ಕುಶಾಲನಗರ: ‘ಸಮಾಜ ಸೇವಾ ಕಾರ್ಯಗಳಲ್ಲಿ ರೋಟರಿ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ. ಸುತ್ತಮುತ್ತಲ ವಾತಾವರಣ ಹಸನುಗೊಳಿಸಲು, ಸ್ವಚ್ಛ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದೆ’ ಎಂದು ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಹೇಳಿದರು.

ಇಲ್ಲಿನ ರೋಟರಿ ಸಭಾಂಗಣದಲ್ಲಿ ರೋಟರಿ ಸುವರ್ಣ ಮಹೋತ್ಸವ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ರೋಟರಿ ಜಿಲ್ಲಾ ಗವರ್ನರ್ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ರೋಟರಿ ಕ್ಲಬ್ ಸ್ವಚ್ಛ ಪಟ್ಟಣ ಘೋಷವಾಕ್ಯದ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ, ಪ್ರವಾಸಿ ತಾಣಗಳಾದ ದುಬಾರೆ, ಚಿಕ್ಲಿಹೊಳೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಕಸ ನಿರ್ವಹಣೆಗಾಗಿ ಪುರಸಭೆ ಸಹಯೋಗದಲ್ಲಿ ಯಶಸ್ವಿ ಕಾರ್ಯಕ್ರಮವನ್ನು ಮಾಡಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ರೋಟರಿ ಸಂಸ್ಥೆ ದೇಶದಾದ್ಯಂತ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ದೇಶದ ಸಮಗ್ರತೆ ಮತ್ತು ಕಾನೂನು ವ್ಯವಸ್ಥೆ ವಿಷಯಗಳಲ್ಲಿ ಸಂಸ್ಥೆಯ ಸಿಎಸ್ಆರ್ ಫಂಡ್ ಮೂಲಕ ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಮಹಾರಾಷ್ಟ್ರದ ಪುನಾದಲ್ಲಿ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದೆ. 26 ಡಾಲರ್ಗಳಿಂದ ಪ್ರಾರಂಭವಾದ ಸಿಎಸ್ಆರ್ ಫಂಡ್ ಯೋಜನೆ ಇಂದು ಸುಮಾರು 9 ಬಿಲಿಯನ್ ಡಾಲರ್ ಕ್ರೋಢೀಕರಣಕ್ಕೆ ಸಾಕ್ಷಿಯಾಗಿದೆ’ ಎಂದರು.

ವಿವೇಕಾನಂದ ಯೂಥ್ ಮೂವ್ಮೆಂಟ್ನ ನಿರ್ವಾಹಕಿ ಸುನಿತಾ, ರಕ್ತದಾನಿ ರೋಟರಿ ಸಂಸ್ಥೆಯ ಸದಸ್ಯ ಸಂತೋಷ್ ಲಕ್ಷ್ಮಣ್ ಅವರ ಸಮಾಜ ಸೇವಾ ಕಾರ್ಯವನ್ನು ಗುರುತಿಸಿ ಸನ್ಮಾನಿಸಲಾಯಿತು. ನೂತನ ಸದಸ್ಯ ಶಿರ್ಷಾನಂದ ಅವರನ್ನು ಗೌರವಿಸಲಾಯಿತು.

ರೋಟರಿ ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ರುದ್ರೇಶ್ ಪಟೇಲ್, ಎಚ್.ಪಿ.ಮಂಜುನಾಥ್, ಎಸ್.ಕೆ.ಸತೀಶ್, ಎಂ.ಡಿ.ರಂಗಸ್ವಾಮಿ, ಮಹೇಶ್ ನಲ್ವಡಿ, ಹರೀ ಶೆಟ್ಟಿ, ಧರಣೇಂದ್ರ, ಎ.ಎ.ಚೆಂಗಪ್ಪ, ರಾಣಿ ಉಲ್ಲಾಸ್, ಆರತಿಶೆಟ್ಟಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.