ಗೋಣಿಕೊಪ್ಪಲು: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡ ಕೊಡವ ನೃತ್ಯ ಪ್ರಕಾರಗಳು ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಕಾರ್ಯಕ್ರಮದ ಏಳನೇ ದಿನದ ನೃತ್ಯ ಪ್ರಕಾರಗಳಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಡವ ಜಾನಪದ ಸೇರಿದಂತೆ ವಿವಿಧ ಕೊಡವ ಹಾಡುಗಳಿಗೆ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಚ್ಚಮಾಡ ಡಾಲಿ ಚಂಗಪ್ಪ, ‘ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜಕ್ಕೆ ವಿಶೇಷವಾದ ಇತಿಹಾಸವಿದೆ. ಮೊದಲು ನ್ಯಾಯಪೀಠ ನಡೆಸುತ್ತಿದ್ದ ಕೊಡವ ಸಮಾಜ ಇಂದು ಬೇರೆ ಯಾವುದೇ ಕೊಡವ ಸಮಾಜಗಳು ಮಾಡದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮವನ್ನು ಹತ್ತು ದಿನಗಳವರೆಗೆ ಯಶಸ್ವಿಯಾಗಿ ನಡೆಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಂಥ ಕಾರ್ಯಕ್ರಮದಲ್ಲಿ ನಾಡಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಅಂದು ಬಾಲ ಗಂಗಾಧರನಾಥ ತಿಲಕ್ ಅವರು ಹಿಂದೂಗಳನ್ನು ಒಂದುಗೂಡಿಸಲು ಗಣೇಶ ಉತ್ಸವ ಆರಂಭಿಸಿದರು. ಅದೇ ರೀತಿ ಈ ಪತ್ತಲೋದಿ ಕಾರ್ಯಕ್ರಮ ಕೊಡವರನ್ನು ಒಗ್ಗೂಡಿಸಲು ಸಹಕಾರಿಯಾಗಿದೆ. ವಯಸ್ಸಾದ ಪೋಷಕರನ್ನು ಮಕ್ಕಳು ಚೆನ್ನಾಗಿ ಸಾಕಬೇಕು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡವ ಸಮಾಜ ಆರ್ಥಿಕ ಸಹಕಾರ ನೀಡಬೇಕು’ ಎಂದರು.

ಅಪ್ಪಚಂಗಡ ಮೋಟಯ್ಯ ಮಾತನಾಡಿ, ‘ಕೊಡವರ ಸಂಸ್ಕೃತಿ ಉಳಿಯಲು ಯುವಕರು ಸಕಾಲದಲ್ಲಿ ಮದುವೆಯಾಗಿ ಕೊಡವರ ಜನಸಂಖ್ಯೆ ಹೆಚ್ಚಿಸಬೇಕು. ಹೆಣ್ಣು ಮಕ್ಕಳು ಮದುವೆಗೆ ಅನಾವಶ್ಯಕ ಬೇಡಿಕೆ ಇಡಬಾರದು. ಪೋಷಕರು ಬುದ್ಧಿ ಹೇಳಿ ಮಕ್ಕಳನ್ನು ಸೂಕ್ತ ವಯಸ್ಸಿಗೆ ಮದುವೆ ಮಾಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿ, ‘ನಮ್ಮ ಕೊಡವ ಸಮಾಜದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ದತ್ತಿನಿಧಿ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕೊಡವ ಸಮಾಜದ ಖಜಾಂಚಿ ಚಂಗುಲಂಡ ಸತೀಶ್, ಸದಸ್ಯರಾದ ಅಪ್ಪಚಂಗಡ ಲಲಿತ ಮೋಟಯ್ಯ, ಮಚ್ಚಮಾಡ ರೋಝಿ ಸುಮಂತ್, ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಚಟ್ಟಂಡ ಲೇಪಾಕ್ಷಿ ನಟೇಶ್, ಕೊಡವ ಸಮಾಜದ ಸದಸ್ಯೆ ಮುಕ್ಕಾಟಿರ ಉಷಾ, ನಿರ್ದೇಶಕಿ ತೀತೀರ ಅನಿತಾ ಸುಬ್ಬಯ್ಯ, ಚಂಗುಲಂಡ ಅಶ್ವಿನಿ ಸತೀಶ್, ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ನಿರ್ದೇಶಕರಾದ ಆಂಡಮಾಡ ಸತೀಶ್ ವಿಶ್ವನಾಥ್, ಬಾದುಮಂಡ ವಿಷ್ಣು ಕಾರ್ಯಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.