ಮಡಿಕೇರಿ: ‘ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಈಗ ಇರುವ ಶಾಸನಸಭೆಯ ಸ್ಥಾನಗಳಲ್ಲೇ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಈಗಾಗಲೆ ಅಂಗೀಕಾರವಾಗಿರುವ ಮಹಿಳಾ ಮೀಸಲು ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು’ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಒತ್ತಾಯಿಸಿದರು.

‘ಸಂಸತ್ ಸದಸ್ಯ ಸ್ಥಾನ ಹೆಚ್ಚಿಸುವ ಪ್ರಸ್ತಾವದೊಂದಿಗೆ ಮಹಿಳಾ ಮೀಸಲು ವಿಧೇಯಕವನ್ನು ಕೇಂದ್ರ ತಂದಿತ್ತು. ಆದರೆ, ಸಂಸತ್ ಸದಸ್ಯ ಸ್ಥಾನ ಹೆಚ್ಚಿಸುವ ಅಥವಾ ಕ್ಷೇತ್ರ ಪುನರ್ವಿಂಗಡನೆಯ ಕೆಲಸ ಅಷ್ಟು ಸುಲಭವಲ್ಲ. ಅದೊಂದು ಸುದೀರ್ಘ ಕಸರತ್ತು. ಮುಂದೆ ಈ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುವಂತಹ ಅವಕಾಶಗಳಿದ್ದವು. ಹಾಗಾಗಿಯೇ, ಕಾಂಗ್ರೆಸ್ ಕೇಂದ್ರದ ಈ ಪ್ರಯತ್ನಕ್ಕೆ ಬೆಂಬಲ ಕೊಡಲಿಲ್ಲ’ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಕ್ಷೇತ್ರ ಪುನರ್ವಿಂಗಡನೆಯೊಂದಿಗೆ ಮಹಿಳಾ ಮೀಸಲಾತಿಯನ್ನೂ ಸೇರಿಸಿ ಮಹಿಳೆಯರಿಗೆ ಮೀಸಲಾತಿ ಸಿಗದಂತೆ ಮಾಡುವ ಹುನ್ನಾರ ಕೇಂದ್ರದ್ದು. ನಿಜಕ್ಕೂ ಅವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಈಗಾಗಲೇ ಅಂಗೀಕಾರವಾಗಿರುವ ಈಗ ಇರುವ ಸಂಸತ್ ಸದಸ್ಯ ಸ್ಥಾನದಲ್ಲೇ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ದೇಶದ ರಾಜಕೀಯ ಪಕ್ಷವೊಂದರ ಮೊದಲ ಮಹಿಳಾ ಅಧ್ಯಕ್ಷೆಯನ್ನಾಗಿ ಅನಿಬೆಸೆಂಟ್ ಅವರನ್ನು ಮಾಡಿದ್ದು, ಮೊದಲ ಪ್ರಧಾನಮಂತ್ರಿಯನ್ನಾಗಿ ಇಂದಿರಾಗಾಂಧಿ ಅವರನ್ನು ಮಾಡಿದ್ದು, ಮಹಿಳಾ ಮುಖ್ಯಮಂತ್ರಿಯನ್ನಾಗಿ ಸುಚೇತನಾ ಕೃಪಾಲನಿಯನ್ನು ಮಾಡಿದ್ದು, ಮೊದಲ ರಾಷ್ಟ್ರಪತಿಯನ್ನಾಗಿ ಪ್ರತಿಭಾ ಪಾಟೀಲ್ ಅವರನ್ನು ಮಾಡಿದ್ದು, ಮೊದಲ ಲೋಕಸಭಾ ಸ್ಪೀಕರ್ ಅನ್ನಾಗಿ ಮೀರಾಕುಮಾರ್ ಅವರನ್ನು ಮಾಡಿದ್ದು ಕಾಂಗ್ರೆಸ್ ಅಲ್ಲವೆ’ ಎಂದೂ ಪ್ರಶ್ನಿಸಿದರು.

‘ರಾಜಕೀಯ ಪಕ್ಷವೊಂದನ್ನು ಟೀಕಿಸುವ ಸಲುವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಲು ರಾಷ್ಟ್ರೀಯ ವೇದಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಸಿಕೊಂಡಿದ್ದು ಸರಿಯಲ್ಲ. ಅವರಿಗೆ ಮಹಿಳೆಯರ ಕುರಿತು ನಿಜವಾದ ಕಾಳಜಿ ಇದ್ದಿದ್ದರೆ ಅತಿ ಸಂಕೀರ್ಣತರವಾದ ಕ್ಷೇತ್ರ ಪುನರ್ ವಿಂಗಡನೆಯ ಮಸೂದೆಯೊಂದಿಗೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸುತ್ತಿರಲಿಲ್ಲ’ ಎಂದು ಹರಿಹಾಯ್ದರು.

‘ದೇಶವನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿಯವರು ಒಮ್ಮೆಯಾದರೂ ಯುಪಿಎ ಸರ್ಕಾರ ಇದ್ದಾಗ ಅಡುಗೆ ಅನಿಲ ದರ ಎಷ್ಟಿತ್ತು, ಈಗ ಎಷ್ಟಾಗಿದೆ ಎಂಬ ಕುರಿತು ಮಾತನಾಡಲಿ ಎಂದು ಸವಾಲೆಸೆದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ನೇರವಾಗಿ ಮಹಿಳೆಯ ಸಬಲೀಕರಣಕ್ಕೆ ಪೂರಕವಾಗಿದೆ’ ಎಂದು ಹೇಳಿದರು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ತಂದಿದ್ದು ಕಾಂಗ್ರೆಸ್. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಸೃಜಿಸಿದ್ದು ಕಾಂಗ್ರೆಸ್. ಬಿಜೆಪಿ ತಾನು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಒಂದೇ ಒಂದು ಕಾರ್ಯಕ್ರಮ ಹೇಳಲಿ ಎಂದರು.

‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದಾರೆ. ಆದರೆ, ಅವರು ಈ ಮಟ್ಟಕ್ಕೆ ಬೆಳೆಯಲು ಹಿಂದೆ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತಂದ ಮೀಸಲಾತಿಯೇ ಕಾರಣ ಎಂಬುದನ್ನು ಅವರು ಮರೆಯಬಾರದು’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ ಫಿಲೊಮಿನಾ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೂಪಾ ಭೀಮಯ್ಯ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶೀಲಾ ಡಿಸೋಜಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-121896542

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.