ಮಡಿಕೇರಿ: ನಗರಸಭೆ ಅಧ್ಯಕ್ಷರ ಕ್ಷಮೆಯಾಚನೆಗೆ ಒತ್ತಾಯ, ಕ್ಷಮೆ ಯಾಚನೆಗೆ ಒಪ್ಪದ ಅಧ್ಯಕ್ಷೆ ಕಲಾವತಿ, ಅಧ್ಯಕ್ಷರ ವಿರುದ್ಧ ದಿಕ್ಕಾರ ಕೂಗಿ, ಸಭಾತ್ಯಾಗದ ಮಾಡಿದ ಕಾಂಗ್ರೆಸ್ ಸದಸ್ಯರು. ಈ ದೃಶ್ಯಗಳಿಗೆ ಇಲ್ಲಿ ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಕೌನ್ಸಿಲ್ ಸಭೆ ಸಾಕ್ಷಿಯಾಯಿತು.

ಮಡಿಕೇರಿಯಲ್ಲಿರುವ ಕೆಲವು ಅಕ್ರಮ ಅಂಗಡಿಗಳನ್ನು ಮುಚ್ಚಿಸುವ ಕುರಿತು ನಗರಸಭೆ ಸಾಮಾನ್ಯಸಭೆ ಕೈಗೊಂಡಿದ್ದ ನಿರ್ಣಯಕ್ಕೆ ವಿರುದ್ಧವಾಗಿ ಅಧ್ಯಕ್ಷೆ ಕಲಾವತಿ ಅವರು, ‘ನನ್ನನ್ನು ಕೇಳದೇ ಯಾವುದೇ ಕ್ರಮ ಜರುಗಿಸಬಾರದು ಎಂದು ಪೌರಾಯುಕ್ತರಿಗೆ ಪತ್ರ ಬರೆದಿದ್ದಾರೆ’ ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್, ‘ಇದು ಕೌನ್ಸಿಲ್ ಸಭೆಗೆ ಅಧ್ಯಕ್ಷರು ತೋರಿದ ಅಗೌರವ’ ಎಂದು ಆರೋಪಿಸಿದರು. ಇವರ ಆರೋಪಕ್ಕೆ ಕಾಂಗ್ರೆಸ್ನ ಇತರ ಸದಸ್ಯರೂ ದನಿಗೂಡಿಸಿದರು.

ಆರೋಪ ನಿರಾಕರಿಸಿದ ಅಧ್ಯಕ್ಷೆ ಕಲಾವತಿ, ‘ನಾನೇನೂ ತಪ್ಪು ಮಾಡಿಲ್ಲ. ಈಗ ಆ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಅದನ್ನು ಇಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇವರ ಮಾತನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷೆ ಕಲಾವತಿ ಮೇಲೆ ಆರೋಪಗಳ ಸುರಿಮಳೆಗರೆದರು. ಈ ರೀತಿ ಪತ್ರ ಬರೆಯಲು ಸದಸ್ಯರೊಬ್ಬರ ಒತ್ತಡ ಇತ್ತು. ಆದರೆ, ಈಗ ಆ ಸದಸ್ಯರೂ ಅಧ್ಯಕ್ಷರ ನೆರವಿಗೆ ಬರುತ್ತಿಲ್ಲ. ಆಡಳಿತ ಪಕ್ಷದ ಇತರ ಸದಸ್ಯರೂ ಅಧ್ಯಕ್ಷರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಸದಸ್ಯ ರಾಜೇಶ್ ವ್ಯಂಗ್ಯವಾಡಿದರು.

ಈ ಹಂತದಲ್ಲೂ ಆಡಳಿತ ಪಕ್ಷದ ಸದಸ್ಯರೆಲ್ಲರೂ ಮೌನಕ್ಕೆ ಶರಣಾಗಿದ್ದರು. ಉಪಾಧ್ಯಕ್ಷ ಮಹೇಶ್ ಜೈನಿ ಮಾತ್ರ ‘ಸದ್ಯ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಚರ್ಚೆ ಮಾಡುವುದು ತಪ್ಪಾಗುತ್ತದೆ. ಈ ವಿಷಯ ಇಲ್ಲಿಗೆ ಬಿಟ್ಟು ಬೇರೆ ವಿಷಯಗಳನ್ನು ಕೈಗೆತ್ತಿಕೊಳ್ಳೋಣ’ ಎಂದರು.

ಈ ವೇಳೆ ಎಸ್ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಸಹ, ‘ಕೌನ್ಸಿಲ್ ನಿರ್ಣಯದ ವಿರುದ್ಧ ಪತ್ರ ಬರೆದರೆ ನೀವೇ ತೊಂದರೆಗೆ ಸಿಲುಕುತ್ತೀರಿ. ಯಾರೋ ಹೇಳಿದರೆಂದು ಕೇಳಿ ಸುಮ್ಮನೇ ಪತ್ರ ಬರೆಯಬಾರದು’ ಎಂದು ಹೇಳಿದರು. ಆದರೆ, ಇವರ ಮಾತಿಗೆ ಕಾಂಗ್ರೆಸ್ ಸದಸ್ಯರು ಒಪ್ಪದೇ ಕ್ಷಮೆಯಾಚನೆಗೆ ಪಟ್ಟು ಹಿಡಿದಾಗ ಕಲಾಪದಲ್ಲಿ ಅಧ್ಯಕ್ಷೆ ಕಲಾವತಿ ಅವರು ಊಟದ ವಿರಾಮ ಘೋಷಿಸಿದರು.

ಮಧ್ಯಾಹ್ನದ ನಂತರ ಸಭೆ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಕ್ಷಮೆಗೆ ಅಧ್ಯಕ್ಷೆ ಒಪ್ಪಲಿಲ್ಲ. ಕೊನೆಗೆ, ಕಾಂಗ್ರೆಸ್ ಸದಸ್ಯರು ದಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ, ಸಭೆ ಆರಂಭವಾಗುತ್ತಿದ್ದಂತೆ ಎಸ್ಡಿಪಿಐನ ಅಮಿನ್ ಮೊಹಿಸಿನ್ ಹಾಗೂ ಮನ್ಸೂರ್ ಅವರು, ‘ಕಳೆದ ಸಭೆಯಲ್ಲಿ ಬಜೆಟ್ ಮಂಡಿಸಿ ಚರ್ಚೆ ನಡೆಸದೇ ಸಭೆ ಮುಂದೂಡಲಾಯಿತು. ಇದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಹಿರಿಯ ಸದಸ್ಯ ಕೆ.ಎಸ್.ರಮೇಶ್, ‘ಈ ಸಭೆಯ ಅಜೆಂಡಾದಲ್ಲಿ ಬಜೆಟ್ ವಿಷಯ ಇದೆ. ಆಗ ಈ ಕುರಿತು ಚರ್ಚೆ ಮಾಡೋಣ’ ಎಂದರು.

ಈ ವೇಳೆ ಮನ್ಸೂರ್ ಅವರು ಇದು ಸರ್ವಾಧಿಕಾರದ ಆಡಳಿತವೇ ಎಂದು ಪ್ರಶ್ನಿಸಿದರು. ಕೆಲಕಾಲ ಆಡಳಿತ ಪಕ್ಷ ಮತ್ತು ಎಸ್ಡಿಪಿಐ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಎನ್ಡಿಆರ್ಎಫ್ ಅಡಿ ನಡೆಯುತ್ತಿರುವ ರಸ್ತೆಗುಂಡಿ ಮುಚ್ಚುವ ಕಾರ್ಯವೂ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಸದಸ್ಯರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೆ ಬೀದಿನಾಯಿಗಳ ಸಮಸ್ಯೆ ಸಭೆಯಲ್ಲಿ ಪ್ರತಿಧ್ವಸಿದರೂ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ನಿವೇಶನ ರಹಿತರಿಗೆ ನಿವೇಶ ನೀಡುವ ವಿಚಾರವನ್ನು ಎಸ್ಡಿಪಿಐ ಸದಸ್ಯರು ಪ್ರಸ್ತಾಪಿಸಿದರು. ಈ ಉದ್ದೇಶಕ್ಕೆ ಜಾಗವನ್ನು ಖರೀದಿಗೆ ನೀಡಲು ಆಸಕ್ತಿ ಇರುವವರು ಸಂಪರ್ಕಿಸಿ ಎಂದು ಜಾಹೀರಾತು ನೀಡಲು ಸಭೆ ತೀರ್ಮಾನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.