ಮಡಿಕೇರಿ: ಮಾದಾಪುರದಲ್ಲಿನ ಕೊಡವ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನೆಯು ಮೇ 5ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಸವರಾಜ ಬೊಮ್ಮಾಯಿ, ಶಾಸಕ ಡಾ.ಸಿ.ಎಸ್.ಅಶ್ವತ್ಥ ನಾರಾಯಣ ಭಾಗಿಯಾಗಲಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ₹ 1 ಕೋಟಿ ಅನುದಾನ ಈ ಉದ್ದೇಶಕ್ಕೆ ಬಿಡುಗಡೆಯಾಗಿತ್ತು.ಈ ಪೈಕಿ ₹ 75 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇನ್ನೂ ₹ 25 ಲಕ್ಷ ಅನುದಾನ ದೊರಕಬೇಕಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ ತಿಳಿಸಿದ್ದಾರೆ.

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ವಿಶೇಷ ಪ್ರಯತ್ನದಿಂದ ಹಾಗೂ ಮಾಜಿ ಸಂಸದರು, ಮಾಜಿ ಶಾಸಕರ ಪ್ರಯತ್ನದಿಂದ ಸೂಕ್ತ ಅನುದಾನ ದೊರಕಿತು. ಅನೇಕ ದಾನಿಗಳಿಂದಲೂ ಆರ್ಥಿಕ ಸಂಪನ್ಮೂಲ ಸಂಗ್ರಹವಾಗಿದೆ. ಹಾಲಿ ಶಾಸಕ ಡಾ.ಮಂತರ್ಗೌಡ ಅವರು ₹ 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ಸಮುದಾಯ ಭವನಕ್ಕೆ ನಿರ್ಮಿಸಲು ಒಪ್ಪಿದ್ದಾರೆ ಎಂದು ಹೇಳಿದ್ದಾರೆ.

ಕೊಡವ ಸಮುದಾಯ ಭವನವು ₹ 4.50 ಕೋಟಿ ವೆಚ್ಚದಲ್ಲಿ ನಿಮಾ೯ಣವಾಗಿದ್ದು, ಈವರೆಗೆ ₹ 3.50 ಕೋಟಿಗಳಷ್ಟು ಕಾಮಗಾರಿ ನಡೆದಿದ್ದು ಇನ್ನೂ ₹ 1 ಕೋಟಿ ಕಾಮಗಾರಿ ಬಾಕಿಯಿದೆ ಎಂದರು.

ವಿವಾಹ ಸಮಾರಂಭ, ನಾಮಕರಣ, ನಿಶ್ಚಿತಾಥ೯ ಸೇರಿ ಎಲ್ಲಾ ರೀತಿಯ ಸಭೆ ಸಮಾರಂಭಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕೊಡವ ಮಾತ್ರವಲ್ಲದೇ ಸಮುದಾಯ ಭವನದಲ್ಲಿ ಕೊಡವೇತರರ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗಿದೆ ಎಂದೂ ತಿಳಿಸಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಗೌರವಾಧ್ಯಕ್ಷರಾಗಿರುವ ಮಾದಾಪುರ ಕೊಡವ ಸಮಾಜದ ಉಪಾಧ್ಯಕ್ಷರಾಗಿ ಪಾಸುರ ಎನ್. ಉತ್ತಪ್ಪ, ಕಾರ್ಯದರ್ಶಿಯಾಗಿ ನಾಗಂಡ ಸಿ.ಕಾಳಪ್ಪ, ಖಜಾಂಜಿಯಾಗಿ ಮಚ್ಚಂಡ ಜಿ.ಬೋಪಣ್ಣ, ಮಾದಾಪುರ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಐಚೆಟ್ಟಿರ ನಂಜಪ್ಪ, ನಿರ್ದೇಶಕರಾದ ನಾಪಂಡ ಉಮೇಶ್ ಉತ್ತಪ್ಪ, ಮಾಳೆಯಂಡ ಜೋಯಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-753787619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.