ಮಡಿಕೇರಿ: ಸಕ್ಕರೆಗುತ್ತಿ, ರುಮಾನಿ, ಇಮಾಮ್ ಪಸಂದ್, ದಶೇರಿ, ಮಿಠಾಯಿ ಮಾವು... ಹೀಗೆ ಅಪರೂಪದಲ್ಲಿ ಅಪರೂಪ ಎನಿಸುವ ಮಾವುಗಳು ಸುವಾಸನೆಯಲ್ಲಿ ಮಾತ್ರವಲ್ಲ ನೋಟದಲ್ಲೂ ಬರಸೆಳೆದವು. ಬರೋಬರಿ 15 ಬಗೆಯ ವೈವಿಧ್ಯಮಯ ಮಾವಿನ ತಳಿಗಳು ಸಾರ್ವಜನಿಕರ ನಾಲಿಗೆಯನ್ನು ತಣಿಸಿದವು. ಇಂತಹದ್ದೊಂದು ಪುಟ್ಟ ಮಾವಿನ ಲೋಕವೇ ಹಾಪ್ಕಾಮ್ಸ್ನ ಸಮೀಪ ತೆರೆದುಕೊಂಡಿತು.

ಇಂತಹ ದೃಶ್ಯಗಳು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಜಿಲ್ಲಾ ಹಾಪ್ಕಾಮ್ಸ್ ವತಿಯಿಂದ ಇಲ್ಲಿನ ಹಾಪ್ ಕಾಮ್ಸ್ ಆವರಣದಲ್ಲಿ ಶುಕ್ರವಾರ ಆರಂಭವಾದ 3 ದಿನಗಳ ಕಾಲದ 6ನೇ ವರ್ಷದ ಮಾವು ಮತ್ತು ಹಲಸು ಮೇಳದಲ್ಲಿ ಕಂಡು ಬಂತು.

ಪ್ರತಿ ತಳಿಯ ಮಾವಿಗೂ ತೀರಾ ದುಬಾರಿಯೂ ಅಲ್ಲ, ತೀರಾ ಅಗ್ಗವೂ ಅಲ್ಲದ ದರ ನಿಗದಿಪಡಿಸಿರುವ ಹಾಪ್ಕಾಮ್ಸ್ ವೈವಿಧ್ಯಮಯ ಮಾವಿನಹಣ್ಣುಗಳನ್ನು ಸವಿಯುವ ಅವಕಾಶ ಕಲ್ಪಿಸಿದೆ.

ಮಾವು ಮಾತ್ರವಲ್ಲ ವಿವಿಧ ಬಗೆಯ ಹಲಸಿನ ಹಣ್ಣಿನ ಮಳಿಗೆಗಳೂ ಅಲ್ಲುಂಟು. ಹಲಸು ಮತ್ತು ಮಾವನ್ನು ಏಕಕಾಲಕ್ಕೆ ಸವಿದು, ಚಪ್ಪರಿಸಿದ ಜನ ಖರೀದಿಸಿ ಮನೆಯತ್ತ ಸಾಗಿದರು.

ರಾಮನಗರ, ಕನಕಪುರ ಸೇರಿದಂತೆ ದೂರದ ಊರುಗಳಿಂದ ಬಂದಿರುವ ವ್ಯಾಪಾರಿಗಳು ತಮ್ಮ ವ್ಯಾಪ್ತಿಯಲ್ಲಿನ ವೈವಿಧ್ಯಮಯವಾದ ಹಣ್ಣುಗಳನ್ನು ಮಾರಾಟಕ್ಕೆ ತಂದಿರಿಸಿದ್ದಾರೆ.

ಇಲ್ಲಿನ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಹಾಗೂ ಸಾವಯವದ ಬಗೆಯಲ್ಲಿ ಹಣ್ಣು ಮಾಡಿರುವುದು ವಿಶೇಷ. ಮಾತ್ರವಲ್ಲ, ಯಾವುದೇ ಬಗೆಯ ರಾಸಾಯನಿಕವನ್ನೂ ಬಳಸಿಲ್ಲ ಎಂದು ವ್ಯಾಪಾರಸ್ಥರು ಮಾತ್ರವಲ್ಲ ತೋಟಗಾರಿಕಾ ಇಲಾಖೆಯ ಅಧಿಕಾರಿಗಳೂ ಹೇಳುತ್ತಾರೆ.

ಕೇವಲ ಮಾವು ಮತ್ತು ಹಲಸು ಮಾತ್ರವಲ್ಲ, ಮಂಗೋಸ್ಟಿನ್, ರಾಂಭೂಟಾನ್, ಬೆಣ್ಣೆ ಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣುಗಳ ಹಾಗೂ ವಿವಿಧ ಬಗೆಯ ತಳಿಗಳ ಗಿಡಗಳೂ ಅಲ್ಲಿದ್ದವು. ರೈತರು, ಮಾವುಪ್ರಿಯರು ಈ ಗಿಡಗಳನ್ನು ಖರೀದಿಸಲು ಇಲ್ಲಿ ಅವಕಾಶ ಇದೆ. ಶಾಸಕ ಡಾ.ಮಂತರ್ಗೌಡ ಮೇಳ ಉದ್ಘಾಟಿಸಿ, ವಿವಿಧ ಬಗೆಯ ಮಾವು, ಹಲಸು ಸವಿದರು. ಬೆಳೆಗಾರರೊಂದಿಗೆ ಸಂವಾದ ನಡೆಸಿದರು. ವೈವಿಧ್ಯಮಯವಾದ ಮಾವಿನ ಕುರಿತು ಮಾಹಿತಿ ಪಡೆದುಕೊಂಡರು.

ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ.ರಾಜೇಶ್, ಮಡಿಕೇರಿ ಹಾಪ್ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಚಟ್ರಂಡ ಲೀಲಾ ಮೇದಪ್ಪ, ಕೆ.ಎಂ.ಮನೋಹರ್, ಸುವಿನ್ ಗಣಪತಿ, ಮನು ಮಹೇಶ್, ಪೂವಪ್ಪ ನಾಯ್ಕ, ಉಮೇಶ್ ರಾಜಾ ಅರಸ್, ಸುಧೀರ್, ಕಾಂಗೀರ ಸತೀಶ್, ಬಿ.ಎ.ಹರೀಶ್, ವ್ಯವಸ್ಥಾಪಕ ನಿರ್ದೇಶಕ ಮುತ್ತಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಷ್ಮಾ, ನಗರಸಭಾ ಸದಸ್ಯ ಸತೀಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಶಶಿಧರ, ಹಿರಿಯ ಸಹಾಯಕ ನಿರ್ದೇಶಕ ಪಣೀಂದ್ರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1871906410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.