ಮಡಿಕೇರಿ: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಸಾಕಾನೆಗಳ ನಡುವಿನ ಕಾಳಗದಲ್ಲಿ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿಬಿರದ ಸ್ವರೂಪ ಮತ್ತು ಕಾರ್ಯಾಚರಣೆಯನ್ನು ಒರೆಗೆ ಹಚ್ಚುವಂತೆ ಮಾಡಿದೆ. ಈ ಘಟನೆ ಸಾಕಾನೆಗಳಿಗೆ ಆಗುತ್ತಿರುವ ಹಿಂಸೆಗೆ ಹಾಗೂ ಅಪಾರ ಪ್ರಮಾಣದ ಆದಾಯ ಬರುತ್ತಿದ್ದಾಗ್ಯೂ ಕನಿಷ್ಠ ವೈದ್ಯಕೀಯ ಸೌಲಭ್ಯಗಳು ಇಲ್ಲದ ಸ್ಥಿತಿಗೆ ಸಾಕ್ಷಿ ಎನಿಸಿದೆ.

ಇಲ್ಲಿ ಒಟ್ಟು 29 ಆನೆಗಳಿದ್ದು, ಇಡೀ ಶಿಬಿರ ಆನೆಗಳಿಂದ ತುಂಬಿ ತುಳುಕುತ್ತಿದೆ. ಇದು ಇಲ್ಲಿನ ಸಿಬ್ಬಂದಿಗೆ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗುಂತಹ ಸ್ಥಿತಿಗೆ ತಳ್ಳಿದೆ. ಅಷ್ಟೂ ಆನೆಗಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ದಿನದಿಂದ ದಿನಕ್ಕೆ ಏರುತ್ತಿರುವ ಸಾಕಾನೆಗಳ ಸಂಖ್ಯೆಯಿಂದ ಸೆರೆ ಹಿಡಿದ ನಂತರ ತರುವ ಆನೆಗಳಿಂದ ವಿಪರೀತ ಎನ್ನುವಷ್ಟು ಒತ್ತಡ ಶಿಬಿರದ ಮೇಲೆ ಸೃಷ್ಟಿಯಾಗುತ್ತಿದೆ. ಇದರ ಜೊತೆಗೆ, 29 ಆನೆಗಳಿಗೆ ಕೇವಲ 4 ಮಾತ್ರ ಹೇಮಾವತಿ, ಶ್ರೀವಿದ್ಯಾ, ವಿಜಯಾ, ಕಾವೇರಿ ಎಂಬ ಹೆಣ್ಣಾನೆಗಳಿವೆ.

ಮತ್ತೊಂದೆಡೆ, ಈ ವರ್ಷ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕಿಂತಲೂ ಹೆಚ್ಚಿತ್ತು ಎಂದು ಶಿಬಿರದ ಮೂಲಗಳು ತಿಳಿಸುತ್ತವೆ. ಹೆಚ್ಚು ಪ್ರವಾಸಿಗರು ಭೇಟಿ ನೀಡಿ ಮನಬಂದಂತೆ ವರ್ತಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಕೆಲವೇ ಗಂಟೆಗಳಲ್ಲಿ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಿಸುವುದೂ ಸಹ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕಷ್ಟಸಾಧ್ಯವಾಗಿ ಪರಿಣಮಿಸಿದೆ.

ಏರುತ್ತಿರುವ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಶಿಬಿರದಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಕಾಯಂ ಸಿಬ್ಬಂದಿಯೇ ಇಲ್ಲದ ಸ್ಥಿತಿ ಇದೆ. ಬಹುತೇಕ ಎಲ್ಲರೂ ಹೊರಗುತ್ತಿಗೆ ಆಧಾರದ ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ಇವೆಲ್ಲದರ ಜೊತೆಗೆ, ಈ ವರ್ಷ ಬೇಸಿಗೆಯೂ ಅತಿಯಾಗಿದೆ. ವಿಪರೀತ ಎನ್ನುವಷ್ಟು ಧಗೆ ಆವರಿಸಿದೆ. ಎಲ್ಲಿ ನೋಡಿದರಲ್ಲಿ ಹಸಿರು ಕಾಣಸಿಗಬೇಕಾದ ಕಡೆ ಜನರೇ ಕಣ್ಣಿಗೆ ಸಿಕ್ಕುವುದು, ಹೆಚ್ಚು ಧಗೆಯ ಕಾರಣಕ್ಕೆ ಕಾಡಾನೆಗಳಿಗೂ ಹಿಂಸೆಯಾಗುತ್ತಿದೆ ಎಂದು ಅಲ್ಲಿನ ಶಿಬಿರದಲ್ಲಿ ಕಾರ್ಯನಿರ್ವಹಿಸುವ ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಷ್ಟೆಲ್ಲ ಒತ್ತಡದ ಮಧ್ಯೆ ವಾರಕ್ಕೆ ಒಂದು ಸಂಪೂರ್ಣ ದಿನ ರಜೆಯೂ ಶಿಬಿರಕ್ಕೆ ಇಲ್ಲ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಬೇರೆಲ್ಲ ಕಡೆ ವಾರಕ್ಕೆ ಒಂದು ದಿನ ರಜೆ ಇದ್ದರೂ, ಇಲ್ಲಿ ಮಾತ್ರ ಅದು ಜಾರಿಯಾಗಿಲ್ಲ. 2024ರಲ್ಲಿ ಒಂದು ದಿನ ರಜೆ ಜಾರಿ ಮಾಡಿದ್ದರೂ ನಂತರ ಅದನ್ನು ಅರ್ಧದಿನಕ್ಕೆ ಇಳಿಸಲಾಯಿತು. ಇದರಿಂದ ಶಿಬಿರದ ನಿರ್ವಹಣೆಯೂ ಕಷ್ಟಕರವಾಗಿ ಪರಿಣಮಿಸಿದೆ.

ವರ್ಷಕ್ಕೆ ಕನಿಷ್ಠ ಎಂದರೂ ₹ 5 ಕೋಟಿಯಷ್ಟು ಆದಾಯ ಶಿಬಿರದಿಂದ ಬರುತ್ತಿದ್ದು, ಅದು ಕೊಡಗು ಪ್ರತಿಷ್ಠಾನಕ್ಕೆ ಹೋಗುತ್ತಿದೆ. ಆದರೆ, ಪ್ರವಾಸಿಗರಿಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ ಎಂಬ ದೂರು ಪ್ರವಾಸಿಗರಿಂದ ಬರುತ್ತಿದೆ.

ಮೃತ ಮಹಿಳೆಯ ಪತಿಯೇ ಈ ಕುರಿತು ದೂರಿದ್ದು, ಶಿಬಿರದಲ್ಲಿ ಕನಿಷ್ಠ ವೈದ್ಯಕೀಯ ಸೌಕರ್ಯಗಳು ಇರಲಿಲ್ಲ. ತುರ್ತು ಚಿಕಿತ್ಸಾ ಘಟಕ, ತುರ್ತು ಚಿಕಿತ್ಸಾ ವಾಹನ, ಕನಿಷ್ಠ ಪಕ್ಷ ಪ್ರಾಥಮಿಕ ಚಿಕಿತ್ಸೆ ನೀಡುವ ಸೌಲಭ್ಯವೂ ಇರಲಿಲ್ಲ. ಪ್ರಾಥಮಿಕ ಅಥವಾ ತುರ್ತು ಚಿಕಿತ್ಸೆಗೆ ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯವನ್ನೆ ಅವಲಂಬಿಸಬೇಕಿದೆ.

ಇನ್ನಾದರೂ, ಶಿಬಿರವನ್ನು ಸುಧಾರಿಸುವ ಕಡೆಗೆ, ಆನೆಗಳಿಗೆ ಉಂಟಾಗುತ್ತಿರುವ ಹಿಂಸೆಯನ್ನು ತಡೆಯುವ ಕಡೆಗೆ ಗಮನ ಕೊಡಬೇಕಿದೆ.

ಪ್ರವಾಸಿಗರ ಮೇಲೆ ನಿಯಂತ್ರಣಕ್ಕೆ ಒತ್ತಾಯ

ಪ್ರವಾಸಿಗರ ಪ್ರವೇಶವನ್ನು ಒಂದು ನಿರ್ದಿಷ್ಟ ಮಿತಿ ದಾಟಿದ ನಂತರ ಬಂದ್ ಮಾಡಬೇಕು ಎಂಬ ಒತ್ತಾಯವೂ ವನ್ಯಜೀವಿ ಪ್ರಿಯರಿಂದ ಕೇಳಿ ಬಂದಿದೆ. ಎಲ್ಲದಕ್ಕೂ ಮಿತಿ ಎಂಬುದಿರುತ್ತದೆ. ಆದರೆ, ದುಬಾರೆ ಸಾಕಾನೆ ಶಿಬಿರದ ಮೇಲೆ ಬೀಳುತ್ತಿರುವ ಒತ್ತಡ ನಿಭಾಯಿಸಲು ಪ್ರವಾಸಿಗರ ಸಂಖ್ಯೆಯ ಮೇಲೆ ಮಿತಿ ಹೇರಬೇಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವನ್ಯಜೀವಿ ತಜ್ಞರಾದ ಕೃಪಾಕರ– ಸೇನಾನಿ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುವ ಆನೆಗಳನ್ನು ಅವುಗಳ ಕುಟುಂಬದಿಂದ ಬೇರ್ಪಡಿಸಿ ಶಿಬಿರಗಳಲ್ಲಿ ಮನರಂಜನೆಗೆಂದು ಬಳಸುವುದು ನೈತಿಕ ಅಪರಾಧವಾಗುತ್ತದೆ. ಶಿಬಿರದಲ್ಲಿ ತಟ್ಟುವ ಚಪ್ಪಾಳೆ, ಹಾಕುವ ಕೇಕೆ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತವೆ. ಚಪ್ಪಾಳೆಯ ಘಟನೆ ಬಾಂಬ್ ಸಿಡಿದಂತಾಗಬಹುದು. ಸೆಲ್ಪೀ ಸಂಸ್ಕೃತಿಯನ್ನು ಉತ್ತೇಜಿಸದೇ ವೈಜ್ಞಾನಿಕ ತಿಳಿವಳಿಕೆಗೆ ಒತ್ತು ಕೊಡಬೇಕು‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.