ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್ಔಟ್‌ಗೆ ಒಳಗಾದ ಕೊಳ್ಳೇಗಾಲದ ಕಾರ್ಮಿಕರು

ಅಭ್ಯತ್‌ಮಂಗಲ ಸಿಲ್ವರ್ ಎಸ್ಟೇಟ್‌ನಲ್ಲಿ ಬಂಧಿ
Last Updated 29 ಮಾರ್ಚ್ 2020, 15:34 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಳ್ಳೇಗಾಲದಿಂದ 20 ದಿನಗಳ ಹಿಂದೆ ಕಾಫಿ ತೋಟದ ಕೆಲಕ್ಕೆಂದು ಕೊಡಗಿಗೆ ಬಂದ 16 ಮಂದಿ ಕಾರ್ಮಿಕರು ಊಟವಿಲ್ಲದೆ ಬಳಲುವಂತಾಗಿದೆ.

ಸಿದ್ದಾಪುರದ ಅಭ್ಯತ್‌ಮಂಗಲ ಸಿಲ್ವರ್ ಎಸ್ಟೇಟ್ ತೋಟದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಎರಡು ದಿನಗಳ ಹಿಂದಿನ ವರೆಗೂ ದವಸ ಧಾನ್ಯ ಲಭಿಸಿತ್ತು. ಪ್ರತಿ ದಿನ ಬೆಳಿಗ್ಗೆ 6ರಿಂದ 12 ಗಂಟೆ ವರೆಗೆ ದಿನಸಿ ಅಂಗಡಿಗಳ ಬಾಗಿಲು ತೆರೆದಿರುತ್ತಿದ್ದರಿಂದ ದವಸ ಧಾನ್ಯಗಳನ್ನು ಕೊಂಡುಕೊಳ್ಳುತ್ತಿದ್ದರು. ಆದರೆ, ಶುಕ್ರವಾರ ರಾತ್ರಿ ದಿಢೀರನೆ ಬದಲಾದ ಸಮಯದಿಂದ ಶನಿವಾರ ಮತ್ತು ಭಾನುವಾರ ದಿನಸಿ ಅಂಗಡಿಗಳ ಬಾಗಿಲು ತೆರೆಯಲೇ ಇಲ್ಲ.ಇದರಿಂದ ಹಣವಿದ್ದರೂ ಕಾರ್ಮಿಕರಿಗೆ ದಿನಸಿ ಕೊಳ್ಳಲು ಸಾಧ್ಯವಾಗಲಿಲ್ಲ.

ಭಾನುವಾರ ಬೆಳಗಿನಿಂದ ಉಪವಾಸವಿದ್ದ ಕಾರ್ಮಿಕರಿಗೆ ಪಕ್ಕದ ಕಾಫಿ ತೋಟದ ಮಾಲೀಕರು ತಮ್ಮಲ್ಲಿರುವ ಒಂದಷ್ಟು ಅಕ್ಕಿಯನ್ನು ಕೊಟ್ಟಿದ್ದಾರೆ. ಅದರಲ್ಲಿ ಹೇಗೆ ಹೊಟ್ಟೆ ಹಸಿವು ನೀಗಿಸಿಕೊಂಡು ಕಾಲ ಕಳೆದಿದ್ದೇವೆ. ಇನ್ನು ಸೋಮವಾರದಿಂದ ಹೇಗೆ ಮಾಡುವುದೊ ತಿಳಿಯುತ್ತಿಲ್ಲ.ಇತ್ತ ಊರಿನ ಕಡೆ ಹೋಗಲು ಬಸ್ ಸೌಲಭ್ಯಗಳಿಲ್ಲ ಎಂದು ತಮ್ಮ ನೋವು ತೋಡಿಕಂಡರು ಕಾರ್ಮಿಕ ಗುಂಪಿನ ಯುವಕ ಮಾದೇಶ.

