ಬುಧವಾರ, ಸೆಪ್ಟೆಂಬರ್ 18, 2019
25 °C

ಮಡಿಕೇರಿ: ಕಾಡಾನೆ ದಾಳಿಗೆ ಎಆರ್‌ಎಸ್‌ಐ ಬಲಿ

Published:
Updated:

ಮಡಿಕೇರಿ: ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐ ಬಿ.ಸಿ.ಚನ್ನಕೇಶವ (48) ಅವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಸೆ.3ರಂದು ತಾಲ್ಲೂಕಿನ ಕಡಗದಾಳು ಉಪ ಠಾಣೆಯ ಬಳಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವಾಗ ಒಂಟಿ ಸಲಗವೊಂದು ದಿಢೀರ್‌ ದಾಳಿ ನಡೆಸಿತ್ತು. ಸ್ಥಳದಲ್ಲಿ ಕುಸಿದ ಬಿದ್ದ ಅವರನ್ನು ಕಾಡಾನೆ ಬಿಟ್ಟು ಹೋಗಿತ್ತು. ಚನ್ನಕೇಶವ ಅವರ ಎದೆ ಹಾಗೂ ಸೊಂಟ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಜೊತೆಗಿದ್ದ ಸಿಬ್ಬಂದಿ ಚನ್ನಕೇಶವ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ಶನಿವಾರಸಂತೆ ಗ್ರಾಮದ ಚನ್ನಕೇಶವ 1996ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಎರಡು ವರ್ಷದಿಂದ ಡಿ.ಎ.ಆರ್‌ನ ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Post Comments (+)