ಕುಶಾಲನಗರ: ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು - ಕಾಜೂರು ಉರುಸ್ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರು ಅಬ್ದುಲ್ ಹಕೀಂ ಅನ್ವಾರಿ ಅವರು ಶುಕ್ರವಾರ ಚಾಲನೆ ನೀಡಲಾಯಿತು.

ಕಾಜೂರು ಉರೂಸ್ ಮಕಾಂ ನಲ್ಲಿ ಧ್ವಜಾರೋಹಣ ನೆರವೇರಿಸಿ ಉರುಸ್ ಯಶಸ್ವಿಯಾಗಿ ನಡೆಯಲು ಪ್ರಾರ್ಥಿಸಿದರು. ಸ್ವಲಾತ್ ಕಮಿಟಿ ಅಧ್ಯಕ್ಷ ಸುಲೈಮಾನ್ ಸಖಾಫಿ ಮಾತನಾಡಿ, ಉರೂಸ್ ಗೆ ಇಂದು ಚಾಲನೆ ನೀಡಲಾಗಿದ್ದು, ಸೋಮವಾರದಂದು ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲರೂ ಉರುಸ್ ನಲ್ಲಿ ಭಾಗವಹಿಸುವ ಮೂಲಕ ಉರುಸನ್ನು ಯಶಸ್ವಿಗೊಳಿಸಬೇಕು ಎಂದರು.

ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎ.ಮುಸ್ತಫಾ ಮಾತನಾಡಿ, ಕಾಜೂರು ಮಕಾಂ ಉರೂಸ್ ಈ ವರ್ಷ ಕೂಡ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಉರುಸ್ಗೆ ಕೊಡಗಿನ ಎಲ್ಲಾ ಕಡೆಗಳಿಂದಲೂ ಜನರು ಪಾಲ್ಗೊಳ್ಳುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉರುಸ್ನ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಸ್ಜಿದುನ್ನೂರು ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ಲಾ, ಕಾರ್ಯದರ್ಶಿ ಅಜೀಜ್, ಖಜಾಂಜಿ ಜಕ್ರಿಯಾ, ಪ್ರಮುಖರಾದ ಯಾಕೂಬ್, ಉಮರ್ ಹಾಜಿ, ಸೈದು, ರಜ಼ಾಕ್, ಕಾದರ್, ಸಿದ್ದೀಕ್, ಕೆ.ಬಿ.ಶಂಶುದ್ಧೀನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-51-1075182925

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.