ಮಡಿಕೇರಿ: ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ 2 ಅತ್ಯಪರೂಪದ ವಸ್ತುಸಂಗ್ರಹಾಲಯಗಳಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುಗಳೆನಿಸಿವೆ. ಎರಡೂ ವಸ್ತುಸಂಗ್ರಹಾಲಯಗಳು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವುದು ವಿಶೇಷ.

ಕೋಟೆಯೊಳಗೆ ಇರುವ ಬ್ರಿಟಿಷರ ಕಾಲದ ಚರ್ಚ್ ಈಗ ಸರ್ಕಾರಿ ವಸ್ತುಸಂಗ್ರಹಾಲಯವಾಗಿ ಬದಲಾಗಿದೆ. ಈ ತರಹ ಚರ್ಚ್ ವಸ್ತುಸಂಗ್ರಹಾಲಯವಾಗಿರುವ ಉದಾಹರಣೆ ಬೇರೆಡೆ ಇಲ್ಲ. ಮತ್ತೊಂದು ಜನರಲ್ ತಿಮ್ಮಯ್ಯ ಸೇನಾ ವಸ್ತುಸಂಗ್ರಹಾಲಯ. ಇದು ಸಹ ಸೇನೆಗೆ ಸಂಬಂಧಿಸಿದ ದೇಶದಲ್ಲೇ ಅತಿ ಅಪರೂಪದ ವಸ್ತುಸಂಗ್ರಹಾಲಯ ಎನಿಸಿದೆ. ಇಂತಹ ಎರಡು ವಿಭಿನ್ನ ಹಾಗೂ ವಿಶಿಷ್ಟವಾದ ವಸ್ತುಸಂಗ್ರಹಾಲಯಗಳು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಲ್ಲ.

ಇಲ್ಲಿನ ಐತಿಹಾಸಿಕ ಕೋಟೆಯ ಆವರಣದಲ್ಲಿರುವ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಸೇರಿದ ಸರ್ಕಾರಿ ವಸ್ತುಸಂಗ್ರಹಾಲಯವು ಚರ್ಚ್ ಕಟ್ಟಡದಲ್ಲಿದೆ. ಈ ಚರ್ಚ್ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದುದು. ಇಲ್ಲಿನ ಕೊನೆಯ ಅರಸ ಚಿಕ್ಕವೀರರಾಜೇಂದ್ರ ಅವರನ್ನು ಬ್ರಿಟಿಷರು ಗಡಿಪಾರು ಮಾಡಿದ ಬಳಿಕ ನೇರವಾಗಿ ಆಳ್ವಿಕೆಯನ್ನು ತಮ್ಮ ಕೈಗೆ ತೆಗೆದುಕೊಂಡರು. ಆಗ ಬ್ರಿಟಿಷ್ ಸೈನಿಕರು ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಕೋಟೆಯೊಳಗಿನ ಆವರಣದಲ್ಲಿ 1855ರಲ್ಲಿ ಸೇಂಟ್ ಮಾರ್ಕ್ಸ್ ಚರ್ಚ್ ಕಟ್ಟಿದರು. ಬ್ರಿಟಿಷರು ಇಲ್ಲಿರುವವರೆಗೂ ಇಲ್ಲಿ ಪ್ರಾರ್ಥನೆಗಳು ಜರುಗುತ್ತಿದ್ದವು. ಸ್ವಾತಂತ್ರ್ಯ ಬಂದ ಬಳಿಕ ಬ್ರಿಟಿಷರೆಲ್ಲರೂ ಹೊರಟು ಹೋದ ಮೇಲೆ ಈ ಚರ್ಚ್ ಹಾಳು ಸುರಿಯುತ್ತಿತ್ತು. ಆಗ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು 1971ರಲ್ಲಿ ಈ ಚರ್ಚ್ ಅನ್ನು ಸರ್ಕಾರಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿತು. ಅಲ್ಲಿಂದ ಇಲ್ಲಿಯವರೆಗೂ ಇದು ಮ್ಯೂಸಿಯಂ ಆಗಿ ಕೋಟ್ಯಂತರ ಮಂದಿಯ ಕುತೂಹಲಕ್ಕೆ ಕಾರಣವಾಗಿದೆ.

ಕೊಡಗಿನ ಹೆಗ್ಗಡೆಹಳ್ಳಿಯ ಉತ್ಖನನದಲ್ಲಿ ಸಿಕ್ಕಿದ ಕ್ರಿ.ಪೂ. 2,000ದಿಂದ 2,500 ವರ್ಷದಷ್ಟು ಹಳೆಯದಾದ ಮಣ್ಣಿನ ಮಡಕೆಗಳು, ಮಣ್ಣಿನ ಪಾತ್ರೆಗಳಿಂದ ಹಿಡಿದು ಇತ್ತೀಚಿನ ಹಾಲೇರಿ ಲಿಂಗಾಯತ ಅರಸರ ಕಾಲದವರೆಗಿನ ಸುಮಾರು 1,012 ಪ್ರಾಚ್ಯಾವಶೇಷಗಳು ಇಲ್ಲಿವೆ.

ಕೊಡಗಿನ ವಿವಿಧ ಸ್ಥಳಗಳಲ್ಲಿ ದೊರೆತ ಶಾಸನಗಳು, ವೀರಗಲ್ಲುಗಳು, ಸತಿಕಲ್ಲುಗಳು, ಕೋಲೆಕಲ್ಲುಗಳು, ಶಿಲಾಶಿಲ್ಪಗಳು, ಲೋಹದ ಶಿಲ್ಪಗಳು, ಆಯುಧಗಳು, ಫಿರಂಗಿಗಳು, ಫಿರಂಗಿ ಗುಂಡುಗಳು ಸೇರಿದಂತೆ 220ಕ್ಕೂ ಅಧಿಕ ಪ್ರಾಚೀನ ವಸ್ತುಗಳಿವೆ. 12 ಶತಮಾನದಿಂದ ಇತ್ತೀಚಿನವರೆಗೆ 330 ಪ್ರಾಚೀನ ನಾಣ್ಯಗಳೂ ಇಲ್ಲುಂಟು.

ಕೊಡಗಿನಲ್ಲಿಯೇ ದೊರೆತ ಜೈನ ತೀರ್ಥಂಕರರ 9 ಮೂರ್ತಿಗಳು, ಬುದ್ಧನ 2 ಮೂರ್ತಿಗಳು, 4 ತಾಳೆಗರಿಗಳು, 24 ಹಳೆಯ ಕಾಗದ ಪತ್ರಗೂ ಇಲ್ಲಿವೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ತಮ್ಮ ಸಂಗ್ರಹಾಲಯದಲ್ಲಿದ್ದ ಸುಮಾರು 124 ಪ್ರಾಚ್ಯಾವಶೇಷಗಳನ್ನೂ ಇಲ್ಲಿ ಸಂರಕ್ಷಿಸಿಡಲಾಗಿದೆ. ಇವೆಲ್ಲದರ ಜತೆಗೆ, ಪ್ರಾಚೀನ ಇತಿಹಾಸ, ಪರಂಪರೆಗೆ ಸಂಬಂಧಿಸಿದ 240 ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ. ಇಂತಹದ್ದೊಂದು ಅಪೂರ್ವ ವಸ್ತುಸಂಗ್ರಹಾಲಯಕ್ಕೆ ಪ್ರತೀ ವರ್ಷ 3ರಿಂದ 4 ಲಕ್ಷ ಮಂದಿ ಭೇಟಿ ಕೊಡುತ್ತಾರೆ. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ, ಭಾನುವಾರವೂ ಸೇರಿದಂತೆ ಎಲ್ಲ ದಿನಗಳೂ ತೆರೆದಿರುತ್ತದೆ. ನಿತ್ಯ ಬೆಳಿಗ್ಗೆ 10ರಿಂದ 5.30ರವರೆಗೂ ಈ ವಸ್ತುಸಂಗ್ರಹಾಲಯ ತೆರೆದಿರುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-220595848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.