ಕಾರ್ಮಿಕರಲ್ಲಿ 9 ಮಂದಿ ಮಹಿಳೆಯರು, ನಾಲ್ಕು ಮಂದಿ ಮಕ್ಕಳಿದ್ದಾರೆ. ಕೊರೊನಾ ವೈರಸ್ ನಿಂದ ಶಾಲೆಗೆ ರಜೆ ಇತ್ತು. ಇದರಿಂದ ಮಕ್ಕಳನ್ನೂ ಕರೆದುಕೊಂಡು ಕೊಡಗಿಗೆ ಬಂದೆವು. ಕಾಫಿ ಕೆಲಸ ಮುಗಿಸಿಕೊಂಡು ಮೆಣಸು ಕೊಯ್ಯುವ ಕೆಲಸ ಮಾಡುತ್ತಿದ್ದೆವು. ಇದೀಗ ದೀಢರನೆ ಎಲ್ಲ ಕಡೆ ಬಂದ್ ಆಯಿತು. ನಮ್ಮ ಸ್ಥಿತಿ ಅತಂತ್ರವಾಯಿತು.ಊಟಕ್ಕೆ ದವಸ ಧಾನ್ಯಗಳೂ ಇಲ್ಲದೆ, ಅತ್ತ ಊರಿಗೂ ಹೋಗಲಾಗದೆ ಕಷ್ಟ ಎದುರಾಗಿದೆ.ಮಕ್ಳಳನ್ನು ಕಟ್ಟಿಕೊಂಡು ದಿಕ್ಕೇ ತೋಚುತ್ತಿಲ್ಲ ಎಂದು ಅಳಲು ತೋಡಿಕೊಂಡರು ಕಾರ್ಮಿಕ ಮಹಿಳೆ ಮಾದೇವಿ.

ಸಿಲ್ವರ್ ಎಸ್ಟೆಟ್ ನ ಮಾಲೀಕ ಬೆಂಗಳೂರಿನಲ್ಲಿದ್ದಾರೆ. ಕನ್ನಡ ಮಾತನಾಡಲು ಬಾರದ ಕೇರಳದ ರೈಟರ್ ಮಜೀದ್ ಎಂಬುವರು ತೋಟದ ಕೆಲಸ ಮಾಡಿಸುತ್ತಿದ್ದಾರೆ. ಜಿಲ್ಲಾ ಯರವ ಬುಡಕಟ್ಟು ಕೃಷಿಕ ಸಮಾಜದ ಮಖಂಡ ಪಿ.ಎಸ್.ಮುತ್ತ ಜಿಲ್ಲಾ ಐಟಿಡಿಪಿ ಅಧಿಕಾರಿಯನ್ನು ಸಂಪರ್ಕಿಸಲಾಗಿದೆ. ಅವರು ಆದಷ್ಟು ಬೇಗ ಕಾರ್ಮಿಕರನ್ನು ಸಂಪರ್ಕಿಸಿ ಅವರಿಗೆ ಊಟ ಉಪಹಾರದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ

ಈ ಬಗ್ಗೆ ಪ್ರತಿಕ್ರಿಯಿಸಿದ ಐಟಿಡಿಪಿ ಅಧಿಕಾರಿ ಶಿವಕುಮಾರ್, ವಿಷಯ ಈಗ ತಾನೆ ತಿಳಿದಿದೆ. ಕಾರ್ಮಿಕರಿಗೆ ಆಹಾರದ ಪೊಟ್ಟಣವನ್ನು ತಯಾರಿಸಿ ವಿತರಣೆ ಮಾಡಲು ವಾಹನದಲ್ಲಿ ತೆರಳಲಾಗುತ್ತಿದೆ. ಆದಷ್ಟು ಬೇಗ ಕಾರ್ಮಿಕರಿಗೆ ಆಹಾರ ಒದಗಿಸಲಾಗುವುದು.ಯಾವುದೇ ಕಾರ್ಮಿಕರು ಹಸಿವಿನಿಂದ ಬಳಲ ಬಾರದು ಎಂದು ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಇದಕ್ಕಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಿಕೊಂಡು ಹಗಲು ರಾತ್ರಿ ಶ್ರಮಿಸಲಾಗುತ್ತಿದೆ.ಕಾರ್ಮಿಕರು ಎಲ್ಲೆಲ್ಲಿ ಸ್ಥಗಿತಗೊಂಡಿದ್ದಾರೆ ಎಂಬುದನ್ನು ಹುಡುಕಿ ಪತ್ತೆ ಹಚ್ಚಲಾಗುತ್ತಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT