮಾತ್ರವೇ ಧ್ವನಿಪೆಟ್ಟಿಗೆಗೆ ಹಾನಿಯಾಗುವುದಿಲ್ಲ. ಇದರೊಂದಿಗೆ ನಾವು ಸೇವಿಸುವ ಆಹಾರದಿಂದಲೂ ಧ್ವನಿಪೆಟ್ಟಿಗೆಗೆ ಕುತ್ತು ಬರುವ ಸಾಧ್ಯತೆ ಇದೆ. ಹಾಗಾಗಿ, ಅತಿ ಹೆಚ್ಚಾಗಿ ಎಣ್ಣೆ ಮತ್ತು ಖಾರದ ತಿನಿಸುಗಳು, ಜಂಕ್ ಫುಡ್ಗಳಿಂದ ದೂರ ಇರಬೇಕು. ಮಲಗುವುದಕ್ಕೆ ಕನಿಷ್ಠ 2 ಗಂಟೆ ಮುಂಚಿತವಾಗಿ ಊಟ ಮಾಡಬೇಕು ಎಂದು ಅವರು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ಮಾತನಾಡಿ, ‘ಧ್ವನಿಪೆಟ್ಟಿಗೆ ಕೇವಲ ಧ್ವನಿ ಹೊರಡಿಸುವುದಕ್ಕೆ ಮಾತ್ರವೇ ಇಲ್ಲ. ಅದು ಶ್ವಾಸಕೋಶವನ್ನು ರಕ್ಷಿಸುವುದರಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ, ಕೇವಲ ಮಾತಿಗಾಗಿ ಮಾತ್ರವಲ್ಲ ದೇಹದ ಆರೋಗ್ಯಕ್ಕಾಗಿ ಧ್ವನಿಪೆಟ್ಟಿಗೆಯ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲೇ ಬೇಕಿದೆ’ ಎಂದರು.

ಅದಕ್ಕಾಗಿ ಯಾವುದೇ ವಿಧದ ತಂಬಾಕನ್ನು ಸೇವನೆ ಮಾಡಲೇಬಾರದು, ದುಶ್ಚಟಗಳಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.

ಇಎನ್ಟಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಪೂಜಾ ಅವರು ಧ್ವನಿಯ ವಿಕಸನವನ್ನು ವಿವರಿಸಿದರು. ಇದು ಅಭಿವ್ಯಕ್ತಿಗೆ ಪ್ರಬಲ ಮಾಧ್ಯಮವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾತನಾಡಿದರು.

ಧ್ವನಿ ಕೇವಲ ಒಂದು ಪ್ರಮುಖ ಅಂಗವಲ್ಲದೆ, ಮಾನವರನ್ನು ಸುತ್ತಮುತ್ತಲಿನ ಪ್ರಪಂಚದೊಂದಿಗೆ ಅರ್ಥಪೂರ್ಣವಾಗಿ ಸಂಪರ್ಕಿಸಲು ಧ್ವನಿ ಪೆಟ್ಟಿಗೆ ಬಹಳ ಮುಖ್ಯ ಎಂದರು.

ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್ ಅವರು ದೈನಂದಿನ ಜೀವನದಲ್ಲಿ ಧ್ವನಿ ಆರೋಗ್ಯದ ಮಹತ್ವ ಕುರಿತು ಮಾಹಿತಿ ನೀಡಿದರು.

1993 ರಿಂದ ಸಂಗೀತವನ್ನು ಬೋಧಿಸುತ್ತಿರುವ ಸಂಗೀತ ಶಿಕ್ಷಕಿ ವಿದುಷಿ ಸರೋಜಾ ಸುಧಾಕರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಉಪ-ಪ್ರಾಂಶುಪಾಲರಾದ ಡಾ.ಇಶಾ ರಾವ್, ಸಿಎಒ ರೋಹಿಣಿ ಮತ್ತು ಆರ್ಎಂಒ ಡಾ.ಧನಂಜಯ ಕುಮಾರ್, ಇಎನ್ಟಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ನಳಿನಾ, ಎಂಬಿಬಿಎಸ್ ವಿದ್ಯಾರ್ಥಿಗಳಾದ ಐಶ್ವರ್ಯ ಮತ್ತು ಪ್ರತೀಕ್ಷಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-26587138

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.