ಮಾವನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

7

ಮಾವನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

Published:
Updated:

ವಿರಾಜಪೇಟೆ: ತಾಲ್ಲೂಕಿನ ಬಾಳೆಲೆ ನಲ್ಲೂರು ಗ್ರಾಮದಲ್ಲಿ ಪಂಜರಿ ಎರವರ ಬೆಳ್ಳಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಅವರ ಅಳಿಯ ಕೆ.ಜೆ.ರಮೇಶನಿಗೆ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ.

ಕಳೆದ ವರ್ಷ ಜುಲೈ 3ರಂದು ಬಾಳೆಲೆ ನಲ್ಲೂರು ಗ್ರಾಮದ ಲೈನ್‌ ಮನೆಯಲ್ಲಿದ್ದ ಪಂಜರಿ ಎರವರ ಬೆಳ್ಳಿಯೊಂದಿಗೆ ಜಗಳ ಮಾಡಿದ ರಮೇಶ, ‘ಅತ್ತೆಗೆ ಕಿರುಕುಳ ನೀಡುತ್ತಿದ್ದೀಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಪೊನ್ನಂಪೇಟೆ ಪೊಲೀಸರು ರಮೇಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಕೊಲೆಯಾದ ಎರವರ ಬೆಳ್ಳಿಗೆ ಇಬ್ಬರು ಪತ್ನಿಯರಿದ್ದಾರೆ. ಎರಡನೇ ಪತ್ನಿಯ ಮಗಳನ್ನು ರಮೇಶ ವಿವಾಹವಾಗಿದ್ದ.

ಸಿಪಿಐ ಸಿ.ಎಸ್. ದಿವಾಕರ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಡಿ.ನಾರಾಯಣ್ ವಾದಿಸಿದರು. ನ್ಯಾಯಾಧೀಶರಾದ ಬಿ.ಜಿ.ರಮಾ ತೀರ್ಪು ನೀಡಿದ್ದಾರೆ.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !