ಮಡಿಕೇರಿ: ತಾಲ್ಲೂಕಿನ ನಾಪೋಕ್ಲುವಿನಲ್ಲಿ ಏಪ್ರಿಲ್ 5ರಿಂದ ಮೇ 2ರವರೆಗೆ ನಡೆಯಲಿರುವ ಕೊಡವ ಕೌಟುಂಬಿಕ ಹಾಕಿ ಚೇನಂಡ ಕಪ್ಗಾಗಿ ನೋಂದಣಿ ಆರಂಭವಾಗಿದೆ. ಮಾರ್ಚ್ 20 ಕೊನೆಯ ದಿನ. ಇದಕ್ಕಾಗಿ ಜಿಲ್ಲೆಯಲ್ಲಿ 33 ಕೇಂದ್ರಗಳನ್ನು ತೆರೆಯಲಾಗಿದೆ, ಮಾತ್ರವಲ್ಲ ಆನ್ಲೈನ್ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

‘ಈ ಬಾರಿ ಒಟ್ಟು 400ಕ್ಕೂ ಅಧಿಕ ತಂಡಗಳು ಹಾಗೂ ಮಹಿಳೆಯ 5ಎ ಸೈಡ್ ಹಾಕಿ ಟೂರ್ನಿಯಲ್ಲಿ 120ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹಾಕಿ ಉತ್ಸವದ ಕಾರ್ಯದರ್ಶಿ ಸಿ.ಎಸ್.ಮಧುಮಾದಯ್ಯ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

https://www.chenanda.in/ ವೆಬ್ಸೈಟ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಹಾಗಾಗಿ, ಕೊಡವ ಕೌಟುಂಬಿಕ ತಂಡಗಳು ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

‘ಈಗಾಗಲೇ ಜನವರಿಯಲ್ಲಿ ಮೊದಲ ಬಾರಿಗೆ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರಿಗಾಗಿ ಮೂರ್ನಾಡುವಿನಲ್ಲಿ ಹಾಕಿ ಪಂದ್ಯಾವಳಿ ಆಯೋಜಿಸಿದ್ದೆವು. ಇದರಲ್ಲಿ ಉತ್ತಮ 24 ಹಾಕಿ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಇವರಿಗೆ ಮಾರ್ಚ್ 25ರಿಂದ ಒಂದು ತಿಂಗಳ ಕಾಲ ನುರಿತರಿಂದ ನಾಪೋಕ್ಲುವಿನಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ 12 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ ಹಾಕಿ ಕ್ರೀಡಾ ಪರಿಕರಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.

ಈ ರೀತಿ ತರಬೇತಿ ಪಡೆಯಲು ಬಯಸುವ ಕ್ರೀಡಾಸಕ್ತರು ಮೊ. 8277235111 ಸಂಪರ್ಕಿಸಬಹುದು. ಜೊತೆಗೆ, ಈ ಹಿಂದೆ ಕುಂಡ್ಯೋಳಂಡ ಹಾಗೂ ಮುದ್ದಂಡ ಕುಟುಂಬವು ಜಾರಿಗೆ ತಂದ ಎಲ್ಲ ಕಾರ್ಯಕ್ರಮಗಳನ್ನೂ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

ಈ ಟೂರ್ನಿಗಾಗಿ ನಾಪೋಕ್ಲುವಿನಲ್ಲಿ 3 ಮೈದಾನಗಳನ್ನು ಸಿದ್ಧಪಡಿಸಲಾಗುತ್ತಿದೆ. ಮತ್ತೊಂದು ಮೈದಾನವನ್ನು ಕುಂಡ್ಯೋಳಂಡ ಕುಟುಂಬದವರು ಹೊಸದಾಗಿ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಚೇನಂಡ ಹಾಕಿ ಉತ್ಸವದ ಪ್ರಚಾರಕ್ಕಾಗಿ ಬಿದ್ದಂಡ ನಾಣಯ್ಯ ಅವರು ರಚಿಸಿರುವ ಹಾಡನ್ನು ಉತ್ಸವ ಸಮಿತಿ ಅಧ್ಯಕ್ಷ ಕಂಬಣಿ ಕರುಂಬಯ್ಯ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಬಿದ್ದಂಡ ನಾಣಯ್ಯ, ‘ಚೇನಂಡ ಕುಟುಂಬದವರ ಇತಿಹಾಸ, ಪರಂಪರೆಯನ್ನು ಆಧರಿಸಿ ರಚಿಸಲಾಗಿದೆ. ಈ ಹಾಡನ್ನು ಗಾಯಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಹಾಡಿದ್ದಾರೆ. ಪುತ್ತಾಮನೆ ವಿದ್ಯಾ ಜಗದೀಶ್ ಅವರು ಹಾಡಿರುವ ಮತ್ತೊಂದು ಹಾಡನ್ನು ಹಾಕಿ ಉತ್ಸವದ ಉದ್ಘಾಟನೆಯ ದಿನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಗಾಯಕಿ ಕಬ್ಬಚ್ಚಿರ ರಶ್ಮಿಕಾರ್ಯಪ್ಪ ಮಾತನಾಡಿ, ‘ಚೇನಂಡ ಕುಟುಂಬದವರ ಸಾಹಸಗಾಥೆ ಈ ಹಾಡಿನಲ್ಲಿದೆ. ಇದರ ರಾಗಸಂಯೋಜನೆ ನಾನೇ ಮಾಡಿರುವೆ’ ಎಂದರು.

ಮುಖಂಡರಾದ ದೀನಾ ಚೆಂಗಪ್ಪ, ತಮ್ಮಿ ತಮ್ಮಯ್ಯ, ರೋಹನ್ ಪೊನ್ನಯ್ಯ, ನಂದ ಜಗದೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.