ಮಡಿಕೇರಿ: ಕೊಡವರಿಗೆ ಪ್ರತ್ಯೇಕ ಕೊಡವ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ತನ್ನ ಅಭಿಯಾನವನ್ನು ತಾಲ್ಲೂಕಿನ ತಲಕಾವೇರಿಯಿಂದ ಶುಕ್ರವಾರ ಆರಂಭಿಸಿತು.

ಸಿಎನ್ಸಿಯ ಸ್ವಯಂಸೇವಕರು ಧಾರ್ಮಿಕ ಪ್ರಾರ್ಥನೆಗಳನ್ನು ಸಲ್ಲಿಸಿ ಮಾನವ ಸರಪಳಿ ರಚಿಸಿದರು. ನಂತರ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ‘ನಮ್ಮ ಎಲ್ಲ ಬೇಡಿಕೆಗಳೂ ಸಂವಿಧಾನ ಪರಿಧಿಯೊಳಗೆ ಇವೆ. ಸಂವಿಧಾನ ಮೀರಿ ನಾವೇನೂ ಕೇಳುತ್ತಿಲ್ಲ. ಹಾಗಾಗಿ, ಆಳುವ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಇನ್ನಾದರೂ ಶಾಂತಚಿತ್ತತೆಯಿಂದ ಆಲಿಸಬೇಕು’ ಎಂದು ಮನವಿ ಮಾಡಿದರು.

‘ನಾವೇನು ಕೇಳುತ್ತಿದ್ದೇವೋ ಅದು ಈಗಾಗಲೇ ಈ ರಾಷ್ಟ್ರದಲ್ಲಿ ಜಾರಿಯಾಗಿದೆ. ಉದಾಹರಣೆಗೆ; ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ‘ಸಂಘ’ ಎಂಬ ಅಮೂರ್ತವಾದ ಚುನಾವಣಾ ಕ್ಷೇತ್ರವೇ ಅಸ್ತಿತ್ವದಲ್ಲಿದೆ. ಇದೇ ರೀತಿ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರಿಗಾಗಿ ಪ್ರತ್ಯೇಕ ಅಮೂರ್ತ ಕೊಡವ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ರಚಿಸಬೇಕು ಎಂದು ಕೇಳುತ್ತಿದ್ದೇವೆ. ಇದು ತಪ್ಪೇ’ ಎಂದು ಪ್ರಶ್ನಿಸಿದರು.

ಮುಂಬರುವ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿ ಮಸೂದೆಯಡಿ ಕೊಡವ ಮಹಿಳೆಯರಿಗೆ ಆಂತರಿಕ ಮೀಸಲಾತಿ ಕೋಟಾ ನೀಡಬೇಕು, 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ‘ಕೋಡ್’ ಮತ್ತು ‘ಕಾಲಂ’ ಅನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಕೊಡವ ನ್ಯಾಷನಲ್ ಕೌನ್ಸಿಲ್ನಿಂದ ಈ ಬೇಡಿಕೆಗಳ ಪರಿಗಣನೆಗಾಗಿ ಸಲ್ಲಿಸುತ್ತಿರುವ ಈ ನ್ಯಾಯಸಮ್ಮತ ಬೇಡಿಕೆಗಳ ಜ್ಞಾಪನ ಪತ್ರವನ್ನು ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮತ್ತು ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಡಲಾಗಿದೆ ಎಂದರು.

ಈ ಬೇಡಿಕೆಗಳ ಕುರಿತು ಇಡೀ ರಾಷ್ಟ್ರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಮೊದಲ ಹೆಜ್ಜೆಯಾಗಿ, ಮೇ 12ರಂದು ಕೊಡಗು ಕೇಂದ್ರ ಕಚೇರಿಯಲ್ಲಿ 48 ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಅವರು ಇದೇ ವೇಳೆ ಘೋಷಿಸಿದರು.

ಇನ್ನು ಮುಂದೆ ಸಿಎನ್ಸಿ ವತಿಯಿಂದ ಕೊಡವ ಭೂಪ್ರದೇಶದಾದ್ಯಂತ ಶಾಂತಿಯುತವಾದ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬೊಟ್ಟಂಗಡ ಸವಿತಾ ಗಿರೀಶ್, ಅಪ್ಪಾರಂಡ ನಂದಿನಿ ನಂಜಪ್ಪ, ಅರೆಯಡ ಸವಿತಾ ತಿಮ್ಮಯ್ಯ, ಅಪ್ಪಾರಂಡ ನೀರು ಸೋಮಕ್ಕ, ಸರ್ವಶ್ರೀ ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ನಂದೇಟಿರ ರವಿ ಸುಬ್ಬಯ್ಯ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಮಂದಪಂಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್ ತಿಮ್ಮಯ್ಯ, ಚಂಬಂಡ ಜನತ್, ಕಿರಿಯಮಾಡ ಶೇರಿನ್, ಅಪ್ಪಾರಂಡ ಶ್ರೀನಿವಾಸ್, ಪುಟ್ಟೀಚಂಡ ಡಾನ್ ದೇವಯ್ಯ, ಚೋಳಪಂಡ ನಾಣಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-51-945180388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.