10 ರಂದು ಸಂತ್ರಸ್ತರ ನೆರವಿಗೆ ಕೊಳಲು ವಾದನ

7

10 ರಂದು ಸಂತ್ರಸ್ತರ ನೆರವಿಗೆ ಕೊಳಲು ವಾದನ

Published:
Updated:
Deccan Herald

ಮಡಿಕೇರಿ: ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಸೆ.10ರಂದು ಸಂಜೆ 6.30ಕ್ಕೆ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಹೇಮಂತ - ಹೇರಂಭ ಸಹೋದರರಿಂದ ಕೊಳಲು ವಾದನ ಆಯೋಜಿಸಲಾಗಿದೆ.

ಕೊಡಗು ಮೂಲದವರೇ ಆದ, ವಯಲಿನ್‌ನಲ್ಲಿ ವೈಭವ್ ರಮಣಿ, ಮೃದಂಗದಲ್ಲಿ ಬಿ.ಎಸ್.ಪ್ರಶಾಂತ್, ಮೋರ್ಚಿಂಗ್‌ನಲ್ಲಿ ಚಿದಾನಂದ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.

ಕೊಳಲು ವಾದನದಲ್ಲಿ ದಾನಿಗಳಿಂದ ಲಭಿಸುವ ಹಣವನ್ನು ಕೊಡಗಿನ ನಿರಾಶ್ರಿತರಿಗೆ ಮನೆ ನಿರ್ಮಿಸಲು ಬಳಸಲು ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಫೌಂಡೇಶನ್ ನಿರ್ಧರಿಸಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಸಂಗೀತಾಸಕ್ತರು ನೆರವು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !