ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ದಶಮಂಟಪಗಳ ಶೋಭಾಯಾತ್ರೆ

Last Updated 5 ಅಕ್ಟೋಬರ್ 2022, 13:55 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ದಸರೆಯ ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಪೇಟೆ ಶ್ರೀರಾಮ ಮಂದಿರವು ಶಿವದರ್ಶನ ಪರಿಕಲ್ಪನೆಯಡಿ ಮಂಟಪ ರೂಪಿಸಿದ್ದು, ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ.‌ ಉಳಿದ 9 ಮಂಟಪಗಳ ಸಿದ್ದತೆ ಇನ್ನೂ ನಡೆಯುತ್ತಿದ್ದು, ಶೋಭಯಾತ್ರೆ ಗುರುವಾರ ನಸುಕಿನವರೆಗೂ ನಡೆಯಲಿದೆ.

ಈಗಾಗಲೇ ನಗರದೊಳಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದ್ದು ಎಲ್ಲೆಡೆ ಬಿಗಿಭದ್ರತೆ ಏರ್ಪಡಿಸಲಾಗಿದೆ.

ಮಂಟಪಗಳ ವಿವರ:ಪೇಟೆ ಶ್ರೀರಾಮಮಂದಿರ ಶಿವದರ್ಶನ, ದೇಚೂರು ಶ್ರೀರಾಮಮಂದಿರ, ಮಧುಕೈಟಭರ ವಧೆ, ದಂಡಿನ ಮಾರಿಯಮ್ಮ ಭೂಲೋಕ ರಕ್ಷಣೆಗೆ ಪಾರ್ವತಿಯ ಶಾಕಂಬರಿ ರೂಪ, ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಶುಂಭ ನಿಶುಂಭರ ಸಂಹಾರ ಕಂಚಿ ಕಾಮಾಕ್ಷಿ ಗೋಮಾತೆಯ ಮಹಿಮೆ, ಕುಂದೂರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ಅಂಧಾಸುರ ವಧೆ ಕೋದಂಡರಾಮಮಂದಿರ ತಾರಕಾಸುರನ ವಧೆ, ಕೋಟೆ ಶ್ರೀಮಾರಿಯಮ್ಮ ಸೀತಾಪಹರಣ ಮತ್ತು ರಾವಣ ಸಂಹಾರ , ಕೋಟೆ ಮಹಾಗಣಪತಿ ಸಮಿತಿ ಮಹಾಗಣಪತಿಗೆ ಸಿಂಧೂರ ಗಣಪತಿ ನಾಮಪ್ರಾಪ್ತಿ ಶ್ರೀಕರವಲೆ ಭಗವತಿ ಮಹಿಷ ಮರ್ಧಿನಿ ದೇಗುಲ ಗಜಾಸುರನ ಸಂಹಾರ ಕಥಾವಸ್ತುವನ್ನು ತಮ್ಮ ತಮ್ಮ ಮಂಟಪದಲ್ಲಿ ಪ್ರದರ್ಶಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT