ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ದಶಮಂಟಪಗಳ ಮೆರವಣಿಗೆ ವೈಭವ

Last Updated 16 ಅಕ್ಟೋಬರ್ 2021, 2:59 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ಯಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಬೆಳಕಿನಲ್ಲಿ ಝಗಮಗಿಸಿದ ದಶಮಂಟಪಗಳ ಮೆರವಣಿಗೆಯು ಮಧ್ಯರಾತ್ರಿವರೆಗೂ ನಡೆಯಿತು. ಕಾಲೇಜು ರಸ್ತೆಯ ಪೇಟೆ ಶ್ರೀರಾಮಮಂದಿರ ಮಂಟಪದ ಶೋಭಾಯಾತ್ರೆ ಮೊದಲು ರಾತ್ರಿ 8ಕ್ಕೆ ಆರಂಭಗೊಂಡಿತು.

ನಂತರ ಕೋಟೆ ಗಣಪತಿ, ದೇಚೂರು ಶ್ರೀರಾಮ ಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ, ಕೋಟೆ ಮಾರಿಯಮ್ಮ, ಕೋದಂಡ ರಾಮಮಂದಿರ, ಕರವಲೆ ಭಗವತಿ, ಕಂಚಿ ಕಾಮಾಕ್ಷಿಯಮ್ಮ ಸಮಿತಿಯ ಮಂಟಪಗಳು ಪೌರಾಣಿಕ ಕಥೆಯನ್ನು ಪ್ರಸ್ತುತ ಪಡಿಸಿದವು. ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರವು ದಸರೆಯ ಸೊಬಗನ್ನು ಹೆಚ್ಚಿಸಿತ್ತು.

ಪ್ರತಿ ವರ್ಷ ಮೈಸೂರಿನಲ್ಲಿ ಜಂಬೂಸವಾರಿ ಮುಕ್ತಾಯವಾದ ಬಳಿಕ ಪ್ರವಾಸಿಗರು ಮಡಿಕೇರಿಯಲ್ಲಿ ನಡೆಯುವ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದರು. ಆದರೆ, ಈ ವರ್ಷ ಪ್ರವಾಸಿಗರ ಸಂಖ್ಯೆ ಕಡಿಮೆಯಿತ್ತು.

ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ತಡೆಯಲು ಮಡಿಕೇರಿ
ಸುತ್ತಮುತ್ತಲ ಪ್ರವಾಸಿ ತಾಣವನ್ನು ಜಿಲ್ಲಾಡಳಿತ ಬಂದ್ ಮಾಡಿತ್ತು. ಮಾಹಿತಿ ತಿಳಿಯದೇ ಬಂದ ಪ್ರವಾಸಿಗರು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT