ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವರ ಮದುವೆ ಕೇಕ್, ಶಾಂಪೇನ್, ಪಟಾಕಿ ನಿಷೇಧ

ಕೊಡವ ಸಮಾಜದ ಮಹಾಸಭೆಯಲ್ಲಿ ನಿರ್ಣಯ
Last Updated 11 ಜನವರಿ 2022, 19:46 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಕೊಡವರ ಮದುವೆ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು, ಶಾಂಪೇನ್ ಚಿಮುಕಿಸುವುದು ಮತ್ತು ಪಟಾಕಿ ಸಿಡಿಸುವುದನ್ನು ಟಿ.ಶೆಟ್ಟಿಗೇರಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ನಿಷೇಧಿಸಿದೆ’ ಎಂದು ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ತಿಳಿಸಿದರು.

ಸಮಾಜದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಮದುವೆಯಲ್ಲಿ ಚಾಣ ನೀರ್ ತೆಗೆಯುವ ಪದ್ಧತಿಯ ಪ್ರಕಾರ, ಮಂಟಪಕ್ಕೆ ಬಂದ ವಧುವಿನ ತಲೆಯಿಂದ ತಂಬಿಗೆಯನ್ನು ಬೊಳ್ಚ ಕೊಡದ ಕೆಳಗೆ ಇಳಿಸಿ ಗುರು ಕಾರೋಣ ಹಾಗೂ ದೇವರನ್ನು ಪ್ರಾರ್ಥಿಸಲಾಗುತ್ತದೆ. ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು, ವರನ ಕೋಣೆಗೆ ತೆರಳುವುದು ಪದ್ಧತಿ. ಆದರೆ, ಇತ್ತೀಚಿಗೆ ಮೂಗು ತೂರಿಸಿರುವ ಕೆಲವು ಆಚರಣೆಗಳನ್ನು ಕೈಬಿಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT