ಮಡಿಕೇರಿ: ಕಳೆದ 3 ದಿನಗಳಿಂದ ಇಲ್ಲಿನ ಹಾಪ್ಕಾಮ್ಸ್ ಆವರಣದಲ್ಲಿ ನಡೆಯುತ್ತಿದ್ದ ಮಾವು ಮತ್ತು ಹಲಸು ಮೇಳಕ್ಕೆ ಭಾನುವಾರ ತೆರೆ ಬಿತ್ತು. ₹ 21.4 ಲಕ್ಷ ಮೌಲ್ಯದ ಮಾವು ಮತ್ತು ಹಲಸು ಮಾರಾಟವಾದವು.

ಮೊದಲ ದಿನ ₹ 5.8 ಲಕ್ಷ, 2ನೇ ದಿನ ₹ 6.4 ಹಾಗೂ ಕೊನೆಯ ದಿನ ಭಾನುವಾರ ₹ 9.8 ಲಕ್ಷ ಮೌಲ್ಯದ ಮಾವು ಮಾರಾಟವಾದವು ಎಂದು ಹಾಪ್ಕಾಮ್ಸ್ ಮೂಲಗಳು ತಿಳಿಸಿವೆ.

ಮಾವನ್ನು ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರಗಳಿಂದ 21 ರೈತರು ಇಲ್ಲಿಗೆ ಮಾರಾಟಕ್ಕಾಗಿ ತಂದಿದ್ದರು. ಹಲವರಿಗೆ ಭರಪೂರ ವ್ಯಾಪಾರವಾದರೆ, ಕೆಲವರಿಗೆ ಕೆಲವಷ್ಟೇ ವ್ಯಾಪಾರವಾಯಿತು.

ಸಕ್ಕರೆಗುತ್ತಿ, ರುಮಾನಿ, ಇಮಾಮ್ ಪಸಂದ್, ದಶೇರಿ, ಮಿಠಾಯಿ ಮಾವು... ಹೀಗೆ ಅಪರೂಪದಲ್ಲಿ ಅಪರೂಪ ಎನಿಸುವ ಮಾವು ಮಾರಾಟವಾಯಿತು. ಬಾದಾಮಿ, ಮಲ್ಗೋವಾ, ರಸಪುರಿ, ತೋತಾಪುರಿ ಮಾವುಗಳು ಉಳಿದವು. ಕೊನೆಯ ದಿನವಾದ ಭಾನುವಾರ ಹಾಪ್ಕಾಮ್ಸ್ ನಿಗದಿ ಮಾಡಿದ ದರಕ್ಕಿಂತ ಕಡಿಮೆ ದರಕ್ಕೆ ಅನಿವಾರ್ಯವಾಗಿ ವ್ಯಾಪಾರಸ್ಥರು ಮಾರಾಟ ಮಾಡಬೇಕಾಯಿತು.

ಮಾಗಿದ ಮಾವುಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಮತ್ತೆ ವಾಪಸ್ ನೂರಾರು ಕಿ.ಮೀ ದೂರಕ್ಕೆ ತೆಗೆದುಕೊಂಡು ಹೋದರೆ ಅವು ಹಾಳಾಗುತ್ತವೆ ಎಂದು ಬಹುತೇಕ ವ್ಯಾಪಾರಸ್ಥರು ಬೇಸರದಿಂದ ನುಡಿದರು.

ಇದರ ಮಧ್ಯೆಯೂ ಉತ್ತಮ ವ್ಯಾಪಾರವಾಗಿದೆ ಎಂದು ಹಲವು ಮಂದಿ ಹರ್ಷ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-51-881811990

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.