ರಕ್ಷಣೆಗೆ ಕೆರೆ ದಂಡೆಗೆ ತಂತಿ ಅಳವಡಿಕೆ

7

ರಕ್ಷಣೆಗೆ ಕೆರೆ ದಂಡೆಗೆ ತಂತಿ ಅಳವಡಿಕೆ

Published:
Updated:
ಸೋಮವಾರಪೇಟೆಯ ಸಮೀಪ ಚೌಡ್ಲು ಗ್ರಾಮದ ಸಾಂದೀಪಿನಿ ಶಾಲೆಗೆ ತೆರಳುವ ಮಾರ್ಗ ಮಧ್ತೆ ಇರುವ ಚೌಡ್ಲು ಕೆರೆ

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಯ ರಸ್ತೆಯ ಎರಡೂ ಬದಿಯಲ್ಲಿ ತಡೆಗೋಡೆ ಇಲ್ಲದೆ, ಅಪಾಯಕಾರಿಯಾಗಿದ್ದು, ಇದೀಗ ಕೆರೆ ಅಂಚಿನಲ್ಲಿ ತಂತಿ ಅಳವಡಿಸುವ ಕಾರ್ಯ ನಡೆದಿದೆ.

ಚೌಡ್ಲು ಗ್ರಾಮ ಪಂಚಾಯಿತಿಯಿಂದ ಅನತಿ ದೂರದಲ್ಲಿರುವ ಈ ಕೆರೆಯು ಮುಖ್ಯ ರಸ್ತೆಯ ಒತ್ತಿನಲ್ಲಿಯೇ ಇದ್ದು, ಶನಿವಾರಸಂತೆ ಹಾಗೂ ಶಾಂತಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ. ದಿನಂಪ್ರತಿ ನೂರಾರು ವಿದ್ಯಾರ್ಥಿಗಳು, ಗ್ರಾಮಸ್ಥರು, ಕೂಲಿ ಕಾರ್ಮಿಕರು ಹಾಗೂ ವಾಹನಗಳ ಸಂಚಾರ ಈ ರಸ್ತೆಯಲ್ಲಿ ಸಾಗುತ್ತದೆ. ಜೂನಿಯರ್ ಕಾಲೇಜು, ಸಾಂದೀಪಿನಿ, ಜ್ಞಾನವಿಕಾಸ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುವೆಂಪು ವಿದ್ಯಾಸಂಸ್ಥೆ ಸೇರಿದಂತೆ ಹಲವು ಶಾಲಾ ಕಾಲೇಜುಗಳಿಗೆ ಹೋಗಲು ದಿನಂಪ್ರತಿ ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಬಳಸುತ್ತಾರೆ. ಇಲ್ಲಿ ರಸ್ತೆಯು ಕಿರಿದಾಗಿದ್ದು, ಒಂದೆಡೆ 20 ಅಡಿಗೂ ಹೆಚ್ಚಿನ ಆಳದಲ್ಲಿ ಕೆರೆ ಇದೆ. ಮತ್ತೊಂದೆಡೆ ಅಷ್ಟೇ ಆಳದ ಬರೆ ಇದೆ.

ರಸ್ತೆಯ ಯಾವ ಭಾಗದಲ್ಲೂ ಅಪಾಯದ ಸೂಚನಾ ಫಲಕವನ್ನು ಅಳವಡಿಸಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ವಾಹನಗಳ ಮೂಲಕ ತೆರಳುತ್ತಾರೆ. ಕೆಲವು ಖಾಸಗಿ ವಾಹನಗಳು ಮತ್ತು ಶಾಲಾ ವಾಹನಗಳು ಮಕ್ಕಳನ್ನು ಅಧಿಕ ಸಂಖ್ಯೆಯಲ್ಲಿ ತುಂಬಿಸಿಕೊಂಡು ಇದೇ ರಸ್ತೆಯಲ್ಲಿ ಹೋಗುತ್ತಾರೆ. ಶಾಲಾ ಅವಧಿಯಲ್ಲಿ ಈ ರಸ್ತೆಯಲ್ಲಿ ಅಧಿಕ ವಾಹನಗಳು ಚಲಿಸುತ್ತವೆ. ರಸ್ತೆ ಕಿರಿದಾಗಿರುವುದರಿಂದ ಒಂದೇ ಬಾರಿ ಎರಡು ವಾಹನಗಳು ಚಲಿಸಲು ಸಾಧ್ಯವಾಗುವುದಿಲ್ಲ.

ಅತಿ ವೇಗವಾಗಿ ತೆರಳುವ ವಾಹನಗಳು ಗುಂಡಿ ಅಥವಾ ಕೆರೆಗೆ ಬೀಳುವ ಪರಿಸ್ಥಿತಿ ಇದೆ.

ಎರಡು ವರ್ಷಗಳ ಹಿಂದೆಯೇ ಗ್ರಾಮಸ್ಥರು ಈ ರಸ್ತೆಗೆ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿಯೊಂದಿಗೆ ಪ್ರತಿಭಟನೆಯನ್ನು ಮಾಡಿದ್ದರು.

ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು, ಸುರಕ್ಷತೆಯ ದೃಷ್ಟಿಯಿಂದ ಇದು ಉತ್ತಮ ಕಾರ್ಯ ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !